ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ

0
13
loading...

ಬೆಳಗಾವಿ,3-ಸರಕಾರಿ ಕಚೇರಿಗಳಲ್ಲಿ ನೀಡುವ ಎಲ್ಲ ಅಗತ್ಯ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿಯೇ ನೀಡಬೇಕೆಂದು ನಾಡದ್ರೌಹಿ ಮಹಾರಾಷ್ಟ್ತ್ರ ಏಕೀಕರಣ ಸಮಿತಿಯ ಕಾರ್ಯಕರ್ತರು ಸಮೀಪದ ದೇಸೂರು ಗ್ರಾಮದ ಬಳಿ ರಸ್ತೆ ತಡೆ ನಡೆಸಿ ಎಂದಿನಂತೆ ತಮ್ಮ ಪುಂಡಾಟಿಕೆಯನ್ನು ಪ್ರದರ್ಶಿಸಿದ್ದಾರೆ.

ಪಡಿತರ ಚೀಟಿ, ಮರಣ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ, ಭೂದಾಖಲೆ ಸೇರಿದಂತೆ ಎಲ್ಲ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿಯೇ ನೀಡಬೇಕು. ಕರ್ನಾಟಕ ರಾಜ್ಯದ ಬಸ್ಸಿನ ನಾಮಫಲಕಗಳಲ್ಲಿ ಮರಾಠಿ ಭಾಷೆಯನ್ನು ಬಳಸಬೇಕು. ಬೆಳಗಾವಿ ನಗರದ ಅಂಗಡಿ ಮುಗ್ಗಟ್ಟುಗಳಲ್ಲಿನ ನಾಮಫಲಕಗಳಲ್ಲಿ ಮರಾಠಿ ಭಾಷೆಯನ್ನು ಬಳಸಿಕೊಳ್ಳಲು ಸರಕಾರ ಅವಕಾಶ ಮಾಡಿಕೊಡಬೇಕೆಂಬ ಅನೇಕ ಮೊಂಡುತನದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಾಡದ್ರೌಹಿಗಳು ಬೆಳಗಾವಿ ಖಾನಾಪೂರ ರಸ್ತೆಯಲ್ಲಿ 1 ಗಂಟೆಗೂ ಹೆಚ್ಚು ಕಾಲ ತಮ್ಮ ಪುಂಡಾಟಿಕೆಯನ್ನು ಪ್ರದರ್ಶಿಸಿದರು.

ಜಿಲ್ಲಾಧಿಕಾರಿಗಳ ಕೇಂದ್ರ ಸ್ಥಾನಿಕ ಸಹಾಯಕ ವಿ.ಎಸ್.ಚೌಗುಲೆ ಮನವಿ ಸ್ವೀಕರಿಸಲು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಾಗ ಎಂಇಎಸ್ ನಾಯಕರು ತಮ್ಮ ಪುಂಡಾಟಿಕೆಯನ್ನು ಮತ್ತಷ್ಟು ಹೆಚ್ಚಿಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆಂದು ಲಿಖಿತ ಭರವಸೆ ನೀಡಿದರೆ ಮಾತ್ರ ಪ್ರತಿಭಟನೆಯನ್ನು ಮುಕ್ತಾಯಗೊಳಿಸುವುದಾಗಿ ಎಂಇಎಸ್ ನಾಯಕರು ಹಠಮಾರಿತನ ಪ್ರದರ್ಶಿಸಿ ಗೊಂದಲವನ್ನುಂಟು ಮಾಡಲು ಪ್ರಯತ್ನಿಸಿದಾಗ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಎಂಇಎಸ್ ನಾಯಕರಾದ ಮಹಾಪೌರ ಮಂದಾ ಬಾಳೇಕುಂದ್ರಿ, ವಸಂತರಾವ ಪಾಟೀಲ, ಶಿವಾಜಿ ಸುಂಠಕರ, ಸಂಭಾಜಿ ಪಾಟೀಲ, ಸಂಭಾಜಿ ಚವ್ಹಾಣ ಸೇರಿದಂತೆ ಪೊಲೀಸರು 100ಕ್ಕೂ ಹೆಚ್ಚು ಎಂಇಎಸ್ ಕಾರ್ಯಕರ್ತರನ್ನು ಬಂಧಿಸಿ ನಂತರ ರಾತ್ರಿ ಬಿಡುಗಡೆ ಮಾಡಿದರು.

 

 

loading...

LEAVE A REPLY

Please enter your comment!
Please enter your name here