ಹೊಸತಿರುವು ಪಡೆಯುತ್ತಿರುವ ದರ್ಶನ ಪ್ರಕರಣ

0
22
loading...

ನಟ ದರ್ಶನ ಮತ್ತು ಆತನ ಪತ್ನಿ ವಿಜಯಲಕ್ಷ್ಮೀ ನಡುವೆ  ನಡೆದ ವಿರಸದ ಘಟನೆ ದಿನ ಕಳೆದಂತೆ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳತೊಡಗಿದೆ. ನ್ಯಾಯಾಲಯ ಇದುವರೆಗೆ ದರ್ಶನ ಅವರಿಗೆ ಜಾಮೂನು ನೀಡಿಲ್ಲ ದರ್ಶನ ಜಾಮೀನಿನ ಅರ್ಜಿ ಈಗ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಗಾಗಿದೆ. ವಿಜಯಲಕ್ಷ್ಮೀ ಸಲ್ಲಿಸಿರುವ ಪ್ರಮಾಣ ಪತ್ರದ ಬಗ್ಗೆ ನ್ಯಾಯಾಲಯದಲ್ಲಿ ವಿವಾದ ಉಂಟಾಗಿದೆ. ವಿಜಯಲಕ್ಷ್ಮೀ ಬಿಇ ಪದವಿ ಪಡೆದ ಸುಶಿಕ್ಷಿತ ಮಹಿಳೆ ಆಗಿದ್ದಾಳೆ.  ಮೊದಲು ನನ್ನ ಪತಿ ದರ್ಶನ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.  ಎಂಬ ದೂರನ್ನು ಆಕೆ ಪೋಲಿಸರಿಗೆ ನೀಡಿದ್ದಾರೆ. ಆಕೆಯ ಗಾಯಗಳು ಆಕೆಯ ದೂರಿಗೆ ಪುರಾವೆಗಳನ್ನು ಒದಗಿಸಿದ್ದರು. ತಲೆ ಮತ್ತು ಕಿವಿಗೆ ಗಾಯಗಳಾಗಿದ್ದ  ದೇಹದ ಮೇಲೆ ಹತ್ತು ಕಡೆಗೆ ಸಿಗರೇಟಿನಿಂದ ಸುಟ್ಟು ಗಾಯಗಳಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆದರೆ ಈಗ ಆಕೆ ನನ್ನ ಗಂಡ ಹಲ್ಲೆ ಮಾಡಿಲ್ಲ ನಾನು ಸ್ನಾನದ ಕೋಣೆಯಲ್ಲಿ ಬಿದ್ದು ಗಾಯವಾಗಿದೆ ಎಂಬ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾಳೆ. ಆದರೆ  ಬಿದ್ದರೆ ಕೇವಲ ಗಾಯಗಳಾಗಬೇಕಾಗಿತ್ತು. ಆದರೆ ಸುಟ್ಟ ಗಾಯಗಳು ಹೇಗೆ ಆಗುತ್ತವೆ. ಎಂಬುದು ನ್ಯಾಯಾಲಯದ ಪ್ರಶ್ನೆಯಾಗಿದೆ. ಇದು ವಿಜಯಲಕ್ಷ್ಮಣಿ ನೀಡಿರುವ ದೂರಿನ ಕತೆಯಾದರೆ ಚಿತ್ರ ನಿರ್ಮಾಪಕ ಸಂಘದವರು  ನಿಖಿತಾ ಮೇಲೆ  ನಿಷೇಧ ಹೇರಿರುವ ಪ್ರಕರಣ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ದರ್ಶನ ಕುಟುಂಬದಲ್ಲಿ ಬಿರುಗಾಳಿ  ಎಬ್ಬಿಸಿದ್ದ ಕಾರಣಕ್ಕಾಗಿ  ನಿಖಿತಾ ಅವರನ್ನು ಚಿತ್ರ ನಿರ್ಮಾಪಕ ಸಂಘದವರು ಮೂರು ವರ್ಷಕಾಲ ಕನ್ನಡ ಚಿತ್ರರಂಗದಿಂದ ನಿಷೇಧಕ್ಕೆ ಒಳಪಡಿಸಿದ್ದಾರೆ. ಇದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಚಿತ್ರ ನಿರ್ಮಾಪಕ ಸಂಘದ ಈ ಕ್ರಮಕ್ಕೆ ರಾಘವೇಂದ್ರ ರಾಜಕುಮಾರ , ಶಿವರಾಜಕುಮಾರ, ಪಾರ್ವತೆಮ್ಮ ರಾಜಕುಮಾರ, ತಾರಾ, ರಮ್ಯಾ ತೀವ್ರ ವಿರೋಧವನ್ನು  ವ್ಯಕ್ತ ಪಡಿಸಿದ್ದಾರೆ.  ಹೀಗಾಗಿ ಚಿತ್ರ ನಿರ್ಮಾಒಕ ಸಂಘದವರು  ಈಗ ತೀವ್ರ ವಿವಾದದಲ್ಲಿ ಸಿಲುಕುವಂತೆ ಆಗಿದೆ.

ಅಲ್ಲದೆ ಬೆಮಗಳೂರಿನ ವಕೀಲರೊಬ್ಬರು  ಹುರಿಯ ನಟ್ಟ ಅಂಬರೀಷ ನಟರಾದ  ದುನಿಯಾ ವಿಜಿ , ನಿರ್ಮಾಪಕ ರಾಖ್ಲೈನ್ ವೆಂಕಟೇಶ ಅವರ ಮೇಲೆ  ನ್ಯಾಯಾಂಗ ನಿಂದನೆಯ ಪ್ರಕರಣವನ್ನು  ದಾಖಾಲಿಸಲು  ಮುಂದಾಗಿದ್ದಾರೆ.  ವಿಜಯಲಕ್ಷ್ಮೀ ಪತಿಯಿಂದ ಹಲ್ಲೆಗೆ ಒಳಗಾಗಿ ಆಕೆ ಚಿಕಿತ್ಸೆಯನ್ನು  ಪಡೆಯುತ್ತಿದ್ದ  ಸಮಯದಲ್ಲಿ ಆಕೆಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡದೆ ಪತಿಯೊಂದಿಗೆ ರಾಜಿ ಮಾಡಿಕೊಳ್ಳಲು ಒತ್ತಡ ಹೇರಿ ಆಕೆಗೆ ಮಾನಸಿಕ ನೋವು ಉಂಟು ಮಾಡಿ ಜೊತೆಗೆ  ಕಾನೂನಿನ ಪ್ರಕ್ರಿಯೆಗೆ ಅಡ್ಡಿ ಮಾಡುವ ನ್ಯಾಯಾಂಗ ನಿಂದನೆಯ ಕಾರ್ಯವನ್ನು ಇವರು ಮಾಡಿದ್ದಾರೆ.  ಎಂಬ ಗಂಭೀರ ಆಪಾದನೆಯನ್ನು  ಆ ವಕೀಲರು ಮಾಡಿದ್ದು ಆ ಕುರಿತು ಕಾನೂನಿನ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು  ನೋಡಿದರೆ ಕಾನೂನಿನ  ತೊಡಕು ಹಾಗೂ ನಿರ್ಮಾಪಕರ ಸಂಘದ ಮೇಲಿನ ಆಕ್ರೌದಿಂದ  ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿರುವುದನ್ನು ನಾವು ಈಗ ಗಮನಿಸಬಹುದಾಗಿದೆ. ಆದ್ದರಿಂದ ಇದು ಹೊಸ ಹೊಸ ಬೆಳವಣಿಗೆಗೆ ಕಾರಣವಾಗಿದೆ.

loading...

LEAVE A REPLY

Please enter your comment!
Please enter your name here