ಕಳವು ಚಿನ್ನಾಭರಣ ಮಾರಾಟಗಾರರ ಬಂಧನ

0
11
loading...

ಮೂಡಲಗಿ,20-ಸ್ಥಳೀಯ  ಸಿಪಿಐ  ಎಸ್.ಎಮ್.ಓಲೇಕಾರ ಅವರ ಮಾರ್ಗದರ್ಶನಲ್ಲಿ ಪಿಎಸ್ಐ ಸುರೇಶ ಬಾಬು ಪವಾರ ಅವರ  ಸಿಬ್ಬಂದಿಗೆ ದೊರೆತ  ಗುಪ್ತ ಮಾಹಿತಿಯ ಮೇರೆಗೆ    ಬಂಗಾರ ಮತ್ತು ಬೆಳ್ಳಿ ಆಭರಣಗನ್ನು ಕಳವು  ಮಾಡಿದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡು ಗೋಕಾಕ ನ್ಯಾಯಾಲಯಕ್ಕೆ ಒಪ್ಪಿಸಿದ ವರದಿ ಮೂಡಲಗಿ ಠಾಣೆಯಲ್ಲಿ ನಡೆದಿದೆ.

ಮೂಡಲಗಿಯ ಜೀಪ್ ಸ್ಟ್ಯಾಂಡ್ ಹತ್ತಿರ 4 ಜನರು ಕೂಡಿಕೊಂಡು ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು

ಎಲ್ಲಿಂದಲ್ಲೌ ಕಳವು ಮಾಡಕೊಂಡಾಗಲೀ ಅಥವಾ ಕಪಟದಿಂದಾಗಲೀ ತೆಗೆದುಕೊಂಡು ಬಂದು ಮಾರಾಟ ಮಾಡುವಾಗ ಉದ್ದಪ್ಪ ಯಲ್ಲಪ್ಪ ಪೂಜೇರಿ (ವಡೆರಟ್ಟಿ) ಅರಬಣ್ಣಾ ಭೀಮಶೇಪ್ಪಾ ನಂದಿ ( ವಡೆರಟ್ಟಿ),  ಸವದತ್ತಿ ತಾಲೂಕಿನ ಕಡಬಿ ಶಿವಾಪೂರದ ಪ್ರಕಾಶ ಭೀಮಶೇಪ್ಪ ನಂದಿ ಮತ್ತು ಬಸು ಹಣಮಂತ ಚಿಗರಿ ( ಕಡಬಿ ಶಿವಾಪೂರ) ಇವರ ಕಡೆುಂದ ಸುಮಾರು 74 ಸಾವಿರ ಬೆಲೆ ಬಾಳುವ ಆಭರಣಗಳನ್ನು ಪಡೆದುಕೊಂಡು ಪ್ರಕರಣ  ದಾಖಿಸಿಕೊಂಡು ಹವಾಲ್ದಾರ ಜಿ.ಎಮ್. ರುದ್ರನ್ನವರ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಕಳ್ಳರು ಮೂಡಲಗಿಯಲ್ಲಿ ಬಂಗಾರ ಮಾರಾಟ ಮಾಡುವಾಗ  ಸಿಕ್ಕಿ ಬಿದ್ದಿದ್ದು, ಈಗ ಗೋಕಾಕ ನ್ಯಾಯಾಲಯದ ಆದೇಶದ ಮೇರೆಗೆ ಬಂಧಿತ ಆರೋಪಿಗಳು ನವ್ಹೆಂಬರ 2 ರವರೆಗೆ  ಜೈಲಿನಲ್ಲಿದ್ದಾರೆ.  ಯಾರಾದರೂ ಬಂಗಾರ ಮತ್ತು ಬೆಳ್ಳಿ ಆಭರಣಗಳನ್ನು ಕಳೆದುಕೊಂಡವರು ಮೂಡಲಗಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು  ತಿಳಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here