ಕಾಣೆಯಾಗಿದ್ದಾನೆ

0
33
loading...

ಬೆಳಗಾವಿ 2- ತಾಲೂಕಿನ ಬಾಗೇವಾಡಿ ನಿವಾಸಿ ಹಾಲಿ ಕ್ಯಾಂಪ್ ಗೃಹವಾಸಿ ನಾಗಪ್ಪಾ ಬಸವಣ್ಣಿ ನಾವಲಗಿ (30) ಸಪ್ಟಂಬರ 23 ರಿಂದ ಕಾಣೆಯಾಗಿದ್ದಾನೆ.

ದಿ. 23 ರಂದು ಮುಂಜಾನೆ 8 ಗಂಟೆಗೆ ಹುಬ್ಬಳ್ಳಿಗೆ ಹೋಗಿ ಬರುವದಾಗಿ ತಿಳಿಸಿದ ನಾಗಪ್ಪ ಇದುವರೆಗೂ ಹಿಂದಿರುಗಿಲ್ಲ. ಈ ಕುತರಿತು ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೋದಿಗೆಂಪು ಮೈಬಣ್ಣ, ದುಂಡು ಮುಖ, ಬಿಳಿ ಬಣ್ಣದ ಫುಲ್ ಶರ್ಟ, ನೀಲಿ ಬಣ್ಣದ ಜೀನ್ ಪ್ಯಾಂಟ್, ಕಾಲಲ್ಲಿ ಶೂಜ್ ಧರಿಸಿದ್ದಾನೆ. ಕನ್ನಡ, ಹಿಂದಿ, ಮರಾಠಿ, ತೆಲಗು ಭಾಷೆ ಬಲ್ಲವನಾಗಿದ್ದು, 5.4 ಅಡಿ ಎತ್ತರದವನಾಗಿದ್ದಾನೆ. ಮಾಹಿತಿ ಸಿಕ್ಕವರು ದೂ. 0831-100, 0831-2405234, 9480804051 ಇಲ್ಲಿ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

loading...

LEAVE A REPLY

Please enter your comment!
Please enter your name here