ಇಂದು ವೈಸ್ ಆಫ್ ಬೆಳಗಾವಿ ಅಂತಿಮ ಸುತ್ತು

0
18
loading...

 

ಬೆಳಗಾವಿ,15-ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆದು ಬಂದಿರುವ ದಿ.ವೈಸ್ ಆಫ್ ಬೆಳಗಾವಿ ಲಿಟ್ಲ್ ಚಾಂಪ್ ಹಾಗೂ ವೈಸ್ ಆಫ್ ಬೆಳಗಾವಿ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ದಿ.16 ರವಿವಾರ ಸಂಜೆ 6 ಗಂಟೆಗೆ ಟಿಳಕವಾಡಿ ಲೇಲೇ ಮೈದಾನದಲ್ಲಿ ನಡೆಯಲಿದೆ. ಸಂಗೀತಾಸಕ್ತರು ಆಗಮಿಸುವಂತೆ ವಿಶ್ವನಾಥ ಎನ್.ಎ. ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಆಸಕ್ತರು ಮೊ.9480331032 ಇಲ್ಲಿ ಸಂಪರ್ಕಿಸಲು ಕೋರಲಾಗಿದೆ.

ಸ್ಪರ್ಧೆಯಲ್ಲಿ ಒಟ್ಟು 588 ಸ್ಪರ್ಧಾಳುಗಳು ಆರಂಭದಲ್ಲಿ ಪಾಲ್ಗೊಂಡಿದ್ದರು. 110 ಸ್ಪರ್ಧಾಳುಗಳು ಕ್ವಾರ್ಟರ ಫೈನಲ್, 21 ಸೆಮಿಫೈನಲ್ ತಲುಪಿದ್ದರು. ದಿ.16ರ ಅಂತಿಮ ಸುತ್ತಿನಲ್ಲಿ ಒಟ್ಟು 10 ಸ್ಪರ್ಧಾಳುಗಳು ಉಳಿದುಕೊಂಡಿದ್ದಾರೆ. ಇವರ ಮಧ್ಯೆ ಇಂದು ಅಂತಿಮ ಪೈಪೋಟಿ ನಡೆಯಲಿದೆ ಎಂದು ವಿಶ್ವನಾಥ ಎನ್.ಎ.ಕನ್ನಡಮ್ಮಕ್ಕೆ ತಿಳಿಸಿದರು.

 

loading...

LEAVE A REPLY

Please enter your comment!
Please enter your name here