ಪಿಡಿಒ ಆತ್ಮಹತ್ಯೆ: ಆರೋಪಿಗಳನ್ನು :ಜಾಮೀನು ರಹಿತ ಬಂಧಿಸಿ

0
31
loading...

ಖಾನಾಪೂರ 19- ಗುಲ್ಬರ್ಗಾ ಜಿಲ್ಲೆಯ ಚಿತ್ರಾಪೂರ ತಾಲೂಕಿನ  ಸಣ್ಣೂರ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿ ಮಂದಾಕಿನಿ ಯಕಲೂರ ಅವರು ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರ ಕಿರುಕಳ ತಾಳದೇ ಆತ್ಮಹತ್ಯೆಗೆ ಶರಣಾದ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಜಾಮೀನು ರಹಿತವಾಗಿ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪಿಡಿಓ ಸಂಘದ ಅಧ್ಯಕ್ಷ ಗಣೇಶ ಕೆ.ಎಸ್. ನೇತೃತ್ವದಲ್ಲಿ ಪಿಡಿಓಗಳು ತಹಶೀಲ್ದಾರ ಎಸ್.ವೈ. ಬಜಂತ್ರಿ ಮತ್ತು ತಾ.ಪಂ. ಇಒ ಬಾಳಕೃಷ್ಣ ಎಸ್. ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಾಲರಾಜ ಬಜಂತ್ರಿ ಪಿಡಿಓ ಗಳಿಗೆ ಕೆಲಸದ ಸಮಯದಲ್ಲಿ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ಆ. 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ರಾಜ್ಯದ ಎಲ್ಲ ಪಿಡಿಓಗಳು ಸೇರಿ ಸಾಮೂಹಿಕ ರಾಜೀನಾಮೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸಂಘದ ಸನೀಲ ಎಂ ಸಂಘದ ಸದಸ್ಯರು ಉಪಸ್ಥಿತರಿದ್ದರು.

 

 

loading...

LEAVE A REPLY

Please enter your comment!
Please enter your name here