ಶಿಕ್ಷಕರನ್ನು ಗೌರವಿಸುವದು ಎಲ್ಲರ ಕರ್ತವ್ಯ

0
20
loading...

ರಾಮದುರ್ಗ 15- ದೇಶದ ಸಮಗ್ರ ಅಭಿವೃದ್ದಿಗೆ  ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಶಿಕ್ಷಕರಿಲ್ಲದೇ ಯಾವದೇ ಕ್ಷೇತ್ರ ಬೆಳೆಯಲು ಸಾಧ್ಯವಿಲ್ಲ. ಶಿಕ್ಷಕರನ್ನು ಗೌರವಿಸುವದು ಎಲ್ಲರ ಕರ್ತವ್ಯ ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಇಲ್ಲಿಯ ಲಯನ್ಸ್ ಸಂಸ್ಥೆ ಹಾಗೂ ಲಯನ್ಸ್ ಲೇಡೀಜ ಅಕ್ಸಿಲರಿ ಸಂಸ್ಥೆ ಸಂಯುಕ್ತವಾಗಿ ಏರ್ಪಡಿಸಿದ್ದ ಸಿಕ್ಷಕರ ದಿನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ ಜಗತ್ತಿನಲ್ಲಿ ಗುರು ಸ್ಥಾನ ಶ್ರೇಷ್ಠವಾದುದು ಎಂದರು.

ಅತಿಥಿ ಉಪನ್ಯಾಸಕರಾಗಿದ್ದ ಪ್ರೊ. ಎಸ್. ಲೇಪಾಕ್ಷಿ, ವಿದ್ಯಾರ್ಥಿಗಳನ್ನು ಶಿಕ್ಷಕರು ಪ್ರೀತಿಯಿಂದ ಕಾಣಬೇಕು. ಪಾಠ ಬೋಧನೆ ಜತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕ್ಕತಿ, ಒಳ್ಳೆಯ ಆಚಾರ ವಿಚಾರಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.

ನಿರಂತರ ಅಧ್ಯಯನ ಪ್ರವೃತ್ತಿ ಬೆಳೆಸಿಕೊಂಡು ವಿದ್ಯಾರ್ಥಿಗಳಿಗೆ ಪಾಠ ಮಾಡಿದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್. ಭಜಂತ್ರಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಆದುನಿಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.                                ಬೆಂಬಳಗಿ ಕಾಲೇಜಿನ ಪ್ರೊ. ರಾಜಶ್ರೀ ಗುದಗನವರ, ಸುರೇಬಾನ ಎಸ್.ಎಫ್.ಎಸ್. ಎಸ್. ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಎ.ಎಸ್. ಕುಮಠೆ, ನೇತಾಜಿ ಸುಭಾಷಚಂದ್ರಭೋಸ ಪ್ರೌಢ ಶಾಲೆಯ ಸಿಕ್ಷಕಿ ಆರ್.ಬಿ. ಜಮಖಾನೆ, ರೇವಡಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯ ಎಂ.ಎನ್. ಅಂಬಿಗೇರ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಂ. 3ರ ಶಿಕ್ಷಕಿ ಸಿ.ಕೆ. ಸಂಗಟಿ ಅವರನ್ನು ಸಂಸ್ಥೆಯ ಪರವಾಗಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ, ಶಾಸಕರು ಸನ್ಮಾನಿಸಿದರು. ಡಾ. ಎಸ್.ಎಸ್. ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಜಿಲ್ಲಾ ಚೇರಮನ್ ವಿಜಯ ಶೆಟ್ಟಿ, ಖಜಾಂಚಿ ಪಾಲರೇಶಾ ವೇದಿಕೆ ಮೇಲಿದ್ದರು.

ಡಾ. ಎಸ್.ಎಸ್. ಕುಲಕರ್ಣಿ ಸ್ವಾಗತಿಸಿದರು. ಆರ್.ವೈ. ಮೇತ್ರಿ ಧ್ವಜವಂದನೆ ಸಲ್ಲಿಸಿದರು. ಪ್ರೊ. ಸುರೇಶ ಗುದಗನವರ ಪರಿಚಯಿಸಿದರು. ಎಂ.ಎಸ್.  ಜಂಗವಾಡ  ನಿರೂಪಿಸಿದರು ಬಿ.ಎಲ್. ಸಂಕನಗೌಡರ ವಂದಿಸಿದರು.

loading...

LEAVE A REPLY

Please enter your comment!
Please enter your name here