ಸೋಮಶೇಖರ ರೆಡ್ಡಿ ಮೇಲೆ ಕ್ರಮಕ್ಕೆ ಆಗ್ರಹ

0
10
loading...

 

 

ಧಾರವಾಡ, ಸೆ.24: ಈ ಹಿಂದೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆದೇಶದ ಮೇರೆಗೆ ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸುತ್ತಿದ್ದ ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿ ಯು.ವಿ. ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ ಶಾಸಕ ಹಾಗೂ ಮಾಜಿ ಸಚಿವರಾದ ಜನಾರ್ಧನರೆಡ್ಡಿ ಮತ್ತು ಕರುಣಾಕರರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಅವರ ಮೇಲೆ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ ಕಾರಣದಿಂದ ಕ್ರಮ ಜರುಗಿಸಬೇಕು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಿಕೊಂಡು ಅವರಿಗೆ ಕನಿಷ್ಠ ಮೂರು ತಿಂಗಳು ಶಿಕ್ಷೆಯಾಗುವಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಮಾಜ ಪರಿವರ್ತನೆ ಸಂಸ್ಥೆಯ ಅಧ್ಯಕ್ಷರಾದ ಎಸ್.ಆರ್. ಹಿರೇಮಠ ಇಂದು ಇಲ್ಲಿ ಆಗ್ರಹಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೇವಲ ಜನಾರ್ಧನರೆಡ್ಡಿ ಅವರ ಮೇಲೆ ಮಾತ್ರ ಕ್ರಮ ತೆಗೆದುಕೊಂಡರೆ ಸಾಕಾಗುವದಿಲ್ಲ. 2004ರವರೆಗೆ ನಿರ್ದೇಶಕರಾಗಿ ಕಾರ್ಯ ಮಾಡಿದ ಕರುಣಾಕರ ರೆಡ್ಡಿ ಹಾಗೂ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಸೋಮಶೇಖರ್ ರೆಡ್ಡಿ ಹಾಗೂ ಗಣಿ ವ್ಯವಹಾರವನ್ನು ಜನಾರ್ಧನರೆಡ್ಡಿ ಅವರೊಂದಿಗೆ ಇಟ್ಟುಕೊಂಡಿದ್ದ ಶ್ರೀರಾಮುಲು ಅವರ ಮೇಲೆ ಕ್ರಮಗಳನ್ನು ಜರುಗಿಸಬೇಕು ಎಂದು ಹಿರೇಮಠ ಆಗ್ರಹಪಡಿಸಿದರು.

ನನ್ನ ದೂರಿನ ಆಧಾರದ ಮೇಲೆ ಸರ್ವೌಚ್ಚ ನ್ಯಾಯಾಲಯ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಸಾಕಷ್ಟು ಮಹತ್ವದ ತೀರ್ಪುಗಳನ್ನು ನೀಡಿದೆ. ಇದು ನಮ್ಮ ಹೋರಾಟಕ್ಕೆ ಜಯವಾಗಿದೆ ಎಂದು ಅವರು ಹೇಳಿದರು.

ನಮಗೆ ರೆಡ್ಡಿ ಕುಟುಂಬದ ಮೇಲೆ ಆಗಲಿ ಅಥವಾ ಅಕ್ರಮ ಗಣಿಗಾರಿಕೆಯನ್ನು ನಡೆಸಿದ ಇತರರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆದರೆ ಪರಿಸರಕ್ಕೆ ಹಾನಿ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೊಕ್ಕಸಕ್ಕ ಅಪಾರಹಾನಿ ಮಾಡಿ ತಾವು ಮಾತ್ರ ಕುಬೇರರಾಗಿ ಮೆರೆದ ಗಣಿ ದೊರೆಗಳ ಮೇಲೆ ಆಕ್ರೌಶವಿದೆ. ಅವರು ಮಾಡಿದ ತಪ್ಪಿಗಾಗಿ ಅವರಿಗೆ ಉಗ್ರ ಶಿಕ್ಷೆ ದೊರೆಯಬೇಕು. ಜೊತೆಗೆ ಪರಿಸರ ಹಾಳು ಮಾಡುವ ಜನರಿಗೆ ಇದೊಂದು ಪಾಠವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನಾನು ಈ ಕುರಿತು ಏಕಾಂಗಿಯಾಗಿ ಹೋರಾಟ ನಡೆಸಿ ಜಯ ಪಡೆದಿದ್ದೇವೆ ಎಂದು ಹಿರೇಮಠ ಹೇಳಿದರು. ನಮ್ಮ ಹೋರಾಟದಲ್ಲಿ ಅನೇಕ ನ್ಯಾಯವಾದಿಗಳು ಸಹಕಾರ ನೀಡಿದ್ದಾರೆ ಎಂದು ಅವರು ಸ್ಮರಿಸಿಕೊಡರು

loading...

LEAVE A REPLY

Please enter your comment!
Please enter your name here