ಭಾಷೆ, ಸಂಸ್ಕ್ಕತಿ ಅರಿಯಲು ನಾಡಹಬ್ಬ ಸಹಾಯಕ : ಮಾಜಿ ಸಚಿವ ಪಾಟೀಲ

0
17
loading...

ಬೆಳಗಾವಿ,ಅ,3- ಕನ್ನಡ ನಾಡು ನುಡಿ, ಭಾಷೆ ಸಂಸ್ಕ್ಕತಿಯ ಬಗ್ಗೆ ಅರಿಯಲು ನಾಡುಹಬ್ಬದ ಕಾರ್ಯಕ್ರಮಗಳು ಸಹಾಯಕವಾಗಿದೆ. ಜನತೆ ಸಾಹಿತ್ಯ ಒಲವು ಬೆಳಸಿಕೊಳ್ಳಬೇಕು. ಜೊತೆಗೆ ಅನ್ಯಭಾಷಿಕರು ಪ್ರೀತಿ ವಿಶ್ವಾಸದಿಂದ ಕನ್ನಡ ಭಾಷೆ ಕಲಿಯುವಂತೆ ಪ್ರೌತ್ಸಾಹಿಸಬೇಕಾದ ಅವಶ್ಯಕತೆ ಇದೆ ಎಂದು ಮಾಜಿ ಸಚಿವರಾದ ಎ.ಬಿ.ಪಾಟೀಲರು ಹೇಳಿದರು.

ಅವರು ಕರ್ನಾಟಕ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಹಾಗೂ ನಗರ ಕೇಂದ್ರ ಗ್ರಂಥಾಲಯಗಳ ಸಭಾಂಗಣದಲ್ಲಿ ಜರುಗಿದ `ನಾಡಹಬ್ಬದಳಿ ಸಮಾರೋಪದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಪ್ರಸಕ್ತ ದಿನಮಾನಗಳಲ್ಲಿ ಸಾಹಿತ್ಯ, ಸಂಸ್ಕ್ಕತಿಯ ಕಾರ್ಯಕ್ರಮಗಳು ಹೆಚ್ಚಾಗಬೇಕು. ನಾಡಿನ ಕಲೆ ಸಂಸ್ಕ್ಕತಿ ಬೆಳವಣಿಗೆಯಾಗಬೇಕಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಜಿ.ಎಸ್.ಎಸ್.ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ.ಎಚ್.ಬಿ.ಕೊಲ್ಕಾರರವರು `ಕನ್ನಡವು ಇಂದು ಬರೀ ಭಾಷೆಯಾಗಿ ಬಳಕೆಯಾಗುವುದಷ್ಟೇ ಅಲ್ಲ ಅದು ಬದುಕಾಗಬೇಕುಳಿ ಸಂಸ್ಕ್ಕತಿಯಾಗಬೇಕು. ಬದುಕನ್ನು ಬಳಸಿಕೊಂಡರೆ ಭಾಷೆ ಬೆಳವಣಿಗೆಯಾಗುತ್ತದೆಳಿ ಎಂದು ಅಭಿಪ್ರಾಯ ಪಟ್ಟರು.

ಒಂದೇ ನಗರದಲ್ಲಿ ನಾಡಹಬ್ಬಗಳ ಆಚರಣೆ ಹೆಚ್ಚಿದಷ್ಟು ಕನ್ನಡಕಾರ್ಯಕ್ರಮ ಹೆಚ್ಚಾಗುತ್ತವೆ. ಕನ್ನಡ ಭಾಷೆಯ ಬೆಳವಣಿಗೆಗೆ ಇದು ಸಹಾಯಕವಾಗಲಿದೆ ಎಂದರು. ಕನ್ನಡ ನೆಲದಲ್ಲಿ ಜ್ಞಾನಪೀಠಕ್ಕೆ ಅರ್ಹತೆ ಇದ್ದವರೂ ಇನ್ನು ಬಹಳಷ್ಟು ಜನ ಇದ್ದಾರೆ. ಚಂದ್ರಶೇಖರ ಕಂಬಾರ ಅವರಿಗೆ ಈ ಪ್ರಶಸ್ತಿ ಬಂದಿದ್ದು ನಾಡಿನಲ್ಲಿ ಚೈತನ್ಯನೀಡಿದೆ ಎಂದರು.  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಕಲ್ಯಾಣರಾವ್ ಮುಚಳಂಬಿ ಕನ್ನಡ ಬೆಳವಣಿಗೆಗೆ ಪರಿಷತ್ತು ಉತ್ತಮ ಕಾರ್ಯಕ್ರಮ ರೂಪಿಸುತ್ತಿದೆ. ಇಂದು ಒಳ್ಳೆಯಯವರನ್ನು ಗುರುತಿಸುವ ಕಾರ್ಯವಾಗಬೇಕಾಗಿದೆ. ರಾಜಕಾರಣಿಗಳು ಕನ್ನಡ ಕಾರ್ಯದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ಮಾಡಬೇಕೆಂದು ಆಗ್ರಹಿಸಿದರು. ಸಂಗೀತ ಕಲಾವಿದರಾದ ಗೋಕಾಕದ ಓಂಕಾರ ಕರಕಂಬಿಯವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಂಗೀತ ಕಲಾವಿದರಾದ ಪಿ.ಗೋವಿಂದ ರಾಜುಲು, ಶ್ರೀಮತಿ ಆಶಾ ಯಮಕನಮರ್ಡಿ, ಗೀತಾ ಕಾಮಕರ, ಗುಂಡ್ಲೂರ ರವರು ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ತಾಲೂಕಾ ಅಧ್ಯಕ್ಷ ಎಸ್.ಎಸ್.ಪಾಟೀಲರು ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಸಿ.ಎಂ.ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ವಂದಿಸಿದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಸ.ರಾ.ಸುಳಕೂಡೆ, ಎಂ.ಎ.ಪಾಟೀಲ, ಎಲ್.ಎಸ್.ಶಾಸ್ತ್ತ್ರಿ, ಡಿ.ಬಿ.ಪಾಟೀಲ, ರುದ್ರಪ್ಪಣ್ಣ ಮೊಖಾಶಿ, ಪಾರ್ವತೆವ್ವ ಕಳಸಣ್ಣವರ, ಬಸವರಾಜ ನರೇಗಲ್ಲ, ಯು.ಎಂ.ಅನಿಗೋಳ, ಬಿ.ಎಸ್.ಜನಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

 

loading...

LEAVE A REPLY

Please enter your comment!
Please enter your name here