ದೈವಜ್ಞ ಬ್ರಾಹ್ಮಣ ಸಂಘದ ಪೂರ್ವಭಾವಿ ಸಭೆ

0
26
loading...

ಚಿಕ್ಕೌಡಿ : ದೈವಜ್ಞ ದರ್ಶನ ಕಾರ್ಯಕ್ರಮದ ಅಂಗವಾಗಿ ಚಿಕ್ಕೌಡಿ ನಗರಕ್ಕೆ ನವೆಂಬರ 04 ರಂದು ಶುಕ್ರವಾರ ದೈವಜ್ಞ ಬ್ರಾಹ್ಮಣ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ ಆಗಮಿಸುತ್ತಿರುವ ಹಿನ್ನಲೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಪ್ರಮುಖರು ಇಂದು ನಗರದ ದೈವಜ್ಞ ಬ್ರಾಹ್ಮಣ ಸಂಘದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಮೇಶ.ಜಿ.ಕುಡತರಕರ ಮಾತನಾಡಿ, ದೈವಜ್ಞ ಬ್ರಾಹ್ಮಣ ಮಠವು ಶ್ರೀ ಕ್ಷೇತ್ರ ಕರ್ಕಿಯಲ್ಲಿ ಸ್ಥಾಪಿತವಾಗಿ 25 ವರ್ಷಗಳು ಸಂದಿವೆ. ಈ ದೀಶೆಯಲ್ಲಿ ರಜತಮಹೋತ್ಸವ ವರ್ಷದ ಆಚರಣೆಯ ನಿಮೀತ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿಯವರು ಸಮಾಜ ಬಾಂಧವರನ್ನು ಸಂದರ್ಶಿಸಲು ಹಾಗೂ ಸಂಘಟನಾತ್ಮಕ ಧರ್ಮ ಜಾಗೃತಿಯನ್ನು ಮೂಡಿಸಲು ದೈವಜ್ಞ ದರ್ಶನವೆಂಬ ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ರಾಜರಾಜೇಶ್ವರ ಸ್ವರೂಪಿಣಿ ಶ್ರೀ ಜ್ಞಾನೇಶ್ವರಿ ದೇವಿಯ ದಿವ್ಯ ರಥದೊಂದಿಗೆ ಚಿಕ್ಕೌಡಿ ನಗರಕ್ಕೆ ಆಗಮಿಸಲಿದ್ದು ಅವರಿಗೆ ಭವ್ಯ ಸ್ವಾಗತ ಕೋರಬೇಕೆಂದು ತಿಳಿಸಿದರಲ್ಲದೇ ಸಮಾಜ ಬಾಂಧವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.

ಸಂಘದ ಕಾರ್ಯದರ್ಶಿ ಜಗದೀಶ. ಜಿ. ಕುರಡೇಕರ ಸ್ವಾಮೀಜಿಯವರ ಆಗಮನದ ಹಿನ್ನಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಬೇಕೆಂದು ತಿಳಿಸಿದರಲ್ಲದೇ ಈ ದಿಶೇಯಲ್ಲಿ ಕೈಕೊಳ್ಳಬೇಕಾದ ಸಿದ್ದತೆಗಳ ಬಗ್ಗೆ ಸಲಹೆ ನೀಡಿದರು. ನವೆಂಬರ 04 ರಂದು ನಡೆಯುವ ಕಾರ್ಯಕ್ರಮದ ಅಂಗವಾಗಿ ಮಹಿಳಾ ಮಂಡಳದಿಂದ ಪೂರ್ಣಕುಂಭ ಮೆರವಣಿಗೆ ನಡೆಯಲಿದೆ.

ಶ್ರೀ ಸಾಯಿ ಮಂದಿರದಿಂದ ಸಕಲ ವಾದ್ಯ ವೃಂದದೊಂದಿಗೆ ಭವ್ಯ ಮೆರವಣಿಗೆ ಕೆ.ಸಿ.ರೋಡ ಮಾರ್ಗವಾಗಿ ಗುರುವಾರ ಪೇಠೆಯಲ್ಲಿಯ ಚರಮೂರ್ತಿ ಮಠಕ್ಕೆ ತಲುಪಲಿದೆ ನಂತರ ಶ್ರೀಗಳಿಂದ ಆಶೀರ್ವನ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ವಿನಾಯಕ ರೇವಣಕರ, ಪ್ರಕಾಶ ಕುಡತರಕರ, ಪ್ರಕಾಶ ಅನ್ವೇಕರ, ಅಶೋಕ ವೆರ್ಣೇಕರ, ವಿಠ್ಠಲ ವೇರ್ಣೇಕರ ಮಾತನಾಡಿ, ಸಮಾಜ ಬಾಂಧವರು ಒಂದೆಡೆ ಸೆರುವುದರೊಂದಿಗೆ ಧಾರ್ಮಿಕ ಕಾರ್ಯಕ್ರಮದ ಮೂಲಕ ಸಂಸ್ಕ್ತ್ರತಿಕ ಪರಂಪರೆಯನ್ನು ಮುನ್ನಡೆಡಿಕೊಂಡು ಹೋಗಬಹುದು ಈ ದಿಶೆಯಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಶ್ರಮೀಸಬೇಕೆಂದು ಹೇಳಿದರು.

ಪ್ರಕಾಶ ನೇತಲಕರ, ರಮೇಶ ಪಾಲನಕರ, ಸುರೇಶ ರಾಯ್ಕರ, ರಾಜೇಶ ಕಾಗಲಕರ, ಮೋಹನ ವೇರ್ಣೇಕರ, ವಿನಾಯಕ ಪಾಲನಕರ, ಸೂರಜ ಕುರಡೇಕರ, ವೆಂಕಟೇಶ ವೇರ್ಣೇಕರ, ನಾಗೇಶ ಪಾಲನಕರ, ರಾಜು ವೇರ್ಣೇಕರ,  ವೆಂಕಟೇಶ ಪಾಲನಕರ, ರಾಜೇಶ ಕುರಡೆಕರ, ದಿನಾನಾಥ ಪಾಲನಕರ, ನಾಗರಾಜ ರಾಯ್ಕರ, ಮಧುಕರ ಕುಡತರಕರ, ಸತೀಶ ಕುರ್ಡೆಕರ, ನಾಗರಾಜ ವೇರ್ಣೇಕರ, ಮಂಜುನಾಥ ಕುರಡೆಕರ ಸೇರಿದಂತೆ ಮತ್ತಿತರು ಸಮಾಜ ಬಾಂಧವರು ಸಭೆಯಲ್ಲಿ ಪಾಲ್ಗೊಂಡಿದ್ದರು…

 

loading...

LEAVE A REPLY

Please enter your comment!
Please enter your name here