ಸರಕಾರ ಶೀಘ್ರ ಎಚ್ಚೆತ್ತುಕೊಳ್ಳಿ-ಡೊಂಗರಗಾಂವ

0
15
loading...

 

ಅಥಣಿ 28- ಸರಿಯಾಗಿ ಸರಾಸರಿ ಬೇಡ ಆಗಬೇಕಾದಷ್ಟು ಮಳೆ ಅಥಣಿ ತಾಲೂಕಿನಲ್ಲಿ ಆಗದೇ ಇರುವದರಿಂದ ಸರಕಾರ ತಡ ಮಾಡದೇ ಬರಗಾಲ ಅಥಣಿ ಎಂದು ಘೋಷಿಸದೇ ಅನಿವಾರ್ಯವಿಲ್ಲ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಪತ್ರಕರ್ತರ ಸಭೆಯಲ್ಲಿ ಬರಗಾಲ ಸಾರಲು ವಿವರವಾಗಿ ವಿಷಯ ವ್ಯಕ್ತಪಡಿಸಿದರು.

ಬರಗಾಲ ಪರಿಸ್ಥಿತಿ ಮತ್ತು ಪರಿಹಾರ

ಅಥಣಿ ತಾಲೂಕಿನಲ್ಲಿ ವಿಪರೀತ ಮಳೆಯ ಕೊರತೆಯಿಂದಾಗಿ ಮುಂಗಾರು ಸಂಪೂರ್ಣ ವಿಫಲವಾಗಿದ್ದು, ಹಿಂಗಾರು ಸಹಿತ ಬಹುತೇಕ ವಿಫಲವಾಗುವ ಲಕ್ಷಣಗಳು ವಿಶೇಷವಾಗಿ ತಾಲೂಕಿನ ಪೂರ್ವ ಮತ್ತು ಉತ್ತರ ಭಾಗದ ರೈತ ಹಾಕಾರ್ಮಿಕರ ಉಪಜೀವನ ಚಿಂತಾಕ್ರಾಂತವಾಗಿದೆ. ಕರಷಿ ಉತ್ಪಾದನೆ ಇಲ್ಲದೇ, ಆದಾಯವಿಲ್ಲದೇ, ದನಗಳಿಗೆ ಮೇವಿಲ್ಲದೇ ಮತ್ತೊಮ್ಮೆ ಜನರು ಗುಳೇ ಹೋಗುವ ಪ್ರಸಂಗ ಬಂದಿದೆ. ತೋಟಗಾರಿಕೆ ಬೆಳಗಳನ್ನು ಬೆಳೆಯುವ ರೈತರು ಇಲ್ಲಿಯವರೆಗೆ ಸಾಲ ಮಾಡಿ ಬೆಳೆಸಿದ ಬೆಳೆಯನ್ನು ಉಳಿಸಲು ಹೋರಾಟ ಮಾಡಬೇಕಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿರುವ ದ್ರಾಕ್ಷಿ ಬೆಳೆಗೆ ನೀರಿಲ್ಲದೇ ಫಲ ಪಡೆಯುವ ಛಾಟ್ನಿ ಮಾಡುವದು ಅಸಾಧ್ಯವಾಗಿದೆ. ಮುಂದಿನ ಆದಾಯವಿಲ್ಲದೇ ಭಯಂಕರ ಭವಿಷ್ಯ ಎದುರಿಸುವಂತಾಗಿದೆ. ರೈತರು ಆತ್ಮಹತ್ಯೆಗೆ ಮುಂದಾದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಮಾಜಿ ಶಾಸಕ ಸಹಜಹಾನ ಡೊಂಗರಗಾವ ಹೇಳಿದರು.

ಇಷ್ಟೆಲ್ಲಾ ಆದರೂ ಸರಕಾರದಿಂದ ಇಲ್ಲಿಯವರೆಗೆ ಪೂರಕವಾದ ಮುಂಜಾಗ್ರತಾ ಕ್ರಮ ಜರುಗಿಸದೇ ಇರುವದು ದುರದೃಷ್ಟಕರ. ಇನ್ನಾದರೂ ಸರ್ಕಾರ ಕೂಡಲೇ ಎಚ್ಚೆತ್ತು ಈ ಕೆಳಗಿನ ಕ್ರಮಗಳನ್ನು ಜರುಗಿಸಲು ಪ್ರಯತ್ನಿಸಬೇಕೆಂದು ತಾಲ್ಲೂಕಿನ ಜನತೆಯ ಪರವಾಗಿ ಆಗ್ರಹಿಸುತ್ತೇನೆ ಎಂದು ಪತ್ರಕರ್ತರಿಗೆ ತಿಳಿಸಿದರು.

ಕಡುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ತೀವ್ರವಾಗಿ ಕೊಳವೆ ಬಾವಿ ತೋಡಿ ವ್ಯವಸ್ಥೆ ಮಾಡುವದು.

ದನಗಳಿಗೆ ಮೇವಿನ ವ್ಯವಸ್ಥೆ ಮಾಡುವದು.

ಕೂಲಿ ಕಾರ್ಮಿಕರಿಗೆ ಬರ ಪರಿಹಾರ ಕಾಮಗಾರಿ ಪ್ರಾರಂಭಿಸುವದು.

ತೋಟಗಾರಿಕಾ ಬೆಳೆಗಳ ರಕ್ಷಣೆಗಾಗಿ ಟ್ಯಾಂಕರ ಮುಖಾಂತರ ನೀರು ಪೂರೈಸಲು ರೈತರಿಗೆ ಸಹಾಯ ಮಾಡಬೇಕು.

ಮುಂಜಾಗೃತೆ: ಮಳೆಗಾಲ ಕೊನೆಯ ಅಂಚಿನಲ್ಲಿರುವ ಈಗ ಅಪ್ಪಿತಪ್ಪಿ ಒಂದು ಮಳೆಯಾದರೂ ಮುಂದಿನ ಮಳೆಗಾಲದವರೆಗೆ ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡುವದು ಅಸಾಧ್ಯವಾಗುತ್ತದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಆಸರೆಗಾಗಿಯೇ ಕರಿ ಮಸೂತಿ ಯಾತ ನೀರಾವರಿ ಕಾಮಗಾರಿ ಮಂಜೂರು ಪಡೆದು ಪ್ರಾರಂಭಿಸಲಾಯಿತು. ಮೂಲ ಯೋಜನೆಯ ಪ್ರಕಾರ ಈ ಮುಂಚೆಯೇ ಈ ಯೋಜನೆ ಪೂರ್ಣಗೊಂಡು ಕಾಲುವೆಗಳಲ್ಲು ನೀರು ಹರಿಸಬೇಕಿತ್ತು. ಆದರೆ ವಿದ್ಯುತ್ ಪಂಪ್ಸೆಟ್ ಅಳವಡಿಕೆಯಲ್ಲಿ ಆಗಿರುವ ವಿಳಂಬ ವಿದ್ಯುತ್ ಪೂರೈಕೆಗಾಗಿ ಬೇಕಾಗಿರುವ ಲೈನ್ ಮತ್ತು ಗೋಪುರ ಪೂರ್ಣಗೊಳಿಸುವಲ್ಲಿ ಆದ ವಿಳಂಬ, ಅಲ್ಲದೇ ಪ್ರಮುಖವಾಗಿ ಕರಿಮಸೂತಿ ಹತ್ತಿರ  ನೀರನ್ನು ಎತ್ತುವ ಮುಖ್ಯ ಪೈಪ್ಲೈನ್ ಕಾರ್ಯ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿ ಮರು ಟೆಂಡರ ಮಾಡುವಲ್ಲಿ ಆದ ವಿಳಂಬ, ಇತ್ಯಾದಿಗಳಿಂದ ಇಂದು ಕಾಲುವೆಗಳಲ್ಲಿ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ಅವರು ಪತ್ರಕರ್ತರ ಮುಂದೆ ವಿವರಿಸುತ್ತಿದ್ದರು. ಈಗಲೂ ಕಾಲ ಮಿಂಚಿಲ್ಲ. ಸರಲಾರ ಎಚ್ಚೆತ್ತುಕೊಳ್ಳಲಿ ಎಂದು ಸಲಹೆ ಮಾಡುವದಾಗಿ ಹೇಳಿದರು.

ಆದರೆ ಈ ಎಲ್ಲ ಕಾರ್ಯಗಳ ಕೊನೆಯ ಅಂಚಿನಲ್ಲಿಯೇ ಸರ್ಕಾರ ಮನಸ್ಸು ಮಾಡಿ ಇವುಗಳನ್ನು ಯುದ್ದೌಪಾದಿಯಲ್ಲಿ ಪೂರ್ಣಗೊಳಿಸಲು ಕ್ರಮ ಜರುಗಿಸಿದಲ್ಲಿ 2-3 ತಿಂಗಳಲ್ಲಿ ಕಾಲುವೆಗಳಲ್ಲಿ ನೀರು ಹರಿಸಲು ಸಾದ್ಯವಿದೆ. ಮುಂದುವರೆದು ಕರೆಗಳಲ್ಲಿ ಹಾಗೂ ರೈತರು ನಿರ್ಮಿಸಿದ ಹೊಂಡಗಳಲ್ಲಿ ನೀರು ತುಂಬಿದರೆ ದ್ರಾಕ್ಷಿ ಹಾಗೂ ಇತರೆ ತೋಟಗಾರಿಕಾ ಬೆಳೆಗಳನ್ನು ರಕ್ಷಿಸಲು ಹಾಗೂ ಕನಿಷ್ಠ ಉತ್ಪಾದನೆ ಪಡೆಯಲು ಸಾಧ್ಯ.

ಈ ಭಾಗದ ಜನಪ್ರತಿನಿಧಿಗಳು ಈ ಕುರಿತು ಸರ್ಕಾರದ ಹಾಗೂ ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆದು ಈ ದಿಸೆಯಲ್ಲಿ ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ತಾಲೂಕಿನ ಜನರ ಪರವಾಗಿ ಆಗ್ರಹಿಸುತ್ತೇನೆ ಎನ್ನುತ್ತಾ ಇದೇ ಅನೇಕ ಸಮಸ್ಯೆಗಳಿವೆ ಎಂದರು.

ನೆಮ್ಮದಿ ಕೆಡಿಸಿದ ನೆಮ್ಮದಿ ಕೇಂದ್ರಗಳು: ವಿವಿಧ ಕಾರಣಗಳಿಗಾಗಿ ರೈತರು ಹಾಗೂ ವಿದ್ಯಾರ್ಥಿಗಳು ಪಡೆಯಬೇಕಾದ ದಾಖಲೆಗಳನ್ನು ನೆಮ್ಮದಿ ಕೇಂದ್ರಗಳಿಗೆ ಖುದ್ದಾಗಿ ಬಂದು ಸಾಲಿನಲ್ಲಿ ನಿಂತು ದಿನವೀಡೀ ಕಾಯ್ದು ಪಡೆಯಬೇಕಾಗುತ್ತದೆ. ಇದರಿಂದ ರೈತರಿಗೆ, ವಿದ್ಯಾರ್ಥಿಗಳಿಗಾಗುವ ತೊಂದರೆ ಅಷ್ಟಿಷ್ಟಲ್ಲ. ತಮ್ಮ ಗ್ರಾಮಗಳಿಂದ ಆಗಮಿಸುವ ರೈತರು ದಾಖಲೆ ಪಡೆಯುವವರೆಗೆ ಶಿಕ್ಷೆ ಅನುಭವಿಸುವಂತೆ, ಒಂದು ದಿನದ ಎಲ್ಲ ಕಾರ್ಯಗಳು ಹೋಗಿ ಬರುವ ಖರ್ಚು, ಸಾಲಿನಲ್ಲಿ ತಾಸುಗಟ್ಟಲೇ ನಿಲ್ಲುವ ಯಾತನೆ, ನಾ ಮುಂದು, ತಾ ಮುಂದು ಹೊಡೆದಾಟ, ವಿದ್ಯುತ್ ಪೂರೈಕೆ ನಿಂತು ಹೋಗಿ ಕಾರ್ಯ ಸ್ಥಗಿತ, ಯಂತ್ರೌಪಕರಣ ಕೈ ಕೊಡುವುದು, ಅವಶ್ಯಕ ಸಾಮಗ್ರಿಗಳ ಕೊರತೆ, ವಾಪಸ್ ಹೋಗುವದು, ಪುನ: ಪುನ: ಪರದಾಟ ಒಟ್ಟಿನಲ್ಲಿ ಅವ್ಯವಸ್ಥೆಯ ದುಷ್ಪರಿಣಾಮ ಸಾರ್ವಜನಿಕರು ಅನುಭವಿಸುವಂತಾಗಿದೆ.

ನೆಮ್ಮದಿ ಕೇಂದ್ರಗಳಿಗೆ ಸತತವಾಗಿ ವಿದ್ಯುತ್ ಪೂರೈಕೆಯಾಗಬೇಕು. ಆ ರೀತಿ ಅನುಕೂಲ ಮಾಡಿರಿ. ಕಂಪ್ಯೂಟರ ಇತ್ಯಾದಿ ಉಪಕರಣಗಳು ಸ್ಥಗಿತಗೊಳ್ಳದಂತೆ ಮುಂಜಾಗ್ರತೆ ವಹಿಸುವದು ದುರಸ್ತಿಗಾಗಿ ಹೆಚ್ಚಿನ ವ್ಯವಸ್ಥೆ, ಹೆಚ್ಚುವರಿ ಕಂಪ್ಯೂಟರ್ಗಳು, ಅವಶ್ಯಕ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಸುವದು ವ್ಯವಸ್ಥೆಯಾಗಬೇಕೆಂದರು. ಒಟ್ಟಿನಲ್ಲಿ ಪಂಚಾಯತಿಗೊಂದು ಇಂತಹ ವ್ಯವಸ್ಥೆ ಹಾಗೂ ಸಿಬ್ಬಂದಿ ಒದಗಿಸಲು ಸೂಕ್ತ ಆದೇಶ ಹೊರಡಿಸುವದು.

ಜಿಲ್ಲಾಧಿಕಾರಿಗಳು ಈ ವಿಷಯದತ್ತ ಗಮನ ಹರಿಸಿ ಸೂಕ್ತ ವ್ಯವಸ್ಥೆಗೆ ಮುಂದಾಗಬೇಕೆಂದು ತಾಲೂಕಿನ ಜನತೆಯ ಪರವಾಗಿ ಒತ್ತಾಯಿಸುತ್ತೇವೆ ಎಂದು ಹೇಳಿದರು. ಈ ಸಮಯದಲ್ಲಿ ಕಾಂಗ್ರೆಸ್ ಮುಖಡರು ಕಾರ್ಯಕರ್ತರು ಉಪಸ್ಥಿತರುದ್ದರು.

loading...

LEAVE A REPLY

Please enter your comment!
Please enter your name here