ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

0
21
loading...

 

(ಹುಕ್ಕೇರಿ ಕಾರ್ಯಾಲಯದಿಂದ)

ಹುಕ್ಕೇರಿ 24 : ದೇಶದ 5 ವಿದ್ಯುತ್ ಸರಬರಾಜು ಸಹಕಾರಿ ಸಂಘಗಳಲ್ಲಿ ಒಂದಾದ ಸ್ಥಳೀಯ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸನ್ 2010-11 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆ ಇಂದು ಸಂಘದ ಆವರಣದಲ್ಲಿ ನಡೆಯಿತು.

ಸಂಘದ ಸದಸ್ಯರಾದ ಉಮೇಶ ಕತ್ತಿಯವರು ಮಾತನಾಡಿ ಸಂಘ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದು ಸನ್ 2003 ರಿಂದ 2008 ರ ವರೆಗೆ 39 ಕೋಟಿ 80 ಲಕ್ಷ ರೈತರ ಪಂಪ್ಸೆಟಿನ್ ಬಿಲ್ಲು ಬಾಕಿ ಇದ್ದು ನೋಟಿಸು ನೀಡಿದರೂ ಯಾರೂ ಬಿಲ್ಲುಗಳನ್ನು ತುಂಬಿಲ್ಲಾ ಹಾಗೂ ರೈತರು ಬಿಲ್ಲುಗಳನ್ನು ತುಂಬಲು ಅಶಕ್ತರಾಗಿದ್ದು ಬಿಲ್ಲನ್ನು ಮನ್ನಾ ಮಾಡಲು ಆಗ್ರಹಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯ ಸರಕಾರದ ಗಮನಕ್ಕೆ ತರಲಾಗಿದೆಯೆಂದರು.

ಗ್ರಾಹಕರಿಗೆ 12 ಘಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಲು 100 ಮೆ.ವ್ಯಾಟ್ ಪವನ ವಿದ್ಯುತ್ ಘಟಕ ಸ್ಥಾಪಿಸಲು ಆರ್ಇಸಿ ಪ್ರತಿ ಶತ 90 ರಷ್ಟು ಸಾಲ ನೀಡಲು ಮುಂದೆ ಬಂದಿದೆಯೆಂದರು. ರಾಜೀವ ಗಾಂಧಿ ವಿದ್ಯುತ್ತಿಕರಣ್ ಯೋಜನೆಯಡಿ 14,800 ಬಿ.ಪಿ.ಎಲ್ ಜನರಿಗೆ ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸಲಿದ್ದು ದಸರಾ ಹಬ್ಬದಿಂದ ಇದಕ್ಕೆ ಚಾಲನೆ ನೀಡಲಾಗುವದು. ಇದಕ್ಕೆ 7 ಕೋಟಿ 90 ಲಕ್ಷ ವೆಚ್ಚ ಮಾಡಲಾಗುವದೆಂದರು. ಜನ ಅನಧಿಕೃತವಾಗಿ ಬೇಕಾಯದೇಶಿರ ಹುಕ್ ಹಾಕಿ ವಿದ್ಯುತ್ ತೆಗೆದುಕೊಳ್ಳುತ್ತಿರುವದರಿಂದ ಹೆಚ್ಚಿನ ಪ್ರಮಾಣದಲ್ಲಿ ಟಿ.ಸಿ ಗಳು ಸುಡುತ್ತಿರುವ ವಿಷಾದ ವ್ಯಕ್ತ ಪಡಿಸಿದ ಅವರು ಇನ್ನು ಮೇಲೆ ಅಂಥವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವದೆಂದರು.

ಮುಂಬರುವ ವರ್ಷದಲ್ಲಿ ಸಂಘವನ್ನು ಸ್ವಾವಲಂಬಿಯಾಗಿ ಮಾಡುವದರ ಜೊತೆಗೆ ರಾಜ್ಯದಲ್ಲಿ ಮಾದರಿ ಸಂಘವನ್ನಾಗಿ ಪರಿವರ್ತಿಸುವ ವಿಚಾರವನ್ನು ಅವರು ತಿಳಿಸಿದರು.

ಸುಮಾರು ಅನಧಿಕೃತ 1000 ಪಂಪ್ಸೆಟುಗಳಿದ್ದು ಅಕ್ರಮ ಸಕ್ರಮ ಯೋಜನೆಯಡಿ ಅವನ್ನು ಸಕ್ರಮಗೊಳಿಸಲು 300 ಜನ ರೈತರು ಮುಂದೆ ಬಂದಿರುವದನ್ನು ತಿಳಿಸಿದ ಅವರು ರೂ., 10,000 ಹಾಗೂ ಶೇಅರ ಡಿಪಾಜಿಟ್ ತುಂಬಿ ಸಕ್ರಮ ಮಾಡಿಕೊಳ್ಳಲು ತಿಳಿಸಿದರು. ನಿರಂತರ ಜ್ಯೌತಿ ಯೋಜನೆಯಡಿ 18 ಕೋಟಿ ರೂ., ಮಂಜೂರಾಗಿದ್ದು ಇದರಲ್ಲಿ 8 ಕೋಟಿ ರೂ., ಸಂಘ ಭರಿಸಬೇಕಾಗಿದೆಯೆಂದರು. ಸನ್ 2000 ರಲ್ಲಿ ಹುಕ್ಕೇರಿಯಲ್ಲಿ ಮಾತ್ರ 110 ಕೆ.ವ್ಹಿ ವಿದ್ಯುತ್ ವಿತರಣಾ ಕೇಂದ್ರವಿತ್ತು ನಂತರ ಹಿಡಕಲ್ ಡ್ಯಾಂ, ಹತ್ತರಗಿ, ಸಂಕೇಶ್ವರ, ಶಿರಗಾಂವದಲ್ಲಿ ಕೇಂದ್ರಗಳಾಗಿ ದಡ್ಡಿ ಹಾಗೂ ಇಸ್ಲಾಂಪೂರ ಗ್ರಾಮಗಳಲ್ಲಿ ಈ ಕಾರ್ಯ ಪ್ರಗತಿಯಲ್ಲಿದ್ದು ಬೆಲ್ಲದ ಬಾಗೇವಾಡಿ ಹಾಗೂ ಕಣಗಲಾಗಳಲ್ಲಿ ಈ ಎರಡು ಕೇಂದ್ರಗಳಲ್ಲಿ ಶೀಘ್ರದಲ್ಲಿ ಕೆಲಸ ಪ್ರಾರಂಭಗೊಳ್ಳಲಿದೆಯೆಂದರು. ಸಂಘ 13 ಕೋಟಿ ಲಾಭ ಗಳಿಸಿದ್ದು ಮುಂಬರುವ ದಿನಗಳಲ್ಲಿ ಗ್ರಾಹಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲಾಗಿದೆಯೆಂದರು. ಅಶೋಕ ಚಂದಪ್ಪಗೋಳ ಸ್ವಾಗತಿಸಿದರು. ದುರದುಂಡಿ ನಾಯಿಕ ನಿರೂಪಿಸಿದರು. ಸ್ಥಾನಿಕ ಅಭಿಯಂತ ನೇಮಿನಾಥ ಖೆಮಲಾಪೂರೆ ವರದಿ ವಾಚನ ಮಾಡಿದರು. ಎ.ಎಸ್.ಕಮತೆ ವಂದಿಸಿದರು. ಸಂಘದ ಅಧ್ಯಕ್ಷ ಬಾಬಾಗೌಡಾ ಪಾಟೀಲ, ಉಪಾಧ್ಯಕ್ಷ ಅಶೋಕ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಶಿವಪುತ್ರ ಶಿರಕೋಳಿ, ಶಶಿರಾಜ ಪಾಟೀಲ, ಬಸವರಾಜ ಮರಡಿ, ರವೀಂದ್ರ ಕಲ್ಲಟ್ಟಿ, ಬಾಳಪ್ಪಾ ಮಂಜರಗಿ, ಸುರೇಂದ್ರ ದೊಡಲಿಂಗನವರ, ರಾಜೇಂದ್ರ ತುಬಚಿ, ವಿಷ್ಣು ರೆಡೇಕರ, ವ್ಯವಸ್ಥಾಪಕ ನಿರ್ದೇಶಕ ಆರ್.ಬಿ.ಬೋರಗಿ, ಪ.ಪಂ ಅಧ್ಯಕ್ಷ ಜಯಗೌಡಾ ಪಾಟೀಲ ವೇದಿಕೆಯಲ್ಲಿದ್ದರು.

loading...

LEAVE A REPLY

Please enter your comment!
Please enter your name here