ಖಾಸಗಿ ಪದವಿ ಪೂರ್ವ ಕಾಲೇಜು ಸ್ಥಾಪನೆಗಾಗಿ ಅರ್ಜಿ ಆಹ್ವಾನ

0
21
loading...

 

ಹಾವೇರಿ.ಅಕ್ಟೌಬರ್.16ಃ ಕರ್ನಾಟಕ ಪದವಿ ಪೂರ್ವ ಕಾಲೇಜು (ಶೈಕ್ಷಣಿಕ, ನೋಂದಣಿ ಆಡಳಿತ ಮತ್ತು ಸಹಾಯಾನುದಾನ ಇತ್ಯಾದಿ) ನಿಯಮಗಳು 2006ರ ಪ್ರಕಾರ 2012-13ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ, ಶಾಶ್ವತ ಅನುದಾನ ರಹಿತ ಪದವಿಪೂರ್ವ ಕಾಲೇಜು ಪ್ರಾರಂಭಿಸಲು ಇಚ್ಛೆಯುಳ್ಳ ನೋಂದಾಯಿತ ಆಡಳಿತ ಮಂಡಳಿಗಳು ದಿನಾಂಕಃ 31-10-2011ರೊಳಗಾಗಿ ಶಿನಿರ್ದೇಶಕರು, ಪದವಿಪೂರ್ವ ಶಿಕ್ಷಣ ಇಲಾಖೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-12ಷಿ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಕಾಲೇಜು ಮಂಜೂರಾತಿಗಾಗಿ ಅರ್ಜಿ ಹಾಗೂ ವೇಳಾಪಟ್ಟಿಯನ್ನು ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತ ಭವನ ಹಾವೇರಿ ಅವರಿಂದಾಗಲಿ ಪಡೆದು, ಇಲಾಖೆಯ ಅಧಿಕೃತ ವೆಬ್ಸೈಟ್ ತಿತಿತಿ. ಠಿಣಜ.ಞಚಿಡಿ.ಟಿಛಿ.ಟಿ ನಿಂದಾಗಲಿ ಪಡೆದು, ಭರ್ತಿ ಮಾಡಿ ಸಕಾಲಕ್ಕೆ ಸಲ್ಲಿಸಬೇಕೆಂದು ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆ ಹಾಗೂ ಮಂಜೂರಿ ಹಂತಗಳು ಇಂತಿವೆ – ಕಾಲೇಜು ಪ್ರಾರಂಭಕ್ಕೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನ 31-10-2011 ಅರ್ಜಿ ಸಲ್ಲಿಸಿದ ಸಂಸ್ಥೆಗೆ ನಿರ್ದೇಶಕರು ಲೆಟರ್ ಆಫ್ ಇಂಟೆಂಡ್ ನೀಡಿಕೆಗೆ ಕೊನೆಯ ದಿನ ನವೆಂಬರ್ 11, ಸದರೀ ಇಂಟೆಂಟ್ ಪಡೆದ ಸಂಸ್ಥೆ ಅದೇ ವರ್ಷ ಕಾಲೇಜು ಆರಂಭಿಸುವುದಿದ್ದಲ್ಲಿ ಪೂರ್ವ ಸಿದ್ಧತೆ ಬಗ್ಗೆ ಪತ್ರ ಬರೆಯಲು ಕೊನೆಯ ದಿನ ನವೆಂಬರ್ 30, ಸಂಸ್ಥೆಯ ಕೋರಿಕೆ ಆಧರಿಸಿ ಸ್ಥಳ ಪರೀಶೀಲನೆಗೆ ಕೊನೆಯ ದಿನಾಂಕ ಡಿಸೆಂಬರ್ 31, ಜಿಲ್ಲಾ ತಪಾಸಣಾ ಸಮಿತಿ ವರದಿ ಸಲ್ಲಿಕೆ ಜನೆವರಿ 31, 2012. ನಿರ್ದೇಶಕರಿಂದ ಸರ್ಕಾರಕ್ಕೆ ಪ್ರಸ್ತಾವನೆ ದಿನಾಂಕ 2012ರ ಮಾರ್ಚ 31, ಮಂಜೂರಾದ ಪ.ಪೂ. ಕಾಲೇಜಿಗೆ ಮಾನ್ಯತೆ ನೀಡುವ ಕೊನೆಯ ದಿನಾಂಕ 15-4-2012 ಆಗಿರುತ್ತದೆಯೆಂದು ಅವರು ತಿಳಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here