ಶಿವಚನಗಳ ಆಳಕ್ಕೆ ಇಳಿದು ನೋಡುವಂತ ಕಾರ್ಯ ಆಗಬೇಕುಷಿ

0
27
loading...

ಧಾರವಾಡ 22- ವಚನಗಳ ಆಳಕ್ಕೆ ಇಳಿದು ನೋಡುವಂತ ಕಾರ್ಯ ಆಗಬೇಕು, ಅಂದಾಗ ಮಾತ್ರ ಆ ಸಂದರ್ಭದೊಳಗೆ ಮಾಡಿದ ವಚನದ ಪ್ರತಿ ಪದವು ನೂರೆಂಟು ಇತಿಹಾಸವನ್ನು ತೆರೆದಿಡ ಬಲ್ಲದು. ಆದರೆ ವಚನಗಳನ್ನೂ ಒಂದಿಷ್ಟು ಹಾಡಲಿಕ್ಕೆ, ಒಂದಿಷ್ಟು ಭಾಷ ಣಕ್ಕೆ ಬಳಸುತ್ತೇವೆ ವಿನಹ ಅವುಗಳ ಅರ್ಥ ತಿಳಿದುಕೊಂಡು ನಡೆಯದೇ ಹೋಗುತ್ತಿರುವುದು ಖೇದಕರ ಎಂದು ಮುರಕವಾಡ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ. ಟಿ. ಸಿ. ಮಲ್ಲಾಪುರಮಠ ಹೇಳಿದರು. ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಚಂದ್ರಶೇಖರ ಚೌಶೆಟ್ಟಿ ದತ್ತಿ ಅಂಗವಾಗಿ ಹಮ್ಮಿಕೊಂಡ ಉಪನ್ಯಾಸ ಕಾರ್ಯಕ್ರಮದಲ್ಲಿ ಶಿವಚನಗಳಲ್ಲಿ ವಿಜ್ಞಾನಳಿಳಿ ವಿಷಯದ ಮೇಲೆ ಮಾತನಾಡು ತ್ತಿದ್ದರು. ಮುಂದು ವರೆದು ಮಾತ ನಾಡಿದ ಅವರು ವಚನ ಕಾರರು ವಿಜ್ಞಾನ ಮೀರಿ ಜ್ಞಾನ ಹೊಂದಿದ್ದರು. ವಚನಕಾರರು ಜೀವದ ಉಗಮದ, ಹಗಲು ರಾತ್ರಿಯ ಬಗ್ಗೆ ನರಮಂಡಲ ಕುರಿತು ಹೇಳಿದ್ದು ಇಂದು ವಿಜ್ಞಾನ ಒಪ್ಪಿಕೊಂಡಿದೆ.ಪ್ರಭುಲಿಂಗ ವಚನಗಳಲ್ಲಿ ಬರುವ ಬೆಳಕಿನ ಚಲನದ ಬಗ್ಗೆ, ಚನ್ನಬಸವಣ್ಣನವರ ವಚನಗಳಲ್ಲಿ ಬರುವ ಬ್ರಹ್ಮಾಂಡದ ಅಂದರೆ ಗ್ಯಾಲಾಕ್ಸಿಗಳ ಬಗ್ಗೆ ಮಾನವ ಉಗಮದ ಕುರಿತು ತಿಳುವಳಿಕೆ ನೀಡುತ್ತವೆ ಎಂದರು. ಶರಣರ ವಚನಗಳನ್ನು ವಿಭಿನ್ನ ನೆಲೆಯಲ್ಲಿ ನಿಂತು ಅಧ್ಯಯನ ಮಾಡುವ ಕಾರ್ಯ ಆಗಬೇಕು ಎಂದ ಮಲ್ಲಾಪೂರಮಠ ವಚನಕಾರರು ವಿಶೇಷವಾಗಿ ಪರಿಸರ ಹಾಗೂ ಮಾನವ ಶರೀರ ವಿಜ್ಞಾನವನ್ನು ವಿಶೇಷವಾಗಿ ಹೊಂದಿದ್ದರು ಎಂದರು. ವಚನಕಾರರು ಸುಮ್ಮನೇ ಬರಿಯಲಿಲ್ಲ. ಅನುಭವ ಕಂಡುಂಡು ವಚನ ಸೃಷ್ಟಿಸಿದ್ದಾರೆ. ಒಂದೊಂದು ವಚನವು ಜಗತ್ತಿನ ಶ್ರೇಷ್ಠ ಪ್ರಶಸ್ತಿ ಪಡೆಯ ಬಲ್ಲವಂತವುಗಳಾಗಿವೆ. ಇಂದು ಯುವಕರಲ್ಲಿ ವಚನಗಳಲ್ಲಿ ಆಸಕ್ತಿ ಇಲ್ಲದಾಗಿದೆ. ಹಣದ ಬೆನ್ನು ಹತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳಿಗೆ ವಚನಗಳ ಅರ್ಥವನ್ನು ತಿಳಿದುಕೊಳ್ಳುವಂತಹ ಮತ್ತು ಅಧ್ಯಯನ ಮಾಡುವಂತೆ ಪ್ರೇರೇಪಿಸಬೇಕು ಎಂದರು.

ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತ ನಾಡಿದ, ಡಾ. ಎ. ಸಿ. ಅಲ್ಲಯ್ಯನವರ ಮಠ ವಚನಗಳು ಸಾಮಾನ್ಯ ಜನರಿಗೆ ಜೀವ ಜಲ ದಂತಿವೆ. ವಚನಕಾರರು ಸಮಾಜದ ಎಲ್ಲ ವರ್ಗದ ಜನರ ಬದುಕಿನ ಬಗ್ಗೆ ಹೇಳುತ್ತಾ ಅವರ ಜೀವನ ಕ್ರಮಕ್ಕೆ ಮಾರ್ಗದರ್ಶನ ಮಾಡಿದ್ದು ಅಂದಿನಿಂದ ಇಂದಿನ ವರೆಗೂ ಅನ್ವಯ ವಾಗುತ್ತಿರು ವದು ವಚನಗಳ ಮಹತ್ವ ಎಷ್ಟು ಎಂಬುದು ಗೊತ್ತಾಗುತ್ತದೆ ಎಂದರು. ಪರಿಸರ ರಕ್ಷಣೆ ಬಗ್ಗೆ ವಚನಗಳಲ್ಲಿ ಹೇಳಿದ್ದಾರೆ. ಜೀವನ ಸೌಂದರ್ಯ ಹೇಗಿರಬೇಕು ಎಂಬುದರ ಬಗ್ಗೆ ವಚನಗಳ ಮೂಲಕ ತಿಳಿಹೇಳುವ ಕಾರ್ಯ ಮಾಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ಮೋಹನ ನಾಗಮ್ಮನವರ ಮಾತನಾಡಿದರು. ದತ್ತಿ ದಾನಗಳಾದ ವಿಶ್ವನಾಥ ಚೌಶೆಟ್ಟಿ ವೇದಿಕೆಯಲ್ಲಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು

 

loading...

LEAVE A REPLY

Please enter your comment!
Please enter your name here