ಕನ್ನಡದಲ್ಲಿ ಶಿಕ್ಷಣ ಮಸೂದೆ ಜಾರಿಯಾಗಲಿ-ಕಂಬಾರ

0
24
loading...

ಬೆಳಗಾವಿ,3-ದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ರಾಜ್ಯದ ಭಾಷೆಗಳಲ್ಲಿಯೇ 1ನೇ ತರಗತಿಯಿಂದ 10ನೇ ತರಗತಿವರೆಗೆ ಕಡ್ಡಾಯವಾಗಿ  ಶಿಕ್ಷಣ ನೀಡುವ ಮಸೂದೆಯನ್ನು ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಂಡಿಸಬೇಕೆಂದು ಜ್ಞಾನಪೀಠ ಪ್ರಶಸ್ತಿ ವಿಜೇತ ಚಂದ್ರಶೇಖರ ಕಂಬಾರ ಬೆಳಗಾವಿಯಲ್ಲಿ ಒತ್ತಾಯಿಸಿದರು.

ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ ನಂತರ ಪ್ರಥಮ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಚಂದ್ರಶೇಖರ ಕಂಬಾರ ಮಾಧ್ಯಮ ಮಿತ್ರರ ಜೊತೆ ಮಾತನಾಡಿದರು. 1ನೇ ತರಗತಿಯಿಂದ 10ನೇಯ ತರಗತಿಯವರೆಗೆ ರಾಜ್ಯ ಸರಕಾರವೇ ಶಿಕ್ಷಣ ನೀಡುವ ನೀತಿಯನ್ನು ಕಡ್ಡಾಯಗೊಳಿಸಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ದರ್ಬಾರಿನಿಂದಾಗಿ ಪಾಲಕರು ಡೊನೇಶನ್ ಹಾವಳಿಗೆ ತುತ್ತಾಗಿದ್ದಾರೆ. ಕೆಲವೇ ಕೆಲವು ಶಿಕ್ಷಣ ಸಂಸ್ಥೆಗಳು ಸರಕಾರವನ್ನು ನಡುಗಿಸುವಷ್ಟು ಪ್ರಭಾವಶಾಲಿಗಳಾಗಿದ್ದು, ದೇಶದ ಎಲ್ಲ ರಾಜ್ಯಗಳಲ್ಲಿ ಆಯಾ ರಾಜ್ಯದ ಸರಕಾರುಗಳೇ ಶಿಕ್ಷಣ ನೀಡುವ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆಯೆಂದು ಹೇಳಿದರು.

ಕನ್ನಡ ಭಾಷೆಯೆಂಬುದು ಕೇವಲ ಭಾಷೆಯಲ್ಲ, ಇದೊಂದು ನಮ್ಮ ನಾಡಿನ ಸಂಸ್ಕ್ಕತಿಯೂ ಹೌದು. ಭಾಷೆಯನ್ನು ಸ್ವಾರ್ಥ ರಾಜಕೀಯಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಆದರೆ ಇದು ಗಡಿ ಪ್ರದೇಶದಲ್ಲಿ ಮಾತ್ರ ಇದು ನಿರಂತರವಾಗಿ ನಡೆಯುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಅಭಿನಂದನಾ ನಿರ್ಣಯಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರು ಪ್ರತಿಕ್ರಿಯೆ ಕೇಳಿದಾಗ ಚಂದ್ರಶೇಖರ ಕಂಬಾರರು  ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು ಸರಕಾರ ರಾಜ್ಯದ ಗಡಿಯನ್ನು ಸದೃಢಗೊಳಿಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು. ಗಡಿ ಭಾಗದ ಜನರ ಬದುಕು ಗಟ್ಟಿಯಾದರೆ ಗಡಿಭಾಗ ತಾನಾಗೀಯೆ ಗಟ್ಟಿಯಾಗುತ್ತದೆ ಎಂದರು.

ಬೇರೆ ರಾಜ್ಯಗಳಲ್ಲಿ ಅಲ್ಲಿಯ ರಾಜ್ಯ ಸರಕಾರಗಳು ತಮ್ಮ ತಮ್ಮ ಭಾಷೆಗಳ ತಂತಾಂ್ರಶವನ್ನು ಅಭಿವೃದ್ದಿಪಡಿಸಿದ್ದಾರೆ. ಕನ್ನಡದ ತಂತ್ರಾಂಶ ಅಭಿವೃದ್ದಿಗೊಳ್ಳಬೇಕು. ಈ ದಿಸೆಯಲ್ಲಿ ರಾಜ್ಯ ಸರಕಾರ ಗಮನಹರಿಸುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

loading...

LEAVE A REPLY

Please enter your comment!
Please enter your name here