ಇಂದು ರೋಲರ್ ಸ್ಕೇಟಿಂಗ್ ಪಂದ್ಯಾವಳಿ

0
7
loading...

ಬೆಳಗಾವಿ, ಅ.13: ಬೆಳಗಾವಿಯ ಕೆ.ಎಲ್.ಇ. ಅಂತರ್ರಾಷ್ಟ್ತ್ರೀಯ ಶಾಲೆಯ ವತಿಯಿಂದ ಏರ್ಪಡಿಸಿರುವ ಸಿಬಿಎಸ್ಇ ದಕ್ಷಿಣವಲಯ ರೋಲರ್ ಸ್ಕೇಟಿಂಗ್ ಪಂದ್ಯಾವಳಿ ಮಂಗಳವಾರದಿಂದ ಆರಂಭಗೊಂಡಿದ್ದು , ಇದೇ ದಿ.14 ರ ವರೆಗೆ ನಡೆಯಲಿದೆ.

ಬೆಳಗಾವಿ ಜಿಲ್ಲಾಧಿಕಾರಿ ಏಕರೂಪ ಕೌರ ಹಾಗೂ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರು ಈ ಸ್ಕೇಟಿಂಗ್ ಪಂದ್ಯಾವಳಿಯನ್ನು ಉದ್ಘಾಟಿಸುವುದರ ಮೂಲಕ ನಾಲ್ಕು ದಿನಗಳ ಈ ಸ್ಪರ್ಧೆಗೆ ಚಾಲನೆ ನೀಡಿದರು. ಕೆ.ಎಲ್.ಇ. ಆಂಗ್ಲ ಮಾಧ್ಯಮ ಶಾಲೆಗಳ ಸಂಯೋಜಕರಾದ ಡಾ.ಪ್ರೀತಿ ದೊಡವಾಡ ಹಾಗೂ ಇತರರು ಉಪಸ್ಥಿತರಿದ್ದರು.

ಕರ್ನಾಟಕ, ಕೇರಳ, ತಮಿಳನಾಡು, ಆಂದ್ರಪ್ರದೇಶ, ಪಾಂಡಿಚೇರಿಯ ಸಿಬಿಎಸ್ಸಿ 170 ಶಾಲೆಗಳ ಸಾವಿರ ಕ್ರೀಡಾಪಟುಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದಾರೆ. ಪ್ರಪ್ರಥಮಬಾರಿಗೆ ಕರ್ನಾಟಕದಲ್ಲಿ ಜರುಗುತ್ತಿರುವ ರಾಷ್ಟ್ತ್ರಮಟ್ಟದ ಈ ಪಂದ್ಯಾವಳಿಗಾಗಿ ಸಕಲ ರೀತಿಯ ಸೌಕರ್ಯಗಳನ್ನು ಮಾಡಿಕೊಂಡಿರುವ ಕೆಎಲ್ಇಎಸ್ ಶಾಲೆ ಆಧುನಿಕ ತಂತ್ರಾಂಶಗಳಿಂದ ಕೂಡಿದ ಅಂತರ್ರಾಷ್ಟ್ತ್ರೀಯ ಮಟ್ಟದ ಸ್ಕೇಟಿಂಗ್ ರೋಲರ್ವನ್ನು ಲಿಂಗರಾಜ ಕಾಲೇಜು ಆವಣರದಲ್ಲಿ ನಿರ್ಮಿಸಿದೆ. ಬುಧವಾರ ಬೆಳಿಗ್ಗೆ 8.30 ಕ್ಕೆ ಕೆಎಲ್ಇಎಸ್ ಶಾಲೆಯ ಆವರಣದಲ್ಲಿ ಕ್ವಾಡ್ ಮತ್ತು ಇನ್ಲೈನ್ ರೇಸ್ ದಿನಾಂಕ 13 ರಂದು ಬೆಳಿಗ್ಗೆ 9.00 ಕ್ಕೆ ವಿ.ಟಿ.ಯು. ಕ್ಯಾಂಪಸ್ನಲ್ಲಿ ರೋಡ್ರೇಸ್, ಮಧ್ಯಾಹ್ನ 3.00 ಕ್ಕೆ ಲಿಂಗರಾಜ ಕ್ಯಾಂಪಸ್ನಲ್ಲಿ ರಿಂಕ್ ರೇಸ್, ದಿನಾಂಕ 14 ರಂದು ಬೆಳಿಗ್ಗೆ 9.00 ಕ್ಕೆ ರಿಗ್ಗ ರೇಸ್ ಸೆಮಿಫೈನಲ್ ಹಾಗೂ ಅಂತಿಮ ಪಂದ್ಯಗಳು ನಡೆಯಲಿದ್ದು , ಸಂಜೆ 4.00 ಕ್ಕೆ ಕೆಎಲ್ಇಎಸ್ ಶಾಲಾ ಆವರಣದಲ್ಲಿ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿವೆ.

loading...

LEAVE A REPLY

Please enter your comment!
Please enter your name here