ಕಾರ್ಖಾನೆ ಮಾಲಿಕರ ಕಬ್ಬು ಬೆಳೆಗಾರರ ಮಾತುಕತೆ ವಿಫಲ

0
19
loading...

ಮುದೋಳ 24- ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿದ್ದ ಬಾಕಿ ಹಣ ಮತ್ತು ಪ್ರಸಕ್ತ ಹಂಗಾಮಿನ ಕಬ್ಬಿನ ದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ಕುಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲಿಕರ ಜೊತೆ ಚರ್ಚಿಸಲು ಇಲ್ಲಿನ ತಹಶೀಲ್ದಾರ ಕಚೇರಿ ಯಲ್ಲಿ ಸಭೆ ಕರೆಯಲಾಗಿತ್ತು.

ಜಿಲ್ಲೆಯ ಸಮೀರ ವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ, ರೈತರ ಸಹಕಾರಿ ಸಕ್ಕರೆ ಕಾರ್ಖಾನೆ, ಉತ್ತೂರಿನ ಐಸಿಪಿಎಲ್ ಸಕ್ಕರೆ ಕಾರ್ಖಾನೆಮ ಬೀಳಗಿ ಸಕ್ಕರೆ ಕಾರ್ಖಾನೆ, ಮುಧೋಳ ನಿರೋಳ ಸಕ್ಕರೆ ಕಾರ್ಖಾನೆ, ಜಮಖಂಡಿ ಸಕ್ಕರೆ ಕಾರ್ಖಾನೆ, ಜಿಮ್ ಸಕಸಕರೆ ಕಾರ್ಖಾನೆಗಳ ಪ್ರತಿನಿಧಿಗಳು ಸಭೆಯಲ್ಲಿ  ಪಾಲ್ಗೊಂಡು  ಪ್ರಸಕ್ತ  ಹಂಗಾಮಿಗೆ ಪೂರೈಸುವ ಕಬ್ಬಿಗೆ  ಪ್ರಥಮ ಕಂತಿನ ಬಿಲ್  ರೂ. 1800 ಹಾಗೂ 2010ನೆ-11ನೇ ಸಾಲಿಗೆ ರೂ. 200 ಬಾಕಿ ಹಣವನ್ನು ನೀಡುವದಾಗಿ ತಿಳಿಸಿದರು. ಇದನ್ನು ಕಬ್ಬು ಬೆಳೆಗಾರರ ಸಂಘ ಒಪ್ಪಲಿಲ್ಲ. ಆದರೆ ಕಾರ್ಖಾನೆ ಕಬ್ಬು ಪೂರೈಸುವ ರೈತರು ಸಭೆಗೆ ಆಗಮಿಸಿ ಬೆಳೆದು ನಿಂತಿರುವ ಕಬ್ಬನ್ನು ತಾವು  ಸ್ವ ಇಚ್ಛೆಯಿಂದ ಕಾರ್ಖಾನೆಗೆ ನೀಡುವದಾಗಿ ತಿಳಿಸಿದರು. ಇದರಿಂದ ವಾಗ್ವಾದ ನಡೆಯಿತು. ಕಾರ್ಖಾನೆ ಮಾಲೀಕರು ಹೆಚ್ಚಿನ ಬೆಲೆ ನೀಡಲು ಒಪ್ಪದಿರುವುದನ್ನು ಖಂಡಿಸಿ ಕಬ್ಬು ಬೆಳೆಗಾರರು ಕಾರ್ಖಾನೆ ಮಾಲೀಕರು ಮತ್ತು ಪ್ರತಿನಿಧಿಗಳನ್ನು ಕೆಲ ಸಮಯ ತಹಶೀಲ್ದಾರರ ಕಚೇರಿಯಿಂದ ಹೊರಗೆ ಬಿಡಲಿಲ್ಲ. ಆಗ ಡಿಸಿ ಅವರು ಕಾನೂನು ಸುವ್ಯವಸ್ಥೆ ಹದಗೆಟ್ಟರೆ ತಾವು ಏನು ಬೇಕಾದರೂ ಮಾಡಲು ಸಿದ್ದ ಎಂದರು.

loading...

LEAVE A REPLY

Please enter your comment!
Please enter your name here