ಕಿತ್ತೂರ ಉತ್ಸವಕ್ಕೆ ಅಂದಗೊಳ್ಳುತ್ತಿರುವ ಪಟ್ಟಣ

0
12
loading...

ಚನ್ನಮ್ಮ ಕಿತ್ತೂರು 18- ಕಿತ್ತೂರ ಉತ್ಸವ 2011 ಪೂರ್ವ ಸಿದ್ಧತೆ ಭರ್ಜರಿಯಿಂದ ನಡೆದಿದ್ದು ನಾದುರಸ್ತವಾದ ರಸ್ತೆಗಳ ತೇಪೆ ಕೆಲಸ, ಕೋಟೆ ಆವರಣ ಹಾಗೂ ಪಟ್ಟಣದ ಮುಖ್ಯ ಬೀದಿಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ಪೂನಾ-ಬೆಂಗಳೂರ ಹೆದ್ದಾರಿ ಪಕ್ಕದಲ್ಲಿರುವ ಚನ್ನಮ್ಮ ಪುತ್ಥಳಿ ವೃತ್ತದಿಂದ ಐತಿಹಾಸಿಕ ಕೋಟೆಗೆ ಸೇರುವ ಡಾಂಬರ ರಸ್ತೆ ಸ್ವಚ್ಛತಾ ಹಾಗೂ ಸುಣ್ಣ ಬಣ್ಣ ಬಳೆಯುವ ಕಾರ್ಯ ಪ್ರಗತಿಯಲ್ಲಿದೆ.

ಇನ್ನುಳಿದ ಕೆಲಸಗಳಾದ ಕೋಟೆ ಮುಂದಿನ ಮಲ್ಲಸರ್ಜ ವೃತ್ತದಿಂದ ಸಿದ್ದೇಶ್ವರ ದೇವಸ್ಥಾನ (ಗೊಂಬಿ ಗುಡಿ) ಹೋಗುವ ರಸ್ತೆ ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದು ಅದರ ಡಾಂಬರೀಕರಣ ಕಾರ್ಯ ಪ್ರಾರಂಭಿಸಲಾಗಿದೆ. ಹೀಗಾಗಿ ಒಟ್ಟಾರೆ ಕೆಲಸ ದ ಗುಣಮಟ್ಟ ಸಮಾಧಾನಕಾರ ವಾಗಿಲ್ಲವೆಂದು ಸ್ಥಳೀಯ ನಾಗರಿಕ ರಿಂದ ಕೇಳಿ ಬರುತ್ತಿದೆ. ಮೇಲಾಗಿ ಉತ್ಸವ ಆಚರಣೆ ತೀರಾ ಸಮೀಪಿಸು ತ್ತಿರುವದರಿಂದ ತರಾತುರಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ.

ಉತ್ಸವ ಭರ್ಜರಿಯಾಗ ಬಹುದೆಂದು ಆಸೆಯಿಂದ ವ್ಯಾಪಾರಸ್ಥರು ಕಿತ್ತೂರಿಗೆ ದೌಡಾಯಿಸುತ್ತಿದ್ದಾರೆ. ಒಟ್ಟಾರೆ ಕಿತ್ತೂರು  ಪಟ್ಟಣ ಮದುಮಗನಂತೆ ಸುಂದರ ಹಾಗೂ ಆಕರ್ಷಕಗೊಳ್ಳುತ್ತಿದೆ.

 

loading...

LEAVE A REPLY

Please enter your comment!
Please enter your name here