ಸಮುದಾಯ ಆರೋಗ್ಯ ದಿನ

0
26
loading...

ಗೋಕಾಕ, ಸೆ.24;- ತಾಲೂಕಿನ ಬಳೋಬಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಸಮುದಾಯ ಆರೋಗ್ಯ ದಿನಾಚರಣೆಯನ್ನು ಆಯೋಜಿಸಲಾಗಿತ್ತು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಎಸ್.ಬಿ.ಸಿಂಗ್ಯಾಗೋಳ ಹಾಗೂ ಡಾ. ಸಿ.ಕೆ.ಪಾಟೀಲ ಈ ಸಂದರ್ಭದಲ್ಲಿ ಮಾತನಾಡಿ, ಗ್ರಾಮದಲ್ಲಿ ಏಳು ಮಾರಕ ರೋಗಗಳ ಲಸಿಕೆಯಿಂದ ಯಾವದೇ ಮಕ್ಕಳು ವಂಚಿತವಾಗಬಾರದು ಮತ್ತು ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗು ಆರೋಗ್ಯವಾಗಿ ಇರಲು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಶ್ರಮಿಸುತ್ತಿದೆ.

ಅಲ್ಲದೇ ಗ್ರಾಮದ ಬೀದಿ ಬೀದಿಗಳಲ್ಲಿಯೂ ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ನಾಗರಿಕರಿಗೆ ಮನವಿ ಮಾಡಿದರು.

ಎಲ್ಲರ ಉತ್ತಮ ಆರೋಗ್ಯಕ್ಕಾಗಿ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದು, ಆರೋಗ್ಯ ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸುವ ನಿಟ್ಟಿನಲ್ಲಿ ಸಹಕರಿಸಿದರೆ ಹಳ್ಳಿಯಲ್ಲಿ ಎಲ್ಲ ಮಕ್ಕಳಿಗೂ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡಲಾಗುತ್ತದೆ. ಈ ಲಸಿಕೆಯಿಂದ ಯಾವುದೇ ಮಕ್ಕಳು ವಂಚಿತರಾಗದಂತೆ ಸಮುದಾಯದ ಜನರು ಸಹಕಾರ ನೀಡಬೇಕೆಂದು ಸಾರ್ವಜನಿಕರಿಗೆ ತಿಳಿಸಿದರು.

ಇದು ಕೇವಲ ಆರೋಗ್ಯ ಇಲಾಖೆಯ ಜವಾಬ್ದಾರಿ ಅಷ್ಟೇ ಅಲ್ಲದೇ, ಸಮುದಾಯದ ಜವಾಬ್ದಾರಿಯೂ ಸಹ ಮುಖ್ಯವಾಗಿದೆ ಎಂದು ಹೇಳಿ ಸಮುದಾಯ ಆರೋಗ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿ ಹೇಳಿದರು.

ತಾಲ್ಲೂಕಾ ಪಂಚಾಯತ ಸದಸ್ಯೆ ಸುಜಾತಾ ಹುಡೇದ, ಗ್ರಾ.ಪಂ.ಅಧ್ಯಕ್ಷ ಬಸಲಿಂಗಪ್ಪ ತೆಳಗಡೆ, ಗ್ರಾ.ಪಂ.ಮಾಜಿ ಅಧ್ಯಕ್ಷ ಶವಪುತ್ರ ಚಿಮ್ಮಡ, ಗ್ರಾಮದ ಯುವ ಧುರೀಣ ಸುನೀಲ ಈರೇಶನ್ನವರ, ಶುಶ್ರೂಷಕಿ ಲಲಿತಾ ಕಂಕಣವಾಡಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಎನ್.ಎಸ್.ಎಫ್ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡಿದರು. ಡಿ.ಕೆ.ಪತ್ತಾರ ಸ್ವಾಗತಿಸಿದರು. ಎ.ಎಸ್.ತಹಶೀಲ್ದಾರ ವಂದಿಸಿದರು.

 

loading...

LEAVE A REPLY

Please enter your comment!
Please enter your name here