ಶ್ರೀನಿವಾಸರೆಡ್ಡಿ ಲಾಕರ್ದಲ್ಲಿ 14 ಕೆಜಿ ಚಿನ್ನ ಪತ್ತೆ

0
15
loading...

ಬಳ್ಳಾರಿ, ಸೆ. 17: ಹೈದರಾಬಾದ್ದಲ್ಲಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದ ಓಬಳಾಪುರಂ ಮೈನಿಂಗ್ ಕಂಪನಿ ಎಂ.ಡಿ. ಶ್ರೀನಿವಾಸ ರೆಡ್ಡಿವಯವರನ್ನು ಇಂದು ಸಿಬಿಐ ಅಧಿಕಾರಿಗಳನ್ನು ಬಳ್ಳಾರಿಗೆ ಕರೆದುಕೊಂಡು ಬಂದು ಅವರು ವಹಿವಾಟು ನಡೆಸುತ್ತಿದ್ದ ಎಕ್ಸಸ್ ಬ್ಯಾಂಕಿನ ಅವರ ಹೆಸರಿನಲ್ಲಿರುವ ಲಾಕರ್ಗಳನ್ನು ಶೋದಿಸುವ ಕಾರ್ಯ ಆರಂಭಿಸಿದ್ದಾರೆ. ಅವರ ಹೆಸರಿನಲ್ಲಿ 8 ಲಾಕರ್ ಇದ್ದು ಈಗಾಗಲೇ 4 ಲಾಕರ್ಗಳ ಪರೀಶೀಲನೆಯಕಾರ್ಯ ಮುಕ್ತಾಗೊಂಡಿದ್ದು ಉಳಿದ ಲಾಕರ್ಗಳ ಪರೀಶೀಲನೆ ಕಾರ್ಯ ಮುಂದುವರೆದಿದೆ.

ಇಂದು ವಶಪಡಿಸಿಕೊಂಡಿರುವ ಲಾಕರ್ಗಳಲ್ಲಿ 60 ಕೋಟಿಮೌಲ್ಯದ ಆಸ್ತಿಯ ವಿವರಗಳು ದೊರೆತಿದ್ದು, 14 ಕೆ.ಜಿ. ಚಿನ್ನ ಹಾಗೂ 2.60 ಕೋಟಿ ರೂಪಾಯಿ ನಗದು ಹಣ ದೊರೆತಿದೆ. ಒಟ್ಟು 54 ಸಿಬಿಐ ಅಧಿಕಾರಿಗಳು ಬಳ್ಳಾರಿ ನಗರಕ್ಕೆ ಆಗಮಿಸಿದ್ದಾರೆ. ಎಕ್ಸ್ಸ್ ಬ್ಯಾಂಕಿನ ಜೊತೆಗೆ ಓಎಂಸಿ ಗಣಿ ಪ್ರದೇಶದಲ್ಲಿ ಇರುವ ಹಿರೇಹಾಳ್ ಎಸ್.ಬಿ.ಐ.ಬ್ಯಾಂಕಿನಲ್ಲಿಯೂ ಶೋಧನಾ ಕಾರ್ಯವನ್ನು ನಡೆಸಲಾಗಿದೆ. ಇದರ ಜೊತೆಗೆ ರೆಡ್ಡಿಯವರ ಆಪ್ತರೆಂದೆ ಹೇಳಲಾದ ಆನಂದ್ ಚೌಧರಿ ಒಡೆತನದ ಕುರುಗೋಡು ಬಳಿ ಇರುವ ದೊಡ್ಡ ಬಸವೇಶ್ವರ ರೈಸ್ ಮಿಲ್ ಮೇಲೆ ದಾಳಿಯನ್ನು ಮಾಡಲಾಗಿದ್ದು, ಅಲ್ಲಿಯೂ ದಾಖಲೆಗಳ ಪರೀಶೀಲನೆ ನಡೆದಿದೆ. ರಾಮಗೋಪಾಲ್ ಅವರ ಅಳಿಯನ ಅನಂತಪುರ ನಿವಾಸದ ಮೇಲೆ ಹಾಗೂ ವಾಹನ ಚಾಲಕರ ಮನೆಗಳ ಮೇಲೆ ದಾಳಿಯನ್ನು ಮಾಡಲಾಗಿದೆ.

ಬ್ಯಾಂಕುಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿರುವದರಿಂದ ಆ ಬ್ಯಾಂಕ್ಗಳಿಗೆ ಬಂದ ಇತರ ಗ್ರಾಹಕರಿಗೆ ಸಾಕಷ್ಟು ಕಿರಿಕಿರಿಯಾಗಿದೆ. ಒಂದು ಲಾಕರ್ ಕೀ ಕಳೆದು ಹೋಗಿದ್ದು ರಿಪೇರಿಯ ಮೂಲಕ ಆ ಲಾಕರ್ ತೆರೆಯುವ ಕಾರ್ಯವನ್ನು ಮಾಡಲಾಗಿದೆ. ಎಕ್ಸೆಸ್ ಬ್ಯಾಂಕಿನ ಮ್ಯಾನೇಜರ್ ಸೇರಿದಂತೆ ಬ್ಯಾಂಕಿನ ವಿವಿಧ ಅಧಿಕಾರಿಗಳು ಅಗತ್ಯ ವಿವರಗಳನ್ನು ನೀಡಿದ್ದಾರೆ. ಯಾವ ವರ್ಷದಲ್ಲಿ ಶ್ರೀನಿವಾಸ ರೆಡ್ಡಿ ಬ್ಯಾಂಕ್ ಖಾತೆ ಆರಂಭಿಸಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಖಾತೆಗಳಲ್ಲಿ ಎಷ್ಟು ಠೇವಣಿ ಇಡಲಾಗಿದೆ. ಯಾವ ರೀತಿ ಹಣದ ವಹಿವಾಟು ನಡೆಸಲಾಗಿದೆ ಎಂಬ ಎಲ್ಲ ಮಾಹಿತಿಗಳನ್ನು ಸಿಬಿಐ ಅಧಿಕಾರಿಗಳು ಬ್ಯಾಂಕ್ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ.

ಮೂಲಗಳ ಪ್ರಕಾರ ಶ್ರೀನಿವಾಸ ರೆಡ್ಡಿ ಕೆಲವು ಬೇನಾಮಿ ವ್ಯಕ್ತಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿರುವದನ್ನು ಅಧಿಕಾರಿಗಳು ಪತ್ತೆ ಹೆಚ್ಚಿದ್ದಾರೆ. ಈ ಖಾತೆಗಳಿಂದ ಕೆಲವು ರಾಷ್ಟ್ತ್ರೀಕೃತ ಬ್ಯಾಂಕುಗಳಿಗೆ ಹಣ ರವಾನೆಯಾಗಿರುವದನ್ನು ಪತ್ತೆ ಮಾಡಲಾಗಿದೆ. ಅಷ್ಟೆ ಅಲ್ಲ ಈ ರಾಷ್ಟ್ತ್ರೀಕೃತ ಬ್ಯಾಂಕಿನಿಂದ ವಿದೇಶಿ ಬ್ಯಾಂಕುಗಳಿಗೆ ಹಣ ಹೋಗಿರುವದನ್ನು ಸಿಬಿಐ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ಇದೇ ತಿಂಗಳ 5 ರಂದು ಜನಾರ್ಧನ ರೆಡ್ಡಿ ಹಾಗೂ ಶ್ರೀನಿವಾಸರೆಡ್ಡಿಯವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಹೈದರಾಬಾದಕ್ಕೆ ಕರೆದುಕೊಂಡು ಹೋಗಿದ್ದರು. ಇಂದು ಶ್ರೀನಿವಾಸ ರೆಡ್ಡಿಯವರನ್ನು ಪ್ರತ್ಯೇಕ ವಾಹನದಲ್ಲಿ ಬಿಗಿ ಭದ್ರತೆಯೊಂದಿಗೆ ಬಳ್ಳಾರಿಗೆ ಕರೆದುಕೊಂಡು ಬಂದಿದ್ದಾರೆ. ಇವರಿಗೆ ಪೊಲೀಸರು ಭಾರಿ ಭದ್ರತೆಯನ್ನು ಒದಗಿಸಿದ್ದು ಮರಳಿ ಶ್ರೀನಿವಾಸ ರೆಡ್ಡಿಯವರನ್ನು ಹೈದರಾಬಾದಿಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ತಿಳಿದು ಬಂದಿದೆ.

loading...

LEAVE A REPLY

Please enter your comment!
Please enter your name here