ಬರ ಹರಿಹಾರ ಕಾಮಗಾರಿಗೆ ಇನ್ನೂ ಮೀನಾಮೇಷ

0
4
loading...

ಅಥಣಿ 3- ಕೂಡಲೇ ಮಳೆ ವೈಫಲ್ಯ ಕಂಡಿರುವ ಜಿಲ್ಲೆಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸುವ ಜೊತೆಗೆ ಸಮರೋಪಾದಿ ಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳ ಬೇಕೆಂದು ಕಾಂಗ್ರೆಸ್ ನಾಯಕಿ ಚಿತ್ರ ನಟಿ ಉಮಾಶ್ರೀ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

                ಇಲ್ಲಿಯ ಸಾರಿ ಬಜಾರಿ ನಲ್ಲಿ ಗಾಂಧಿ ಜಯಂತಿ ಅಂಗವಾಗಿ ಭಾನುವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಜನರೊಂದಿಗೆ ಮುಖಾಮುಖಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ರಾಜ್ಯದ ಬಹುತೇಕ ಕಡೆ ರೈತರು ಇಂದು ಮಳೆ, ವಿದ್ಯುತ್ ಸಮಸ್ಯೆಯಿಂದ ಕಂಗಾಲಾಗಿದ್ದರೂ ಕೂಡ ಆಡಳಿತಾ ರೂಢ ಬುಜೆಪಿ ನಾಯಕರು ಮೋಜು ಮಸ್ತಿ ಉಡಾಯಿಸುವದರಲ್ಲಿಯೇ ತಲ್ಲೀನರಾಗಿದ್ದಾರೆಂದರು.

                ರಾಜ್ಯದ ಬಹುತೇಕ ಕಡೆ ಮುಂಗಾರು ಮತ್ತು ಹಿಂಗಾರು ವಿಫಲ ಗೊಂಡು ರೈತರೆಲ್ಲ ಕಂಗಾಲಾಗಿದ್ದರೂ.

                ರಾಜ್ಯದ ಬಹುತೇಕ ಕಡೆ ಮುಂಗಾರು ಮತ್ತು ಹಿಂಗಾರು ವಿಫಲ  ಗೊಂಡು ರೈತರೆಲ್ಲ ಕಂಗಾಲಾಗಿದ್ದರೂ, ಬಿಜೆಪಿ ಸರ್ಕಾರ ಮಾತ್ರ ಬರ ಪರಿಹಾರ ಕಾಮಗಾರಿ ಕೈಗೊಳ್ಳುವಲ್ಲಿ ಇನ್ನೂವರೆಗೂ ಮೀನಾಮೇಶ ಎಣಿಸುತ್ತಿದೆ ಎಂದು ಆರೋಪಿಸಿದರು.

                ಮಾಜಿ ಸಚಿವ ಇಂಧನ ಸಚಿವ ವೀರಕುಮಾರ ಪಾಟೀಲ ಮಾತನಾಡಿ ರಾಜ್ಯದಲ್ಲಿ ವಿದ್ಯುತ್ ಕ್ಷಾಮ ಪ್ರತಿಯೊಂದು ಜಿಲ್ಲೆಗಳಲ್ಲಿ ಕಾಡುತ್ತಿದ್ದರೂ ರಾಜ್ಯ ಸರಕಾರ ಇನ್ನೂವರೆಗೂ ಕೂಡಾ ವಿದ್ಯುತ್ ಖರೀದಿಗೆ ಮುಂದಾಗಿಲ್ಲವೆಂದು ದೂರಿದರು. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತವಿದ್ದಾಗ ವಿದ್ಯುತ್ ವಿಷಯದಲ್ಲಿ ಸ್ವಾವಲಂಬನೆ ಸಾಧಿಸಲಾಗಿತ್ತು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ಈಗಿನ ಅಗತ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿ ಕೊಳ್ಳದಿರುವ ಪರಿಣಾಮ ಈಗ ಜನತೆ ವಿದ್ಯುತ್ ಬರ ಅನುಭವಿಸುವಂತಾಗಿದೆ ಎಂದು ಹರಿಹಾಯ್ದರು.

                ದಿಗ್ವಿಜಯಗ್ ದೇಸಾಯಿ ಕಿರಣಕುಮಾರ ಪಾಟೀಲ, ಮಹೇಶ ಕುಮಠಳ್ಳಿ  ಅರ್ಷದ ಗದ್ಯಾಳ ಬಸವರಾಜ ಕುಚನೂರ ಅನೀಲ ಸುಣಧೋಳಿ  ಗಜಾನನ ಮಂಗಳಸೂಳಿ ಮಾತನಾಡಿದರು.

loading...

LEAVE A REPLY

Please enter your comment!
Please enter your name here