ಗುತ್ತಿಗೆದಾರರಿಗೆ ಪಾವತಿಯಾಗದ ವಿಕ ಸಮ್ಮೇಳನದ ಕಾಮಗಾರಿ ಹಣ

0
6
loading...

ಕಚೇರಿಗೆ ಬೀಗ: ವಾರದ ಗಡುವು

ಬೆಳಗಾವಿ, ಅ.13: ಬೆಳಗಾವಿಯಲ್ಲಿ ಎರಡನೆ ವಿಶ್ವ ಕನ್ನಡ ಸಮ್ಮೇಳನ ನಡೆದು ಎಂಟು ತಿಂಗಳಾದರೂ ಇದುವರೆಗೂ ಸಮ್ಮೇಳನದ ಅಭಿವೃದ್ದಿ ಕಾಮಗಾರಿ ಪೂರೈಸಿದ ಗುತ್ತಿಗೆದಾರರಿಗೆ ಹಣ ಪಾವತಿಸಲಾಗಿಲ್ಲ. ಬಡ್ಡಿಯಿಂದ ಹಣ ಪಡೆದು ಕಾಮಗಾರಿ ಪೂರೈಸಲಾಗಿದ್ದು, ಪಡೆದ ಸಾಲ ಬಡ್ಡಿ ಹಣದೊಂದಿಗೆ ಏರುತ್ತಲೇ ಸಾಗಿದೆ. ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣ ಬಾಕಿ ಹಣ ಬಿಡುಗಡೆ ಮಾಡಬೇಕೆಂದು ಗುರುವಾರ ನಗರದ ಕೋಲಾಪುರ ವೃತ್ತದಲ್ಲಿನ ಪಂಚಾಯತ್ ರಾಜ್ ಇಂಜನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಗೆ ಬೀಗ ಹಾಕಿ ಸುಮಾರು 39ಕ್ಕೂ ಹೆಚ್ಚು ಗುತ್ತಿಗೆದಾರರು ಕಚೇರಿ ಎದುರಿಗೆ ಧರಣಿ ನಡೆಸಿದರು.

ಸಾಯಂಕಾಲ 4.30ಕ್ಕೆ ಕಚೇರಿ ಸಿಬ್ಬಂದಿಯನ್ನೆಲ್ಲ ಒಳಗಿಟ್ಟು ಬೀಗ ಹಾಕಲಾಯಿತು. ನಂತರ 6.15ರ ಸುಮಾರಿಗೆ ಸ್ಥಳಕ್ಕಾಗಮಿಸಿದ ಕಾರ್ಯನಿರ್ವಾಹಕ ದಾಮಣ್ಣವರ ಅವರೊಂದಿಗೆ ಸಮಾಲೋಚನೆ ನಡೆಸಿ ಮನವಿ ಸಲ್ಲಿಸಿ ಒಂದು ವಾರದೊಳಗೆ ಕಾಮಗಾರಿ ಹಣ ಬಿಡುಗಡೆ ಮಾಡಬೇಕೆನ್ನುವ ಮನವಿ ಸಲ್ಲಿಸಲಾಯಿತು. ನಂತರ ಬೀಗ ತೆರೆದು ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು. ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗೆಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರು 3 ಕೋಟಿಗೂ ಅಧಿಕ ಹಣ ತೊಡಗಿಸಿ ಕಾಮಗಾರಿ ಪೂರೈಸಿದ್ದಾರೆ. ನಿನ್ನೆಯಷ್ಟೆ ಗುತ್ತಿಗೆದಾರರು ಜಿಲ್ಲಾಧಿಕಾರಿಗಳನ್ನು ಹಾಗೂ ಜಿಪಂ ಸಿಇಓ ಅವರನ್ನು ಭೇಟಿ ಮಾಡಿದಾಗ ದೀಪಾವಳಿ ಒಳಗಾಗಿ ಹಣ ಬಿಡುಗಡೆಗೊಳಿಸುವ ಭರವಸೆಯನ್ನು ಇಲ್ಲಿ ಸ್ಮರಿಸಬಹುದ

loading...

LEAVE A REPLY

Please enter your comment!
Please enter your name here