ಕೃಷ್ಣಶರ್ಮ ಹೆಸರಿನಲ್ಲಿ ಪ್ರಶಸ್ತಿ ನೀಡಲು ಬಳಿಗಾರ ಸಲಹೆ

0
25
loading...

 

ಬೆಳಗಾವಿ: ಅಕ್ಟೌಬರ್: 15: ಕನ್ನಡ ಕಾವ್ಯ, ಸಣ್ಣ ಕಥೆ, ಕಾದಂಬರಿ, ಜಾನಪದ ಕ್ಷೇತ್ರ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಧನೆಗೈದವರು ಸೇರಿದಂತೆ ಕನ್ನಡಪರ ಹೋರಾಟಗಾರರನ್ನು ಗುರುತಿಸಿ ಶ್ರೀ. ಬೆಟಗೇರಿ ಕೃಷ್ಣಶರ್ಮ ಅವರ ಹೆಸರಿನ ಪ್ರಶಸ್ತಿಯನ್ನು ನೀಡುವ ಕಾರ್ಯ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಮುಖಾಂತರ ನಡೆಯಲಿ ಎಂದು ಕನ್ನಡ ಮತ್ತು ಸಂಸ್ಕ್ಕತಿ ಇಲಾಖೆಯ ಆಯುಕ್ತರಾದ ಮನು ಬಳಿಗಾರ ಅವರು ತಿಳಿಸಿದ್ದಾರೆ.

ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿಂದು ಆನಂದ ಕಂದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಸ್ಮರಣಾರ್ಥ ಸ್ಥಾಪಿಸಲಾದ ಸ್ಮಾರಕ ಟ್ರಸ್ಟ್ನ್ನು ಉದ್ಘಾಟಿಸಿ ಮಾತನಾಡಿದ ಅವರು ಶ್ರೀ ಬೆಟಗೇರಿ ಕೃಷ್ಣಶರ್ಮ ಅವರು ಕನ್ನಡ ನಾಡು, ನುಡಿ, ಸಂಸ್ಕ್ಕತಿಯ ಬೆಳವಣಿಗೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರ ಕನಸುಗಳನ್ನು ನನಸು ಮಾಡುವ ಕಾರ್ಯ ಮುಂದುವರೆಸಿಕೊಂಡು ಹೋಗುವ ದಿಸೆಯಲ್ಲಿ ಶ್ರೀ ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ನ್ನು ಸ್ಥಾಪಿಸಲಾಗಿದ್ದು, ಇದರ ಮುಖಾಂತರ ಕನ್ನಡ ಮತ್ತು ಸಂಸ್ಕ್ಕತಿ ಬೆಳೆಸುವ ಕಾರ್ಯ ತೀವ್ರವಾಗಿ ನಡೆಯಲಿ ಎಂದು ಹಾರೈಸಿದರು.

ಇಂದು ಇಂಗ್ಲೀಷ ಭಾಷೆಯ ಅಪಾಯದಿಂದ ಮುಂದಿನ ಪೀಳಿಗೆಗೆ ಹಾಗೂ ಕನ್ನಡ ರಕ್ಷಣೆಗೆ ಹೋರಾಟ ಮಾಡುವ ಅವಶ್ಯಕತೆಯಿದೆ. ಕನ್ನಡ ಜಾಗೃತಿ ಕಾರ್ಯ ಪರಿಣಾಮಕಾರಿಯಾಗಿ ನಡೆಯಬೇಕಾಗಿದೆ. ಈ ದಿಸೆಯಲ್ಲಿ ಹಿರಿಯ ಸಾಹಿತಿಗಳು ನಮ್ಮೆಲ್ಲರಿಗೆ ಸ್ಮರಣೀಯರು ಹಾಗೂ ಮಾರ್ಗದರ್ಶಕರೂ ಆಗಿದ್ದಾರೆ. ಕರ್ನಾಟಕದಲ್ಲಿ ಕನ್ನಡ ನಾಡು-ನುಡಿ ಸಂಸ್ಕ್ಕತಿಯ ಬೆಳವಣಿಗೆಗೆ ಅಪಾರವಾದ ಪ್ರೌತ್ಸಾಹವಿದೆ. ಆಂಧ್ರ ಹಾಗೂ ಕೇರಳಕ್ಕೆ ನೋಡಿದಾಗ ಅಲ್ಲಿನ ಸಂಸ್ಕ್ಕತಿ ಇಲಾಖೆಗೆ ಕೇವಲ 20 ಕೋಟಿ ರೂ. ಮಾತ್ರ ಮೀಸಲಿಡಲಾಗಿದೆ. ಆದರೆ ಕರ್ನಾಟಕಕ್ಕೆ ವಾರ್ಷಿಕವಾಗಿ ಈ ಇಲಾಖೆಗೆ 200 ಕೋಟಿ ರೂ. ಅನುದಾನ ಒದಗಿಸಲಾಗುತ್ತಿದ್ದು, ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಅನೇಕ ರೀತಿಯಲ್ಲಿ ನೆರವನ್ನು ನೀಡಲಾಗುತ್ತಿದೆ. ಕಾರಣ ಸಾಹಿತಿಗಳು ಮತ್ತು ಕಲಾವಿದರು ಕನ್ನಡ ಸಂಸ್ಕ್ಕತಿ ಬೆಳೆಸಲು ಮುಂದೆ ಬರುವ ಅವಶ್ಯಕತೆಯಿದೆ ಎಂದು ಹೇಳಿಈಗ ಶ್ರೀ ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ದಲ್ಲಿ ಇನ್ನೂ ಮೂವರು ಸಾಹಿತಿಗಳನ್ನು ಸೇರಿಸುವ ಕುರಿತು ಪ್ರಯತ್ನಿಸಲಾಗುವುದು ಎಂದು ಹೇಳಿದರು. ಸಮಾರಂಭದಲ್ಲಿ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಶಿಬೆಳವಲು ಸುಗ್ಗಿ ಸಮಗ್ರ ಕಾವ್ಯಷಿ ಬಿಡುಗಡೆ ಮಾಡಿ ಮಾತನಾಡಿದ ನಾಡೋಜ ಚನ್ನವೀರ ಕಣವಿ ಅವರು ಶ್ರೀ ಬೆಟಗೇರಿ ಕೃಷ್ಣಶರ್ಮ ಅವರು ಆತ್ಮಗೌರವ ಕಾಪಾಡಿಕೊಂಡು ಬಂದ ಹಿರಿಯ ಜೀವಿಯಾಗಿದ್ದರು. ಆಧುನಿಕ ಕನ್ನಡ ಸಾಹಿತ್ಯದ ಭದ್ರ ಬುನಾದಿ ಹಾಕಿದ ಸಾಹಿತಿಗಳಲ್ಲಿ ಇವರು ಪ್ರಮುಖರಾಗಿದ್ದಾರೆ. ಅತ್ಯುತ್ತಮ ಸಣ್ಣ ಕಥೆ, ಸಾಹಿತ್ಯ, ಗೀತ ರೂಪಕಗಳು, ಜಾನಪದ ಗೀತೆಗಳ ಸಂಶೋಧನೆ ಹಾಗೂ ಪತ್ರಿಕೋದ್ಯಮದಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಅಪ್ಪಟ ಜನತೆಯ ಜಾನಪದ ಸಂಸ್ಕ್ಕತಿಯನ್ನು ಬೆಳೆಸಿ ಕನ್ನಡ, ನಾಡು ನುಡಿ ಸಂಸ್ಕ್ಕತಿಯ ಬೆಳವಣಿಗೆಗೆ ಅಪಾರವಾಗಿ ಶ ್ರಮಿಸಿದ್ದರು. ಅಂತಹವರ ಸ್ಮರಣಾರ್ಥ ಟ್ರಸ್ಟ್ ಸ್ಥಾಪಿಸಿರುವುದು ಪ್ರಶಂಸನೀಯವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಡಾ|| ಗಿರಡ್ಡಿ ಗೋವಿಂದರಾಜು, ಜಿನದತ್ತ ದೇಸಾಯಿ, ಸುರೇಶ ಬೆಟಗೇರಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕರ್ನಾಟಕ ರತ್ನ ನಾಡೋಜ ದೇ. ಜವರೇಗೌಡರು ಕನ್ನಡದ ಕಹಳೆ ಮೊಳಗಿಸಿ ಉತ್ತರ ಕರ್ನಾಟಕದಲ್ಲಿ ಕನ್ನಡ ಜಾಗೃತಿ ಮೂಡಿಸಿದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಆದರ್ಶ ಎಲ್ಲರಿಗೂ ಮಾರ್ಗದರ್ಶಕವಾಗಿದೆ. ಅವರ ಸ್ಮರಣಾರ್ಥ ಟ್ರಸ್ಟ್ ಸ್ಥಾಪಿಸಿರುವುದು ಅತ್ಯಂತ ಪ್ರಶಂಸನೀಯವಾಗಿದೆ ಎಂದು ಹೇಳಿದರು. ಸಮಾರಂಭದಲ್ಲಿ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀಮತಿ. ಆಶಾ ಕಡಪಟ್ಟಿ ಹಾಗೂ ಸಂಗಡಿಗರಿಂದ ಮತ್ತು ಧಾರವಾಡ ಆನಂದಕಂದ ಗೆಳೆಯರ ಬಳಗದಿಂದ ಶ್ರೀ ಬೆಟಗೇರಿ ಕೃಷ್ಣಶರ್ಮ ಅವರ ಗೀತೆಗಳನ್ನು ಹಾಡಲಾಯಿತು.

 

loading...

LEAVE A REPLY

Please enter your comment!
Please enter your name here