ನಾಳೆಯಿಂದ ಎಸ್ಬಿಐ ಉತ್ಸವ

0
13
loading...

 

ಬೆಳಗಾವಿ, ಅ.13: ನಗರದ ಟಿಳಕವಾಡಿಯ ಮಿಲೆನಿಯಂ ಗಾರ್ಡನದಲ್ಲಿ ಇದೇ ದಿ. 15, 16 ಎರಡು ದಿನಗಳ ಕಾಲ ಎಸ್ಬಿಐ ಉತ್ಸವ ನಡೆಯಲಿದೆ. ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8ರ ವರೆಗೆ ಉತ್ಸವ ನಡೆಯಲಿದೆ.

ಉತ್ಸವದಲ್ಲಿ ಕಟ್ಟಡ ನಿರ್ಮಾತರರು ಹಾಗೂ ಆಟೋ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಮನೆ ಸಾಲ ಹಾಗೂ ವಾಹನಗಳ ಖರೀದಿಗೆ ಅನುವು ಕಲ್ಪಿಸಲಾಗಿದೆ. ಶೇ.0.25 ರಿಯಾಯಿತಿ ದರದಲ್ಲಿ ಮನೆ ಸಾಲ ನೀಡಲಾಗುತ್ತಿದ್ದು, ವಾಹನಗಳ ಖರೀದಿಗೆ ಪರೀಶೀಲನೆಗೆ ಖರ್ಚು ವೆಚ್ಚದ ಶುಲ್ಕವನ್ನು ಕೈಬಿಡಲಾಗಿದೆ. ಉತ್ಸವದಲ್ಲಿ ಎಸ್ಬಿಐ ಲೈಫ್ ಹಾಗೂ ಎಸ್ಬಿಐ ಮಾಚ್ಯುರಿಟಿ ಪಾಲ್ಗೊಳ್ಳುತ್ತಿವೆ. ಸಾಲ ಪಾವತಿಗೆ ಎಸ್ಬಿಐ ಫ್ರಿಡಂ ಮೊಬೈಲ್ ಬ್ಯಾಂಕಿಂಗ್ ಸೇವೆ, ಎಸ್ಬಿಐ ಇಂಟರನೆಟ್ ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ಎಸ್ಬಿಐ ಹಣಕಾಸು ಯೋಜನೆ ಮತ್ತು ಸಲಹೆಯ ಸೌಲತ್ತುಗಳನ್ನು ಕಲ್ಪಿಸಲಾಗಿದೆ. ಮನೆ ಸಾಲ ಹಾಗೂ ಕಾರ ಇತ್ಯಾದಿ ಸಾಲದ ಅಪೇಕ್ಷೆಗಳು ದಿ.15 ರಿಂದ ನಡೆಯಲಿರುವ ಎರಡು ದಿನದ ಎಸ್ಬಿಐ ಉತ್ಸವದಲ್ಲಿ ಪಾಲ್ಗೊಂಡು ಉತ್ಸವದ ಲಾಭ ಪಡೆಯುವಂತೆ ಬ್ಯಾಂಕ್ ಅಧಿಕಾರಿಗಳು ಗುರುವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು

loading...

LEAVE A REPLY

Please enter your comment!
Please enter your name here