ಸ್ಥಾಪನಾ ವರ್ಷದಿಂದಲೆ ಲಾಭಾಂಶ ನೀಡಿದ ಹೆಗ್ಗಳಿಕೆ ದಿವಾಣಮಾಳ

0
14
loading...

 

ಅಥಣಿ 28- ಸಹಕಾರ ಸಂಘಗಳು ಅದರಲ್ಲಿಯೂ ಸಾಮಾನ್ಯ ಬದುಕಿಗೆ ಸ್ಪಂದಿಸುವದಕ್ಕಾಗಿ ಸಹಕಾರಿ ಸಂಸ್ಥೆಗಳು ಆರ್ಥಿಕ ಶಕ್ತಿ ಕೇಂದ್ರಗಳಾಗಿ ಸೇವೆ ಸಲ್ಲಿಸಬೇಕೆಂಬ ಸದುದ್ದೇಶದಿಂದ ಆ ದಿಶೆಯಲ್ಲಿ ಅಂಬೆಗಾಲನ್ನಿಡುತ್ತಾ ಪ್ರಥಮ ವರ್ಷದಲ್ಲೇ ಲಾಭಾಂಶ ನೀಡಿದ ಹೆಗ್ಗಳಿಕೆ ನಮ್ಮ ಸಂಸ್ಥೆಯದಾಗಿದೆ ಹಾಗೂ ನಾಗರಿಕರ, ಗ್ರಾಹಕರ ಅನುಕೂಲಕ್ಕಾಗಿ ಈ ಸ್ವಾಂಪ ವ್ಯವಸ್ಥೆ ಸಹ ಮುಂದಿನ ತಿಂಗಳಿನಿಂದ ಸೇವೆನ್ನು ಪ್ರಾರಂಭಿಸಲಾಗುವದು ಎಂದು ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಸೌಹಾರ್ದ ಸಹಕಾರಿ ನಿ. ಅಥಣಿಯ ಅಧ್ಯಕ್ಷರಾದ ಶಿವಾನಂದ ದಿವಾನಮಾಳರವರು ಹೇಳಿದರು.

ಸ್ಥಳೀಯ ಶ್ರೀ ಮುರಘರಾಜೇಂದ್ರ ಶಿವಯೋಗು ವೀರಶೈವ ವಿದ್ಯಾಪೀಠದ ಶಾಲೆಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಘದ 2ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸಂಘದ ಸದಸ್ಯರ ಸ್ಪಂದನೀಯದಿಂದ ಹಾಗೂ ಸಕಾರಾತ್ಮಕ ಮನೋಭಾವದ ಬೆಳವಣಿಗೆಯಿಂದಾಗಿ 31-3-2011 ಕ್ಕೆ ರೂ. 20554374 ಗಳಷ್ಟು ದುಡಿಯುವ ಬಂಡವಾಳ ಹೊಂದಿ 42346 ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರ ಶೇರು ಹಣ 1524 ಲಕ್ಷ ರೂ. ಒಟ್ಟು 700 ಸದಸ್ಯರಿದ್ದಾರೆ. ವಾರ್ಷಿಕ ವಹಿವಾಟು  1459071286 ಆಗಿರುತ್ತದೆ ಎಂದರು. ಠೇವು 181.65 ಲಕ್ಷ ರೂ. ಸಾಲ 13014 ಲಕ್ಷ ರೂ. ಇರುವದು. ಸಾಲ ತೃಪ್ತಿಕರ ಇರುವದೆಂದರು.

ಪ್ರಾರಂಭದಲ್ಲಿ ವೀರಶೈವ ವಿದ್ಯಾಪೀಠದ ಡಿಎಡ್ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಸಹಕಾರ ಗೀತೆಯಾಯಿತು. ಉಪಾಧ್ಯಕ್ಷರಾದ ಹಣಮಂತ ಕಾಲಪಿ ಸ್ವಾಗತಿಸಿದರು. ಕಾರ್ಯದರ್ಶಿ ಹೇಮಲತಾ ರಾ. ಪಾಟೀಲರು ವಾರ್ಷಿಕ ವರದಿ ಸಲ್ಲಿಸಿದರು. ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಅನುಭವಪರ ಘಟನೆಗಳನ್ನು ವಿವರಿಸಿದರು. ಶಂಕರಣ್ಣ ತೇರದಾಳ, ಶಿವಪುತ್ರ ಯಾದವಾಡ, ಹಾಗೂ ಮುರಗೇಶ ಬಾನೆಯವರು ಮಾತನಾಡಿದರು.

ಈ ಸಮಯದಲ್ಲಿ ನಿರ್ದೇಶಕರಾದ ಸರ್ಪಭೂಷಣ ಶಿ. ಹಿರೇಮಠ, ಮಹಾದೇವ ಹಳ್ಳದಮಳ, ರಾಮನಗೌಡಾ ಸಂ. ಪಾಟೀಲ, ಮಹಾದೇವ ಶಂ. ಸೋನಕರ, ಚಿದಾನಂದ ಚಮಕೇರಿ , ಅಣ್ಣಪ್ಪಾ ಹೊನ್ನೊಳ್ಳಿ, ಸದಾಶಿವ ಬಡಕಂಬಿ, ಜ್ಯೌತಿಬಾ ಬಾಶಿಂಗಿ, ಶ್ರೀಮತಿ ಸುಲೋಚನಾ ಶಂ. ಕೋಳಿ, ಶಂಕರ ಕೋಳಿ, ತಮ್ರಮಣ್ಣಪ್ಪಾ ಪಾಟೀಲ, ವಿರುಪಾಕ್ಷ ಲಗಳಿ, ಅಣ್ಣಪ್ಪಾ ದಿವಾನಮಾಳಿ, ಲಕ್ಷ್ಮಣ ಗುಮಟಿ, ಈರಪ್ಪಾ ಮಮದಾಪೂರ, ಬಸ್ಸಪ್ಪಾ ಅರಟಾಳ, ಕೇದಾರಿ ಐಗಳಿ ಉಪಸ್ಥಿತರಿದ್ದರು.

ರಮೇಶ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here