ಕೆ. ಎಲ್. ಇ. ವಿಶ್ವವಿದ್ಯಾಲಯದ ಆಶ್ರಯದಲ್ಲಿ ಟ್ರಿನಿಟಿ-2011 ಶಿಗ್ರ್ಯಾಂಡಿ ಓರಾಷಿ

0
42
loading...

ನಾಲ್ಕು ದಿನಗಳ ರಾಷ್ಟ್ತ್ರ ಮಟ್ಟದ ಸಾಂಸ್ಕ್ಕತಿಕ ಹಾಗೂ ಕ್ರೀಡಾ ಮೇಳ ಉದ್ಘಾಟನೆ

ಬೆಳಗಾವಿ – ಅ. 13. ಕೆ.ಎಲ್.ಇ. ವಿಶ್ವವಿದ್ಯಾಲಯದ ಆಶ್ರಯದಲ್ಲಿ ರಾಷ್ಟ್ತ್ರ ಮಟ್ಟದ ಸಾಂಸ್ಕ್ಕತಿಕ ಹಾಗೂ ಕ್ರಿಡಾ ಮೇಳವನ್ನು ವೈಧ್ಯ ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದು ಇಂದು ಸಂಜೆ ಡಾ|| ಬಿ.ಎಸ್. ಜಿರಗಿ ಸಬಾ ಭವನದಲ್ಲಿ ಈ ಮೇಳವನ್ನು ಉದ್ಘಾಟಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಮರಾಠಿ ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ನಟಿಯಾದ ಕು. ಸಾಯಿಲೋಕರ ಆಗಮಿಸಿ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡುತ್ತ ರಂಗಭೂಮಿಯನ್ನು ನಾನು ಅತೀಯಾಗಿ ಇಷ್ಟಪಡುತ್ತೇನೆ. ಜೊತೆಗೆ ಎಲ್ಲ ರೀತಿಯ ಕಲೆಯಲ್ಲೂ ನನಗೆ ಅಭಿರೂಚಿಯಿದೆ. ಕಲೆಯಲ್ಲಿ ಆತ್ಮತೃಪ್ತಿ ಸಿಗುತ್ತದೆ. ಆದ್ದರಿಂದ ಎಲ್ಲರೂ ಈ ವೇಧಿಕೆಯನ್ನು ಉಪಯೋಗಿಸಿಕೊಳ್ಳಿ ಎಂದು ಕರೆನಿಡಿದರು. ಅವರು ಮುಂದುವರೆದು ಮಾತನಾಡುತ್ತ ಕೆ.ಎಲ್.ಇ. ವಿಶ್ವವಿದ್ಯಾಲಯ ಕಲೆಗೆ ಪ್ರೊತ್ಸಾಹ ಕೊಡುತ್ತಿರುವುದು ಸಂತೋಷವಾಗಿದೆ. ಈ ಕ್ಯಾಂಪಸನ ವಾತಾವರಣ ಅಹ್ಲಾದಕರವಾಗಿದ್ದು ನನಗೆ ಇಲ್ಲಿ ವಿದ್ಯಾರ್ಥಿಯಾಗಬೇಕು ಅನಿಸುತ್ತದೆ. ನನ್ನ ಎಲ್ಲ ಚಿತ್ರಗಳನ್ನು ದಯವಿಟ್ಟು ನೋಡಿ ಎಂದು ಹೇಳಿದರು.

ಸಮಾರಂಭದ ಅತಿಥಿಯಾದ ಕೆ.ಎಲ್.ಇ. ವಿಶ್ವವಿದ್ಯಾಲಯದ ಉಪ ಕುಲಪತಿ ಡಾ|| ಚಂದ್ರಕಾಂತ ಕೊಕಾಟೆ ಮಾತನಾಡಿ ವಿದ್ಯಾರ್ಥಿಗಳ ಎಲ್ಲ ರೀತಿಯ ಪ್ರತಿಭೆಗೆ ವಿಶ್ವ ವಿದ್ಯಾಲಯ ಪ್ರೌತ್ಸಾಹ ಕೊಡುತ್ತದೆ. ಕಲೆ ಇಂದು ಬಹಳ ಮುಖ್ಯವಾಗಿದೆ. ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಾದಿಪತಿ ಹಾಗೂ ಕೆ.ಎಲ್.ಇ. ಸಂಸ್ಥೆಯ ಕಾರ್ಯಾಧ್ಯಕ್ಷ ಡಾ|| ಪ್ರಭಾಕರ ಕೋರೆ, ಮಾತನಾಡಿ ಕೆ.ಎಲ್.ಇ. ವಿಶ್ವವಿದ್ಯಾಲಯದ ಆವರಣಕ್ಕೆ ಬೇಟಿ ಕೊಟ್ಟ ಎಲ್ಲ ನಟರು ಇಂದು ವಿಶ್ವವಿಕ್ಯಾತರಾಗಿದ್ದಾರೆ. ಅವರಲ್ಲಿ ಅಮಿತಾಬಚನ್, ಐಶ್ವರ್ಯರೈ ಸುಧಾ ಚಂದ್ರನ್ ಪ್ರಮುಖರು ಅದರಂತೆ ಕು. ಸಾಯಿಲೋಕರ ಸಹ ಖ್ಯಾತಿ ಹೊಂದಲಿ ಎಂದ ಅವರು ವಿದ್ಯಾರ್ಥಿಗಳಲ್ಲಿ ಹುದುಗಿರುವ ಅನೇಕ ಕಲೆಗಳು ಹೊರಹುಮ್ಮಲು ಈ ಮೇಳದ ವಾತಾವರಣ ಅವಕಾಶ ಕಲ್ಪಿಸುತ್ತದೆ. ಇದನ್ನು ಸರಿಯಾಗಿ ಬಳಸಿಕೊಳ್ಳಿ, ಸಂಸ್ಥೆ ಎಲ್ಲ ರೀತಿಯ ಕಲೆಗಳಿಗೂ ಮಹತ್ವ ಕೊಟ್ಟಿದೆ ಎಂದು ಹೇಳಿದರು.

ವೇಧಿಕೆಯಲ್ಲಿ ವಿಶ್ವವಿದ್ಯಾಲಯದ ಕುಲಸಚೀವ ಡಾ|| ಪಿ. ಎಫ್. ಕೋಟೂರ, ಪ್ರಾಂಶುಪಾಲರಾದ ಡಾ|| ವ್ಹಿ.ಡಿ. ಪಾಟೀಲ, ಮೇಳದ ಕಾರ್ಯಧ್ಯಕ್ಷ ಡಾ|| ಎ.ಎಸ್. ಗೋದಿ, ಡಾ|| ಎನ್. ಎಮ್. ಪಾಟೀಲ, ಶ್ರೀ ಹೃಷಿಕೇಶ ಹಂಜಿ, ಕು. ರಿಕಿತಾ ಮುದೋಳ, ಉಪಸ್ಥಿತರಿದ್ದರು. ಕೆ.ಎಲ್.ಇ. ವಿಶ್ವವಿದ್ಯಾಲಯದ ಸಂಗೀತ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಂದ ಪ್ರಾರ್ಥನೆ ಗೀತೆ ನಡೆಯಿತು.

ಪ್ರಾರಂಭದಲ್ಲಿ ಡಾ|| ಎ.ಎಸ್.ಗೋದಿ ಸ್ವಾಗತ ಭಾಷಣ ಮಾಡಿ ಕೆ.ಎಲ್.ಇ. ವಿಶ್ವವಿದ್ಯಾಲಯ ಹಾಗೂ ಟ್ರಿನಿಟಿ ಮೇಳ ನಡೆದು ಬಂದ ಬಗೆಯನ್ನು ವಿವರಿಸಿದರು. ಡಾ|| ಎಮ್. ಎಮ್. ಪಾಟೀಲ, ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕೊನೆಯಲ್ಲಿ ಶ್ರೀ ಹೃಷಿಕೇಶ ಹಂಜಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದ ನಂತರ ಜೆ.ಎನ್.ಎಮ್.ಸಿ. ವಿದ್ಯಾರ್ಥಿಗಳಿಂದ ಉದ್ಘಾಟನಾ ನೃತ್ಯ ಆಕರ್ಷಣಿಯವಾಗಿ ನಡೆಯಿತು.

ಕೆ.ಎಲ್.ಇ. ವಿಶ್ವವಿದ್ಯಾಲಯ ಪ್ರತಿ ವರ್ಷವು ರಾಷ್ಟ್ತ್ರ ಮಟ್ಟದಲ್ಲಿ ಸಾಂಸ್ಕ್ಕತಿ ಹಾಗೂ ಕ್ರೀಡಾ ಮೇಳವನ್ನು ಆಯೋಜಿಸಿದ್ದು ಇದು 6ನೇ ಮೇಳವಾಗಿದೆ. ಇಂದಿನ ಮೇಳದಲ್ಲಿ ರಾಷ್ಟ್ತ್ರದಾದ್ಯಂತ 28 ವಿದ್ಯಾಲಯಗಳಿಂದ 1200 ವಿದ್ಯರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಬಂದಿದ್ದಾರೆ.

ಇಂದಿನಿಂದ ದಿನಾಂಕ 15 ರ ವರೆಗೆ 4 ದಿನಗಳ ಕಾಲ ನಡೆಯಲಿರುವ ಈ ಸಾಂಸ್ಕ್ಕತಿಕ ಹಾಗೂ ಕ್ರೀಡಾ ಮೇಳದಲ್ಲಿ ಸಾಂಸ್ಕ್ಕತಿಕ ಸ್ಪರ್ಧೆಗಳಾದ ರಂಗೋಲಿ, ಸೋಲೋ ಸಿಂಗಿಂಗ್, ನಾಟಕ, ಸಮೂಹ ನೃತ್ಯ, ಛಾಯಾ ಚಿತ್ರ ಹಾಗೂ ಕಿರು ಚಿತ್ರ ತಯಾರಿಕೆ, ಶೃಜನಶೀಲ ಬರವಣಿಗೆ, ಪೆಂಟಿಂಗ್, ಮಿಸ್ಟರ್ ್ಘ ಮಿಸ್ ಟ್ರಿನಿಟಿ, ಮ್ಯಾಡ್ ಆಡ್ಸ್, ಅಂತಾಕ್ಷರಿ, ಕ್ವಿಜ್, ಹೀಗೆ ಹಲವು ಸ್ಪಂರ್ಧೆಗಳು ಹಾಗೂ ಕ್ರೀಡೆಯಲ್ಲಿ ಪುಟಬಾಲ್, ತ್ರೌಬಾಲ್, ಕ್ರಿಕೆಟ್, ಟಗ್ಆಫ್ ವಾರ್, ಬ್ಯಾಟ್ಮಿಟನ್, ಬ್ಯಾಸ್ಕೆಟ್ ಬಾಲ್, ಟೇಬಲ್ ಟೆನಿಸ್ಸ್, ಚೆಸ್, ಕೆರಮ್, ಮುಂತಾದ ಸ್ಪರ್ಧೆಗಳು ನಡೆಯಲಿವೆ.

ಇಂದು ನಡೆದ ಟ್ರಿನಿಟಿ – 2011 ಶಿಗ್ರ್ಯಾಂಡಿ ಓರಾಷಿ ದಲ್ಲಿನ ವಿವಿಧ ಸಾಂಸ್ಕ್ಕತಿಕ, ಕಲೆ ಹಾಗೂ ಕ್ರಿಡೆ ವಿಭಾಗಗಳ ಸ್ಪರ್ಧೆಗಳು ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಇಂದು ಬೆಳಿಗ್ಗೆ 9.00 ಗಂಟೆಗೆ ಪ್ರಾರಂಭವಾದವು. ವಿ.ಕೆ. ಐ. ಎಸ್. ಬೆಳಗಾವಿ. ಬಿ.ಎಲ್.ಡಿ.ಇ. ವೈದ್ಯಕೀಯ ಕಾಲೇಜ, ಬಿಜಾಪೂರ. ಜಿ. ಆಯ್. ಓ. ಬೆಳಗಾವಿ. ಮನಿಪಾಲ ದಂತ ಮಹಾವಿದ್ಯಾಲಯ, ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ಮತ್ತು ಇತರ ಕೆ.ಎಲ್.ಇ. ವಿಶ್ವವಿದ್ಯಾಲಯದ, ಬೇರೆ ಬೇರೆ ಕಾಲೇಜುಗಳಿಂದ ಸುಮಾರು 1200 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಇಂದು ಸಾಂಸ್ಕ್ಕತಿಕ ವಿಭಾಗದಲ್ಲಿ – ಹಾಡಿನ ಸ್ಪರ್ಧೆ (ಪಾಶ್ಚಾತ್ಯ ಮತ್ತು ಕ್ಲಾಸಿಕಲ್) ನಾಟಕ, ರಂಗೋಲಿ, 60 ಸೆಂಕೆಂಡ ಪೇಮ್ ನಡೆದವು. ಕಲೆ ವಿಭಾಗದಲ್ಲಿ ಇಕೆಬನಾ, ಯಕ್ಸಟೆಂಪೂರ್, ಟೀ-ಶರ್ಟ ಪೆಟಿಂಗ್ ನಡೆದವು, ಹಾಗೂ ಕ್ರೀಡೆಯ ವಿಭಾಗದಲ್ಲಿ- ಕ್ರಿಕೆಟ್, ಪುಟ್ಬಾಲ್, ಥ್ರೌಬಾಲ್, ನಡೆದಿವೆ.

 

loading...

LEAVE A REPLY

Please enter your comment!
Please enter your name here