ಬಸವೇಶ್ವರ ಮೂರ್ತಿ ಮೆರವಣಿಗೆ

0
17
loading...

ಖಾನಾಪೂರ 24- ಕರ್ನಾಟಕ ರಾಜ್ಯೌತ್ಸವವನ್ಜು ವಿಜೃಂಭಣೆಯಿಂದ ಆಚರಿಸಲು ತಾಲೂಕು ಪಂಚಾಯತಿ ಕಚೇರಿಯಲ್ಲಿ ಈಚೆಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ನವೆಂಬರ 1 ರಂದು ಮೆರವಣಿಗೆಯಲ್ಲಿ ಸಂಘ-ಸಂಸ್ಥೆಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಲು ಎಲ್ಲರೂ ಉತ್ಸಾಹ ತೋರಿಸಬೇಕು ಎಂದು ರಾಜ್ಯೌತ್ಸವ ಸಮಿತಿ ಅಧ್ಯಕ್ಷ ತಹಶೀಲ್ದಾರ ಶಿವಾನಂದ ಭಜಂತ್ರಿ ಹೇಳಿದರು. ದಶರಥ ನೋಶಿ ಇದನ್ನು ಬೆಂಬಲಿಸಿದರು. ನ. 2 ರಂದು ಸಂಜೆ 6-30ಕ್ಕೆ ಪಟ್ಟಣದ ಶಾಸಕರ ಮಾದರಿ ಕನ್ನಡ ಶಾಲೆ ಆವರಣದಲ್ಲಿ ಉಚಿತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಪಟ್ಟಣದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನೆ ಸಮಿತಿ ಅಧ್ಯಕ್ಷ ಅಪ್ಪಯ್ಯಾ ಕೋಡಳ್ಳಿ ಅವರು ರಾಜ್ಯೌತ್ಸವ ಮೆರವಣಿಗೆಯಲ್ಲಿ ಮೂರ್ತಿ ತರುವದಾಗಿ ಹೇಳಿದಾಗ ಸಭೆ ಒಪ್ಪಿಗೆ ನೀಡಿತು. ತಾ.ಪಂ. ಇ.ಓ. ಬಾಳಕೃಷ್ಣ ಎಸ್, ಅಧ್ಯಕ್ಷ ಸಯ್ಯಾಜಿ ಪಾಟೀಲ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಗದೀಶ ಹೊಸಮನಿ ಇತರರು ಇದ್ದರು. ಸಭೆಯಲ್ಲು ವಿವಿಧ ಸಮಿತಿಗಳನ್ನು ರಚಿಸಲಾಗಿದೆ.

 

 

loading...

LEAVE A REPLY

Please enter your comment!
Please enter your name here