ಡಾ.ಸ.ಜ. ನಾಗಲೋಟಿಮಠ ನೆನಪು ಕಾರ್ಯಕ್ರಮ

0
30
loading...

ಬನಹಟ್ಟಿ, ಅ.25: ಬನಹಟ್ಟಿ ಡಾ.ಸ.ಜ. ನಾಗಲೋಟಿಮಠ ಕನ್ನಡ ನಾಡು ಕಂಡ ಶ್ರೇಷ್ಠ ವೈದ್ಯರು, ಇವರು ಉತ್ತಮ ವಾಗ್ಮಿ, ಮಹಾನ್ ಸಂಶೋಧಕ, ಪ್ರಖ್ಯಾತ ಸಾಹಿತಿಗಳು ಹಾಗೂ ಸಂಘಟನಾಕಾರೂ ಆಗಿದ್ದರು ಎಂದು ಮಕ್ಕಳ ಸಾಹಿತಿ ಜಯವಂತ ಕಾಡದೇವರ ಹೇಳಿದರು.

ಅವರು ಇಲ್ಲಿಯ ಎಸ್ ಟಿ ಸಿ ಮಹಾವಿದ್ಯಾಲಯದಲ್ಲಿ ನಡೆದ ಡಾ.ಸ.ಜ. ನಾಗಲೋಟಿಮಠ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ಬ್ರೂಸೆಲ್ಲಾ, ಕುಷ್ಠರೋಗ, ಮಧು ಮೇಹ ಹಾಗೂ ಕ್ಯಾನ್ಸರ್ ಮೇಲಿನ ಅವರ ಸಂಶೋಧನೆಗಳು ವಿಶ್ವಮಾನ್ಯತೆ ಪಡೆದಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಬಿ.ಸಿ. ಹದ್ಲಿ ಮಾತನಾಡಿ ಡಾ. ಸಜನಾರ ಬಿಚ್ಚಿದ ಜೋಳಿಗೆ ಆತ್ಮ ವೃತಾಂತ ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ಒಂದು. ಅವರು ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದಾರೆ ಎಂದರು. ಪ್ರೌ. ಎಂ.ಆಯ್ ಮನುವಾಚಾರ್ಯ ಪ್ರಾರ್ಥಿಸಿ ಕೊನೆಗೆ ವಂದಿಸಿದರು.

 

loading...

LEAVE A REPLY

Please enter your comment!
Please enter your name here