ಆಧಾರ್ ಸಂಖ್ಯೆ ಪಡೆಯಲು ಸೂಚನೆ

0
21
loading...

ಬೆಳಗಾವಿ:ಅಕ್ಟೌಬರ್:20: ಈಗಾಗಲೇ ಸರಕಾರದ ವಿವಿಧ ಪಿಂಚಣಿ ಯೋಜನೆಗಳಡಿಯಲ್ಲಿ ವೇತನ ಪಡೆಯುತ್ತಿರುವ ಫಲಾನುಭವಿಗಳು ಕಡ್ಡಾಯವಾಗಿ ಆರು ತಿಂಗಳೊಳಗಾಗಿ ಆಧಾರ್ ಸಂಖ್ಯೆಯನ್ನು ಪಡೆದುಕೊಳ್ಳಬೇಕೆಂದು ಬೆಳಗಾವಿ ತಹಸೀಲದಾರರು ತಿಳಿಸಿದ್ದಾರೆ.

ಇಲ್ಲವಾದಲ್ಲಿ ಪಿಂಚಣಿಯನ್ನು ತಾತ್ಕಾಲಿಕವಾಗಿ ಖಜಾನೆುಂದ ತಡೆಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಪಿಂಚಣಿಯ ಹೆಸರು ಮತ್ತು ಪೆನಶನ್ ಪೇ ಆರ್ಡರ್ ಸಂಖ್ಯೆ ಅಥವಾ ಮನಿ ಆರ್ಡರ್ ರಶೀದಿ ಅಥವಾ ಬ್ಯಾಂಕ್ ಪಾಸ್ ಬುಕ್ ಅಥವಾ ಬ್ಯಾಂಕ್ ಖಾತೆ ಸಂಖ್ಯೆ ಆಧಾರ್ ನೊಂದಣಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಆಧಾರ್ ನಂಬರನ್ನು ಪಡೆದು ಆರು ತಿಂಗಳುಗಳ ಅವಧಿಯಲ್ಲಿ ತಹಸೀಲ್ದಾರ ಕಾರ್ಯಾಲಯಕ್ಕೆ ತಪ್ಪದೇ ಹಾಜರಪಡಿಸಬೇಕು. ಇಲ್ಲವಾದಲ್ಲಿ ಸರಕಾರದ ಸುತ್ತೌಲೆಯ ಪ್ರಕಾರ ಅಂತವರ ಪಿಂಚಣಿಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಪಿಂಚಣಿಗಾಗಿ ಹೊಸ ಅರ್ಜಿ ನೀಡುವವರು ಸಹ ಇನ್ನು ಮುಂದೆ ಕಡ್ಡಾಯವಾಗಿ ಆಧಾರ್ ಸಂಖ್ಯೆಯನ್ನು ಪಡೆದು ಅರ್ಜಿ ನೀಡಬೇಕು. ಇಲ್ಲವಾದಲ್ಲಿ ಅಂತಹ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ಬೆಳಗಾವಿ ತಹಸೀಲದಾರರು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here