8ನೇ ಜ್ಞಾನಪೀಠ ಪ್ರಶಸ್ತಿ ವಿಭೂಷಿತ ಡಾ. ಚಂದ್ರಶೇಖರ ಕಂಬಾರ

1
44
loading...

 

ಚಿತ್ರವೆಂಬ ಪ್ರಶಸ್ತಿ ಜೊತೆಗೆ ಉತ್ತಮ ಕಥಾ ಲೇಖಕ ಉತ್ತಮ ಸಂಭಾಷಣೆ ಮತ್ತು ಸಂಗೀತ ನಿರ್ದೇಶಕ ಪ್ರಶಸ್ತಿಗಳು ಸರ್ಕಾರದ ಲಿಪದ್ಮಶ್ರೀಳಿ(1991), ಗೌರವ ಪ್ರಶಸ್ತಿ (2001), ಕಾಳಿದಾಸ ಸನ್ಮಾನ (1991), ಮಧ್ಯಪ್ರದೇಶದ ಕಬಿರ್ ಸನ್ಮಾನ (2002) ಪಂಪ ಪ್ರಶಸ್ತಿ (2003), ಕನ್ನಡ ವಿಶ್ವವಿಧ್ಯಾಲಯ ಹಂಪಿ ಯಿಂದ ನಾಡೋಜ ಪ್ರಶಸ್ತಿ.

ಇದಿಗ ರಾಷ್ಟ್ತ್ರಮಟ್ಟದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಶಿಜ್ಞಾನಪಿಠಷಿ ಪ್ರಶಸ್ತಿ ಲಭಿಸಿದ್ದರಿಂದ ಡಾ|| ಕಂಬಾರರ ಕಿರ್ತಿಶಿಖರಕ್ಕೆ ಬಂಗಾರದ ಕಳಸವಿಟ್ಟಂತಾಗಿದೆ.

ಅವರು ಅನೇಕ ಸಂಶೋಧನಾ ಕಾರ್ಯವನ್ನು ಕೈಗೊಂಡಿದ್ದಾರೆ. ಉತ್ತರ ಕರ್ನಟಕದ ಜನಪದ ರಂಗಭೂಮಿ (1965), ಸಂಗ್ಯಾಬಾಳ್ಯಾ (1966), ಬಣ್ಣಿಸಿ ಹಾಡುವ ನನ್ನ ಬಳಗ (1968), ಬಯಲಾಟಗಳು (1973), ಮಾತಾಡು ಲಿಂಗವೇ (1973), ನಮ್ಮ ಜನಪದ (1980), ಬಂದಿರೆ ನನ್ನ ಜೋಳಿಗೆ (1981), ಕನ್ನಡ ಜಾನಪದ ವಿಶ್ವಕೋಶ (ಎರಡು ಸಂಪುಟಗಳಲ್ಲಿ  1985), ಬೇಡರ ಹುಡುಗ ಮತ್ತು ಗಿಳಿ (1989 ರಾಜ್ಯ  ಸಾಹಿತ್ಯ ಅಕಾಡೆಮಿ ಪ್ರಶಸ್ತಿ), ಲಕ್ಷಾಪತಿ ರಾಜನ ಕಥೆ (1986), ಕಾಶಿಗೊಂದು ಶೇರು (1989), ನೆಲದ ಮರೆಯ ಮಿದಾನ (1993), ಬೃಹದ್ದೇಶಿಯ ಚಿಂತನ (2001), ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾಗಾಗಿ ಆಧುನಕ ಭಾರತದ ಸಮಗ್ರ ನಾಟಕಗಳ ರಚನೆ (2000).

ಡಾ|| ಕಂಬಾರರ ಸಾಹಿತ್ಯ ಕೃಷಿ ಮುಗುಳು (1958), ಹೇಳತೆನ ಕೇಳ (1964), ತಕರಾರಿನವರು (1971), ಸಾಕಿವ್ರದ ನೇರಳು (1979), ಆಯ್ದ ಕವನಗಳು (1980), ಬೆಳ್ಳಿ ಮೀನು (1989), ಅಕ್ಕಕ್ಕು ಹಾಡುಗಳೆ (1993), ಈ ವರೆಗಿನ ಹೇಳತೆನ ಕೇಳ (1993), ಚಕೋರಿ ಮಹಾಕಾವ್ಯ (1996), ಮೇಲ್ಕಂಡವುಗಳೆಲ್ಲವು ಶ್ರಿಯುತರ ಕವನ ಸಂಕಲನಗಳಾದರೆ ನಾಟಕಗಳು ಈ ಮುಂದಿನಂತಿವೆ.

ಬೆಂಬತ್ತಿದ ಕಣ್ಣು (1961), ನಾರ್ಸಿಸಸ್ (1969), ಋುಷ್ಯಶೃಂಗ (ಚಲನ ಚಿತ್ರವಾಗಿದೆ – 1970), ಜೋಕುಮಾರ ಸ್ವಾಮಿ (1972), ಸಂಗ್ಯಾ ಬಾಳ್ಯಾ ಅನ್ನಬೇಕೊ ನಾಡೋಳಗ (1975), ಕಿಟ್ಟಿಯ ಕಥೆ (1974), ಜೈಸಿದ್ಧ ನಾಯಕ (1975), ಅಲಿಬಾಬಾ (ತರ್ಜುಮೆ ಮತ್ತು ಭಾರತೀಯ ಸಾಹಿತ್ಯ ಪ್ರಕಾಶನ, ಹಾಗೂ ಸಾಹಿತ್ಯ ಅಕಾಡೆಮಿ  1980), ಕಾಡು ಕುದುರೆ (ಚಲನ ಚಿತ್ರವಾಗಿದ್ದು ರಾಷ್ಟ್ತ್ರೀಯ ಪ್ರಶಸ್ತಿ ದೊರೆತಿದೆ  1979), ನಾಯಿಕಥೆ (ಶಿಸಂಗೀತಾಷಿ ಹೆಸರಿನಲ್ಲಿ ಚಲನಚಿತ್ರವಾಗಿದ್ದು ಇದಕ್ಕೆ ಐದು ರಾಜ್ಯ ಪ್ರಶಸ್ತಿ ಲಬಿಸಿವೆ) ಕರೋಕರ್ (1977), ಮತಾಂತರ, (1978) ಹರಕೆಯ ಕುರಿ (ಚಲನಚಿತ್ರವಾಗಿದ್ದು ರಾಷ್ಟ್ತ್ರೀಯ ಪ್ರಶಸ್ತಿ ಪಡೆದುಕೊಂಡಿದೆ ಹಿ 1983) ಕಂಬಾರ ಅವರ ನಾಟಕಗಳು (1984), ಸಾಂಬಶಿವ ಪ್ರಹಸನ್ (1987), ಸಿರಿಸಂಪಿಗೆ (ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನವದೆಹಲಿ, – 1991), ಹುಲಿಯ ನೆರಳು ಚಲನಚಿತ್ರವಾಗಿದೆ (1980) ಬೋಲೆ ಶಂಕರ (1991), ಪುಷ್ಪರಾಣಿ (1990), ತಿರುಕನ ಕನಸು (1989), ಮಹಾಮಾಯಿ (1991).

ಕಥೆ ಕಾದಂಬರಿಗಳು : ಅಣ್ಣತಂಗಿ (1956), ಕರಿಮಾಯಿ (ಚಲನಚಿತ್ರವಾಗಿದೆ ಹಿ 1975), ಜಿ.ಕೆ. ಮಾಸ್ತರರ್ ಪ್ರನಯ ಪ್ರಸಂಗ (1986), ಶಿಂಗಾರೆವ್ವ ಮತ್ತು ಅರಮನೆ(ಚಲನಚಿತ್ರವಾಗಿದೆ  1982) ಹೀಗೆ ರಾಶಿ ರಾಶಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಡಾ|| ಚಂದ್ರಶೇಖರ ಕಂಬಾರರು ಬೆಂಗಳೂರಿನಂತಹ ರಾಜಧಾನ ನಗರದಲ್ಲಿ ವಾಸಿಸಿದರೂ ತಮ್ಮ ಸಾಹಿತ್ಯದಲ್ಲಿ ತಮ್ಮ ಹುಟ್ಟೂರಾದ ಘೋಡಗೇರಿ ಮತ್ತು ಸಾವಳಗಿ ಮಠದ ನದಿ ದಂಡೆಯ ಹಳ್ಳಿ ಶಿಶಿವಾಪೂರಷಿವನ್ನು ಮರೆಯದ ಹೃದಯವಂತರು. ಇಂದಿಗೆ 20 ವರ್ಷಗಳ ಹಿಂದೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಉಪಾಧ್ಯಾಯರುಗಳಿಗಾಗಿ ರಂಗ ಶಿಬಿರವನ್ನು ಪ್ರೌ|| ಸಿ.ಜಿ. ಕೃಷ್ಣಸ್ವಾಮಿ (ಸಿ.ಜಿ.ಕೆ), ಯವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದರು ಸುಮಾರು 60 ಜನ ಉಪಾದ್ಯಾಯರುಗಳಿಗೆ ಶಿಭೀರದಲ್ಲಿ ಬಂದು ನೆಲ ಹಾಸಿಗೆಯಲ್ಲಿಯೇ ಕುಳಿತ ಕುಲಪತಿ ಕಂಬಾರರು ರಂಗ ಭೂಮಿಯ ಸಾದ್ಯತೆಗಳು ಮತ್ತು ಕರಿಮಾಯಿ ಕಥೆ ಹೇಳಿದ್ದ ಶ್ರಿಯುತರು ಶಿಬಿರದ ಅಂತಿಮ ಹಂತದಲ್ಲಿ ಶಿಕಣ್ಣಿರುಷಿ  ಗೀತರೂಪಕವನ್ನು ನೋಡಿ ನಮ್ಮನ್ನು ಹೆಮ್ಮೆಯಿಂದ ಬೆನ್ನು ಚಪ್ಪರಿಸಿ ಹುರುದುಂಬಿಸಿದರು.

ಅಂದು ಶಿ.ಜಿ.ಕೆ ಯವರೊಂದಿಗೆ ಕುಲಪತಿಗಳಾದ ಡಾ|| ಕಂಬಾರರ ಚೆಂಬರಿಗೆ ಹೋಗಿದ್ದ ನನಗೆ ಪ್ರೀತಿಯಿಂದ ಮಾತನಾಡಿಸಿ ಸಿರಿಸಂಪಿಗೆ ಸಾಹಿತ್ಯ ಕೃತಿಯನ್ನು ನೀಡಿ ಹಾರೈಸಿದ ಗುಣವಂತರು. ತಾವೊಬ್ಬ ವಿಶ್ವವಿದ್ಯಾಲಯದ ಉನ್ನತ ಹುದ್ದೆಯ ಕುಲಪತಿಗಳಾಗಿದ್ದರೂ, ಒಂದಿಷ್ಟು ಹಮ್ಮು – ಬಿಮ್ಮು ಇಲ್ಲದ ಅಸಾಧಾರಣ ಪಾಂಡಿತ್ಯದ ಸರಳ ಸಜ್ಜನ ಸಾಹಿತಿಗಳಾದ ಡಾ|| ಚಂದ್ರಶೇಖರ ಕಂಬಾರರಿಗೆ ದೊರೆತ ಶಿಜ್ಞಾನಪೀಠಷಿ ಪ್ರಶಸ್ತಿಯು ಆರು ಕೋಟಿ ಕನ್ನಡಿಗರಿಗೆ ಸಂದ ಗೌರವವಾಗಿದೆ.                           (ಮುಗಿಯಿತು)

loading...

1 COMMENT

LEAVE A REPLY

Please enter your comment!
Please enter your name here