ಉಚಿತ ನೇತ್ರ ಮತ್ತು ಶಸ್ತ್ತ್ರ ಚಿಕಿತ್ಸೆ ಶಿಬಿರ

0
14
loading...

ಹುಬ್ಬಳ್ಳಿ   24. ಹುಬ್ಬಳ್ಳಿ ತಾಲೂಕ ಪ್ರಾಥಮಿಕ ಆರೋಗ್ಯ ಕೇಂದ್ರ  ಅರಳಿಕಟ್ಟಿಯಲ್ಲಿ  ಧಾರವಾಡ ಜಿಲ್ಲಾ ಅಂಧತ್ವ  ನವಾರಣಾ ಸಂಸ್ಥೆ ,  ಜಿ.ಪಂ , ಹುಬ್ಬಳ್ಳಿ ತಾ. ಪಂ  ಮತ್ತು  ಅರಳಿಕಟ್ಟಿ ಗ್ರಾಮ ಪಂಚಾಯತ ಇವರ ಸಂಯುಕ್ತ ಆಶ್ರಯದಲ್ಲಿ ದಿ. 21 ರಂದು ಉಚಿತ ಶಿಬಿರ ಏರ್ಪಡಿಸಲಾಗಿತ್ತು.

ಈ  ಶಿಬಿರದಲ್ಲಿ 110 ಜನ ಕಣ್ಣಿನ ತೊಂದರೆ ಇರುವವರು ಹಾಜರಿದ್ದು, ಇದರಲ್ಲಿ 22 ಜನ ಕಣ್ಣಿನ ಪೊರೆ ಇರುವವರನ್ನು ಗುರುತಿಸಿ  ಹುಬ್ಬಳ್ಳಿ  ನೇತ್ರ ವಿಜ್ಞಾನ ಸಂಸ್ಥೆಯ ಡಾ|| ಎಂ. ಎಂ.  ಜೋಶಿ  ಇವರಲ್ಲಿ ಕಳುಹಿಸಲಾಯಿತು.

ಈ ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀ ನರಸಿಂಹಪ್ಪಾ ಯ. ಕಲ್ಲಣ್ಣವರ , ವೈದ್ಯಾಧಿಕಾರಿಗಳಾದ ಡಾ || ವಿಶ್ವನಾಥ ಪಿ. ಅರ್ ಹಾಗೂ ಡಾ || ಮಮತಾ ಕಟಾವಕರ ನೇತ್ರ ಸಹಾಯಕ  ಶ್ರೀ ವಿ.ಎಂ. ರಾಜಪುರೋಹಿತ  ಆರೋಗ್ಯ  ನರೀಕ್ಷಕರಾದ ಶ್ರೀ ಎಂ. ಎಸ್.  ಹಿರೇಮಠ , ಶ್ರೀ ಎಸ್. ಬಿ. ಪೂಜಾರ  ಹಾಗೂ ಶ್ರೀ ಎಸ್. ಎನ್ ವಾಲಿಶೆಟ್ಟರ ಮತ್ತು ಅಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು ಎಂದು ಪ್ರಾ. ಆ. ಕೇಂದ್ರ ಬಿ. ಅರಳಿಕಟ್ಟಿ, ವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here