ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ

0
20
loading...

ಬಾಗಲಕೋಟ, ಅ.25: ಬಾಗಲಕೋಟ ತಾಲೂಕಿನ ಸುಕ್ಷೇತ್ರ ಮುರನಾಳ ಪುನರ್ವಸತಿ ಕೇಂದ್ರದಲ್ಲಿ ದಿ.25ರಂದು ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದೆ.

ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ಪಲ್ಲಕ್ಕಿ ಉತ್ಸವ, ಸುಮಂಗಲಿಯರಿಂದ ಆರತಿ, ಡೊಳ್ಳು ಕುಣಿತ, ಬ್ಯಾಂಜೋ ಮೇಳಗಳು, ಶ್ರಿ ದುಸಂಗಿರಾಯ ಗಾಯನ ಸಂಘ ಸಾ. ಮೆಟಗುಡ್ಡ ಇವರಿಂದ ಡೊಳ್ಳಿನ ಪದಗಳು ಜರುಗುವುದು.  ಸಕಲ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುವುದು ಎಂದು ಮುರನಾಳ ಗ್ರಾಮದ ಹಾಗೂ ಸುತ್ತಮುತ್ತಲಿನ ಸರ್ವ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿ ಪ್ರಧಾನ ಕಾರ್ಯದರ್ಶಿ ಮಳಿಯಪ್ಪ ಮ. ಗುಳಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here