ಮಂಗಸೂಳಿಯಲ್ಲಿ ನೀರಿಗಾಗಿ ಪ್ರತಿಭಟನೆ

0
14
loading...

ಅಥಣಿ 11- ಕುಡಿಯುವ ನೀರು ವ್ಯವಸ್ಥೆ 33 ಕೆವಿ ಸಬ್ ಸ್ಟೇಶನ್ ಆರಂಭಿಸುವುದು ಅಥಣಿ ತಾಲೂಕ ಬರ ಪೀಡಿತ ಎಂದು ಘೋಷಿಸುವುದು ಸೇರಿದಂತೆ ಅನೇಕ ಬೇಡಿಕೆ ಮುಂದಿಟ್ಟು ಮಂಗಸೂಳಿ ಗ್ರಾಮಸ್ಥರು ಶನಿವಾರ ಬೆಳಿಗ್ಗೆ 9 ರಿಂದ 11 ರವರೆಗೆ ಮಂಗಸೂಳಿ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ನಡೆಸಿ ಪ್ರತಿಭಟಿಸಿದರು.

ಸ್ಥಳೀಯ ಜಿ.ಪಂ. ಸದಸ್ಯರಾದ ರವೀಂದ್ರ ಪೂಜಾರಿ ನೇತೃತ್ವದಲ್ಲಿ ರಸ್ತೆ ತಡೆ ತಡೆಯಿತು. ಪೂಜಾರಿ ಮಾತನಾಡಿ ತಾವು ಬಿಜೆಪಿ ಸದಸ್ಯರಾದರೂ ತಾಲೂಕಿನ ಕೆಲವು ಅಧಿಕಾರಿಗಳು ಕರ್ತವ್ಯ ಪಾಲಿಸುತ್ತಿಲ್ಲ. ಇದರಿಂದ ರಸ್ತೆಗೆ ಇಳಿಯುವುದು ಅನಿವಾರ್ಯವಾಗಿತ್ತು. ಶಾಸಕ ರಾಜು ಕಾಗೆ, ಸಚಿವ ಲಕ್ಷ್ಮಣ ಸವದಿ ಅವರ ಗಮನಕ್ಕೆ ಸಮಸ್ಯೆಗಳನ್ನು ತರಲಾಗಿದೆ ಎಂದು ಹೇಳಿದರು.

14 ಸಾವಿರ ಜನಸಂಖ್ಯೆ   ಹೊಂದಿದ ಮಂಗಸೂಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶ್ರೀ ದತ್ತ ನೀರಾವರಿ ಯೋಜನೆಯಿಂದ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಸರಕಾರ 20 ವರ್ಷದ ಹಿಂದೆ ನಿರ್ಮಿಸಿದ ಎನ್ಆರ್ ಡಬ್ಲ್ಯು ನೀರಾವರಿ ಯೋಜನೆ ಕಳಪೆಯಾಗಿದ್ದು ಕೋಟ್ಯಾಂತರ ರೂ. ಖರ್ಚಿ ಮಾಡಿದರೂ ಉದ್ಘಾಟನೆಯಾಗಿಲ್ಲ. ಇದರಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸಮಸ್ಯೆಯಾಗಿದೆ ಎಂದರು.

2 ವರ್ಷದ ಹಿಂದೆ 33 ಕೆವಿ ಸಬ್ ಸ್ಟೇಷನ್ ನಿರ್ಮಿಸಿದರೂ ಈ ವರೆಗೆ ವಿದ್ಯುತ್ ಪೂರೈಕೆ ಆರಂಭಿಸಿಲ್ಲ. ಇಲ್ಲಿ ಪದವಿಪೂರ್ವ ಮಹಾ ವಿದ್ಯಾಲಯ ಆರಂಭಿಸಲಾಗಿತ್ತು. ಅದು ಕೆಲವು ವರ್ಷ ಬಂದ್ ಮಾಡಿದ್ದರಿಂದ   ಇಲ್ಲಿಯ  ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಮಂಗಸೂಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಭಾಗ್ಯ ಲಕ್ಷ್ಮೀ ಯೋಜನೆ, ಅನೇಕ ಗ್ರಾಮಸ್ಥರಿಗೆ ಬಿ.ಪಿ.ಎಲ್. ಪಡಿತರ ಚೀಟಿ ನೆಪದಲ್ಲಿ ಕೈ ಬಿಟ್ಟಿದ್ದಾರೆ ಅಲ್ಲದೇ ಮಳೆ ಆಗದ ಕಾರಣ ಅಥಣಿ ತಾಲೂಕನ್ನು ಬರ ಪೀಡಿತ ಎಂದು ಘೋಷಣೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂಬ ಮನವಿಯನ್ನು ತಹಶೀಲ್ದಾರ ಶರಣಬಸ್ಸಪ್ಪ ಕೊಟೆಪ್ಪಗೋಳ ಅವರಿಗೆ ಸಲ್ಲಿಸಲಾಯಿತು.

ತಹಶೀಲ್ದಾರ ಶರಣಬಸ್ಸಪ್ಪ ಕೊಟೆಪ್ಪಗೋಳ ಅವರು ಮನವಿ ಸ್ವೀಕರಿಸಿ ಮಾತನಾಡಿ ಶಾಸಕ ಹಾಗೂ ಸಚಿವರ ಗಮನಕ್ಕೆ ತಂದು ಶೀರ್ಘರ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು. ಹೆಸ್ಕಾಂ ಇಲಾಖೆ ಉಗಾರ ವಿಭಾಗದ ಸಹಾಯ ಕಾರ್ಯನಿರ್ವಾಹಕ ಎಂಜಿನಿಯರ್ ಅಜೀತ ಸೌದಿ ಮಾತನಾಡಿ 33 ಕೆವಿ ಸಬ್ ಸ್ಟೇಷನ್ ಒಂದು ತಿಂಗಳಲ್ಲಿ ಪೂರ್ಣಗೊಳಿಸುವದಾಗಿ ಹೇಳಿದರು. ತಾ.ಪಂ. ಇಓಟಿಎಂ ವಂಟಗೂಡ ಪಿಪಿಒ ಸುರೇಶ ಮುಂಜೆ ಉಗಾರ ಹೆಸಾಂ ಎಸ್ ಬ ದೀಪಕ , ಕಂದಾಯ  ನೀರೀಕ್ಷಕ ಆರ್.ಆರ್. ಬುರ್ಲಿ ಉಪಸ್ಥಿತರಿದ್ದರು. ಅಥಣಿ ಸಿಪಿಐ ಬಸವರಾಜ ಯಲಿಗಾರ, ಪಿಎಸ್ಐ ಶ್ರೀಶೈಲ ಗಾವಿ ಬಂದೋಬಸ್ತ ಕೈಗೊಂಡಿದರು.

ರಸ್ತೆ ತಡೆ ಯಶಸ್ವಿ ಗೊಳಿಸಲು ತಾ.ಪಂ. ಸದಸ್ಯ ಅಶೋಕ ಮದಾಳೆ, ಸಂಜಯ ತಳವಲಕರ, ಶ್ರೀಕಾಂತ ತಳವಲಕರ, ಮುಕುಂದ ಪೂಜಾರಿ, ಬಿ.ಕೆ. ಪಾಟೀಲ, ಚಿದಾ ನಂದ ಮಾಳಿ, ಸುಭಾಷ ಶೆಟ್ಟಿ ಬಾಬಾಸಾಬ ಸಂಗಪಾಳ, ಸಂಭಾಜಿ ಪಾಟೀಲ ಸಹಕರಿಸಿದರು.

 

loading...

LEAVE A REPLY

Please enter your comment!
Please enter your name here