ಮತದಾರರ ಪಟ್ಟಿ ಸಂಕ್ಷಿಪ್ತ ಪರಿಷ್ಕರಣೆ

0
18
loading...

ಹಾವೇರಿ.ಅಕ್ಟೌಬರ್.12ಃ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯಲ್ಲಿನ ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ಈ ಪ್ರಕಟಣೆ ರೀತ್ಯ ಅಕ್ಟೌಬರ 1ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, 1-11-2011ರವರೆಗೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ದಾಖಲಿಸಬಹುದಾಗಿದೆ. ಮತದಾರರ ಹೆಸರುಗಳ ಪರೀಶೀಲನೆ ನಂತರ ಅಕ್ಟೌಬರ 16 ಹಾಗೂ 23ರ ಭಾನುವಾರದಂದು ವಿಶೇಷ ಕಾರ್ಯಾಚರಣೆ ನಡೆಸಿ, ಮತಗಟ್ಟೆ ಮಟ್ಟದ ಏಜೆಂಟರರು ಹಾಗೂ ರಾಜಕೀಯ ಪಕ್ಷಗಳನ್ನೊಳಗೊಂಡಂತೆ ಅವರಿಂದ ಆಕ್ಷೇಪಣೆ ಪಡೆಯ;ಲಾಗುವುದು. ನಂತರ ಡಿಸೆಂಬರ್ 1ರಂದು ಗುರುವಾರ ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿ ಮಾಡಲಾಗುವುದು. 1-12-2011ರಿಂದ 31-12-2011ರವರೆಗಿನ ಅವಧಿಯಲ್ಲಿ ಮತದಾರರ ಪಟ್ಟಿಯ ಪುರವಣಿ ಮುದ್ರಣಗೊಳಿಸಿ, 5-1-2012ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದೆಂದು ಜಿಲ್ಲಾಧಿಕಾರಿ ಹೆಚ್.ಜಿ. ಶ್ರೀವರ ಅವರು ತಿಳಿಸಿದ್ದಾರೆ.

 

 

loading...

LEAVE A REPLY

Please enter your comment!
Please enter your name here