ಜಿಲ್ಲೆಯ 23 ಕೆರೆಗಳಲ್ಲಿ ಜಲಸಂವರ್ಧನ ಯೋಜನಾ ಸಂಘದಿಂದ ಮೀನು ಬಿತ್ತನೆ

0
27
loading...

 

ಹಾವೇರಿ.ಅ.16ಃ ಜಲ ಸಂವರ್ಧನ ಯೋಜನಾ ಸಂಘದ (ಜೆಎಸ್ವಾಯ್ಎಸ್) ವತಿಯಿಂದ ಜಿಲ್ಲೆಯ ವಿವಿಧ ಕೆರೆ ಬಳಕೆದಾರರ ಸಂಘಕ್ಕೆ ಹಸ್ತಾಂತರಿಸಲಾಗಿರುವ 23 ಕೆರೆಗಳಲ್ಲಿ ಇತ್ತೀಚೆಗೆ 3 ಲಕ್ಷ ಮೀನು ಮರಿಗಳನ್ನು ಬಿಡಲಾಯಿತು.

ಗ್ರಾಮ ಪಂಚಾಯತ ಅಧ್ಯಕ್ಷೆ ಶ್ರೀಮತಿ ಗಿರಿಜಮ್ಮ ರಾಗಿಕೊಪ್ಪ ಅವರು, ಹಿರೇಕೆರೂರು ತಾಲೂಕಿನ ಹಂಸಭಾವಿ ಹಾಗೂ ಮತ್ತಿಹಳ್ಳಿ ಕೆರೆಗಳಲ್ಲಿ ಮೀನುಮರಿ ಬಿಡುವುದರ ಮೂಲಕ ಹಿರೇಕೆರೂರು ತಾಲೂಕಿನ 12 ಕೆರೆಗಳಲ್ಲಿ ಮೀನುಮರಿ ಬಿಡುವ ಕಾರ್ಯಕ್ಕೆ ಚಾಲನೆ ನೀಡಿದರು. ಹಾನಗಲ್ಲ ತಾಲೂಕಿನ 7 ಕೆರೆಗಳಿಗೆ ಮೀನುಮರಿ ಬಿಡುವ ಕಾರ್ಯಕ್ರಮವನ್ನು ಕ್ಯಾಸನೂರು ಹಾಗೂ ಹುಲ್ಲತ್ತಿ ದೊಡ್ಡ ಕೆರೆಯಲ್ಲಿ ಜಿಲ್ಲಾ ಕೆರೆ ಬಳಕೆದಾರರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಕುಕ್ಕನಗೌಡ್ರ ಹಾಗೂ ಜಲಸಂವರ್ಧನ ಯೋಜನಾ ಸಂಘದ ಯೋಜನಾ ಸಮನ್ವಯಾಧಿಕಾರಿ ರಾಜಶ್ರೀ ಅಗಸರ ನೆರವೇರಿಸಿದರು. ಶಿಗ್ಗಾಂವ ತಾಲೂಕಿನ 7 ಕೆರೆಗಳಿಗೆ ಮೀನು ಬಿಡುವ ಸಮಾರಂಭ ತಿಮ್ಮಾಪೂರ ಕೆರೆ ಹಾಗೂ ಧುಂಡಸಿ ಬಳಿಯ ರಾಮನಹೊಂಡ ಕೆರೆಯಲ್ಲಿ ಜರುಗಿತು. ತಾಲೂಕು ಪಂಚಾಯತ ಸದಸ್ಯ ಮುದ್ದನಗೌಡ ಪಾಟೀಲ ಕೆರೆಗೆ ಮೀನು ಮರಿ ಬಿಟ್ಟು ಉದ್ಘಾಟಿಸಿದರು.

ಈ ಸಮಾರಂಭಗಳಲ್ಲಿ ಆಯಾ ಕೆರೆ ಬಳಕೆದಾರರ ಸಂಘದ ಪದಾಧಿಕಾರಿಗಳು ಜನಪ್ರತಿನಿಧಿಗಳು, ಗ್ರಾಮಸ್ಥರು, ಸಮೂಹ ಮಾರ್ಗದರ್ಶನ ತಂಡದ ಸಿಬ್ಬಂದಿ, ಜಿಲ್ಲಾ ಮೀನುಗಾರಿಕಾ ತಜ್ಞರಾದ ಕೃಷ್ಣಾಜಿ ಪವಾರ ಹಾಗೂ ಪರೀವೀಕ್ಷಣಾ ತಜ್ಞರಾದ ಬಿ.ಆರ್. ಚಲವಾದಿ ಪಾಲ್ಗೊಂಡಿದ್ದರು

loading...

LEAVE A REPLY

Please enter your comment!
Please enter your name here