ಚಿಮ್ಮಡ: ಭಾಗ್ಯವಂತಿದೇವಿ ಮೂರ್ತಿ ಮೆರವಣಿಗೆ ಇಂದು

0
29
loading...

ತೇರದಾಳ,23-ಇಲ್ಲಿಗೆ ಸಮೀಪದ ಚಿಮ್ಮಡ ಗ್ರಾಮದಲ್ಲಿ ಶ್ರೀಭಾಗ್ಯವಂತಿದೇವಿ ಜಾತ್ರಾಮಹೋತ್ಸವವನ್ನು ನಾಳೆ ಶುಕ್ರವಾರ ದಿ.21ರಿಂದ24ರವರೆಗೆ ನಡೆಸಲು ಕಮಿಟಿ ನಿರ್ಧರಿಸಿದೆ. ನಾಳೆ ದಿ.21ರಂದು ಶುಕ್ರವಾರ ಮುಂಜಾನೆ 8ಗಂಟೆಗೆ ಶ್ರೀಭಾಗ್ಯವಂತಿದೇವಿ ಮೂರ್ತಿ ಮೆರವಣಿಗೆಯು ಸಕಲ ವಾದ್ಯವೃಂದದೊಂದಿಗೆ ಶ್ರೀಮಹಾಲಿಂಗೇಶ್ವರ ಗುಡಿಯಿಂದ ಚಿಮ್ಮಡ ಭಾಗ್ಯವಂತಿದೇವಿ ದೇವಸ್ಥಾನದವರೆಗೆ ನಡೆಯುವದು.

ದಿ.23ರಂದು ರವಿವಾರ ರಾತ್ರಿ 8ಗಂಟೆಗೆ ಚಿಮ್ಮಡ ಕರಿಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ ಯಲ್ಲಪ್ಪ ಹ. ತಿಮ್ಮಾಪುರ ಹಾಗೂ ನಾವಲಗಿಯ ಶ್ರೀಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘದ ಭೀಮಪ್ಪ ಪೂಜಾರಿ ಮತ್ತು ಮೇಳದವರಿಂದ ಡೊಳ್ಳಿನ ಪದಗಳ ಗಾಯನ ನಡೆಯುವದು.

ದಿ.24ಸೋಮವಾರ ಮುಂಜಾನೆ 8ಗಂಟೆಗೆ ಶ್ರೀಭಾಗ್ಯವಂತಿ ದೇವಿಗೆ ಮುತೈದೆಯರಿಂದ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಕಲ ಸದ್ಭಕ್ತರಿಗೆ ಮಹಾಪ್ರಸಾದ ಇರುವುದೆಂದು ಜಾತ್ರಾ ಕಮೀಟಿ ತಿಳಿಸಿದೆ.

 

loading...

LEAVE A REPLY

Please enter your comment!
Please enter your name here