ಗಣತಿ ಕಾರ್ಯದಲ್ಲಿ ನಿರ್ಲಕ್ಷ್ಯ ಸಲ್ಲದು-ಕಾಸೆ

0
13
loading...

ತೇರದಾಳ,23-ಪುರಸಭೆಯವರು ಗಣತಿ ದಾರರಿಗೆ, ಮೇಲ್ವಿಚಾರಕರಿಗೆ ಎಲ್ಲ ರೀತಿಯ ನೆರವು, ಸಹಕಾರ ನಡಲಿದ್ದು, ಸಾಮಾಜಿಕ, ಆರ್ಥಿಕ, ಜಾತಿ ಗಣತಿ ಕಾರ್ಯವನ್ನು 40 ದಿನಗಳಲ್ಲಿ ಸರಿಯಾಗಿ ನಿರ್ವಹಿಸಬೇಕೆಂದು ಪುರಸಭೆ ಮುಖ್ಯಾ ಧಿಕಾರಿ ಗೋಪಾಲ ಕಾಸೆ ಇಂದಿಲ್ಲಿ ಕರೆಯಿತ್ತರು.

ಇಲ್ಲಿಯ ಪುರಸಭೆ ಸಭಾ ಭವನದಲ್ಲಿ ಸಾಮಾಜಿಕ, ಆರ್ಥಿಕ, ಜಾತಿಗಣತಿ ಪೂರ್ವಭಾವಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕ ಬಿ.ಎಚ್. ಕೋಲ ಕಾರ ಹಾಗೂ ಎಮ್.ಜಿ. ಕಲಕಂಬ ಅಂಗನವಾಡಿ ಕಾರ್ಯ ಕರ್ತರಿಗೆ, ಮೇಲ್ವಿಚಾರಕರಿಗೆ, ಪುರಸಭೆ ಸಂಬಂಧಿಸಿದ ಸಿಬ್ಬಂದಿಗೆ ತರಬೇತಿ ನೀಡಿದರು. ನವ್ಹೆಂಬರ್ 1ರಿಂದ 40ದಿನಗಳವರೆಗೆ ಈ ಗಣತಿ ಕಾರ್ಯ ನಡೆಯಲಿದೆಯೆಂದು ತರಬೇತಿದಾರರು ವಿವರಿಸಿದರು.

16ಅಂಗನವಾಡಿ ಕಾರ್ಯ ಕರ್ತರು, ಮೂವರು ಮೇಲ್ವಿಚಾರಕರು ತರಬೇತಿಯಲ್ಲಿ ಭಾಗವಹಿಸಿದ್ದರು.

ಎನ್.ಜಿ.ಬಿರಡಿ ಸ್ವಾಗತಿಸಿ ದರು. ಜಿ.ಎಮ್.ಮೋಪಗಾರ ನಿರೂಪಿಸಿದರು. ಪಿ.ಕೆ.ಹುದ್ದಾರ ವಂದಿಸಿದರು.

 

 

loading...

LEAVE A REPLY

Please enter your comment!
Please enter your name here