ಬರ ಪರಿಹಾರ ಕಾಮಗಾರಿಗೆ ಇನ್ನೂ ಮೀನಾ ಮೇಷ:ಉಮಾಶ್ರೀ

0
13
loading...

ಅಥಣಿ, 4ಅಥಣಿ ಕೂಡಲೇ  ಮಳೆ  ವೈಫಲ್ಯ ಕಂಡಿರುವ ಜಿಲ್ಲೆಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವ  ಜೊತೆಗೆ  ಸಮಾ ರೋಪಾದಿಯಲ್ಲಿ  ಪರಿಹಾರ ಕಾಮಗಾರಿ ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕಿ  ಚಿತ್ರನಟಿ ಉಮಾಶ್ರೀ  ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಇಲ್ಲಿಯ  ಸಾರಿ ಬಜಾರ್ನಲ್ಲಿ  ಗಾಂಧಿ ಜಯಂತಿ ಅಂಗವಾಗಿ ಭಾನುವಾರ  ಬ್ಲಾಕ್ ಕಾಂಗ್ರೆಸ್  ಸಮಿತಿ ಹಮ್ಮಿಕೊಂಡಿದ್ದ  ಜನರೊಂದಿಗೆ  ಮುಖಾಮುಖಿ  ಕಾರ್ಯಕ್ರಮ ವನ್ನುದ್ದೇಶಿಸಿ  ಮಾತನಾಡುತ್ತಿದ್ದ ಅವರು, ರಾಜ್ಯದ ಬಹುತೇಕ  ಕಡೆ ರೈತರು  ಇಂದು ಮಳೆ  ಮತ್ತು ವಿದ್ಯುತ್ ಸಮಸ್ಯೆಯಿಂದ  ಕಂಗಲಾಗಿದ್ದರೂ ಕೂಡ ಆಡಳಿತಾರೂಢ ಬಿ.ಜೆ.ಪಿ.  ನಾಯಕರು  ಮೋಟು ಮಸ್ತಿ ಉಡಾಯಿಸುವರಲ್ಲಿಯೇ  ತಲ್ಲೀನರಾಗಿ ದ್ದಾರೆಂದರು.

ರಾಜ್ಯದ ಬಹುತೇಕ ಕಡೆ ಮುಂಗಾರು ಮತ್ತು  ಹಿಂಗಾರು ವಿಫಲಗೊಂಡು ರೈತರಲ್ಲಿ  ಕಂಗಲಾಗಿದ್ದರೂ ಬಿ. ಜೆ.ಪಿ. ಸರ್ಕಾರ ಮಾತ್ರ ಬರ ಪರಿಹಾರ ಕಾಮಗಾರಿ  ಕೈಗೊಳ್ಳುವಲ್ಲಿ ಇನ್ನೂವರೆಗೆ ಮೀನಾಮೇಷ ಎಣಿಸುತ್ತಿದೆ ಎಂದು  ಆರೋಪಿಸಿದರು.

ಮಾಜಿ ಇಂಧನ ಸಚಿವ ವೀರಕುಮಾರ ಪಾಟೀಲ  ಮಾತನಾಡಿ  ರಾಜ್ಯದಲ್ಲಿ ವಿದ್ಯುತ್ ಕ್ಷಾಮ  ಪ್ರತಿಯೊಂದು  ಜಿಲ್ಲೆಗಳಲ್ಲಿ ಕಾಡುತ್ತಿದ್ದರೂ ರಾಜ್ಯ ಸರ್ಕಾರ  ಇದೂವರೆಗೂ  ಕೂಡ ವಿದ್ಯುತ್ಕ್ಷಾಮ  ಪ್ರತಿಯೊಂದು   ಜಿಲ್ಲೆಗಳಲ್ಲಿ ಕಾಡುತ್ತಿದ್ದರೂ ರಾಜ್ಯ ಸರ್ಕಾರ  ಇದುವರೆಗೂ   ಕೂಡ  ವಿದ್ಯುತ್  ಖರೀದಿಗೆ ಮುಂದಾಗಿಲ್ಲವೆಂದು  ದೂರಿದರು.

ಕಾಂಗ್ರೆಸ್  ಪಕ್ಷ ರಾಜ್ಯದಲ್ಲಿ  ಆಡಳಿತದಲ್ಲಿದ್ದಾಗ ವಿದ್ಯುತ್  ವಿಷಯದಲ್ಲಿ ಸ್ವಾವಲಂಬಿಗೆ ಸಾಧಿಸಲಾಗಿತ್ತು. ಆದರೆ ನಂತರ ಬಂದ ಬಿಜೆಪಿ ಸರ್ಕಾರ  ಈಗಿನ ಅಗತ್ಯಕ್ಕೆ  ಅನುಗುಣವಾಗಿ  ವಿದ್ಯುತ್  ಉತ್ಪಾದನಾ  ಸಾಮರ್ಥ್ಯವನ್ನು  ಹಚ್ಚಿಸಿಕೊಳ್ಳದಿರುವ ಪರಿಣಾಮ ಈಗ ಜನತೆ  ವಿದ್ಯತ್ ಬರ ಅನುಭವಿಸುವಂತಾಗಿದೆ ಎಂದು ಹರಿಯಾಯ್ದರು.

ದಿಗ್ವಿಜಯ ಸಿಂಗ ಪವಾರ ದೇಸಾಯಿ ಕಿರಣ ಕುಮಾರ ಪಾಟೀಲ ಮಹೇಶ ಕಮಠಳ್ಳಿ ಅರ್ಷದ ಗದ್ಯಾಳ ಬಸವರಾಜ ಕುಚನೂರು ಅನೀಲ ಸುಣಧೋಳಿ ಗಜಾನನ ಮಂಗಸೂಳಿ ಮಾತನಾಡಿದರು.

ಬಸವರಾಜ ಬುಟಾಳಿ, ರಮೇಶ ಸಿಂದಗಿ ಸುನೀಲ ಸಂಹ ಶ್ಯಾಮರಾವ ಪೂಜಾರಿ, ಬಿ.ಎ. ಚವ್ಹಾಣ, ರಮೇಶ ಪಾಟೀಲ, ರಾಜು ಮದಭಾವಿ,  ಬಾಬುರಾವ  ಖೇಮಲಾಪೂರ, ಸಿದ್ದಾರ್ಥ  ಸಿಂಗೆ ಶ್ರೀಕಾಂತ  ಪೂಜಾರಿ ಇತರರು  ಇದ್ದರು

loading...

LEAVE A REPLY

Please enter your comment!
Please enter your name here