ಮುನವಳ್ಳಿಯಲ್ಲಿ ಯಶಸ್ವಿಯಾದ ಶಿ ಯಾರಿಗುಂಟು ಯಾರಿಗಿಲ್ಲ ಷಿ ಗೇಮ್ ಶೋ

0
16
loading...

 

ಮುನವಳ್ಳಿ : ಮುನವಳ್ಳಿ ನಾಡಹಬ್ಬ ಉತ್ಸವ ಸಮಿತಿಯವರು ಪ್ರತಿವರ್ಷವು ಟಿ.ವ್ಹಿ. ಯ ವಿವಿಧ ವಾಹಿನಿಯಲ್ಲಿ ಬರುವ ರಿಯಾಲಿಟಿ ಶೋ ಅಥವಾ ಗೇಮ್ ಶೋ ಕಾರ್ಯಕ್ರಮಗಳನ್ನು ಸ್ಥಳೀಯರಿಗಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.  ಈಗಾಗಲೇ ಆದರ್ಶ ದಂಪತಿಗಳು, ಬಂಗಾರದ ಬೇಟೆ, ಎದೆ ತುಂಬಿ ಹಾಡುವೆನು ಇಂಥ ಜನಪ್ರಿಯ ಕಾರ್ಯಕ್ರಮಗಳನ್ನು ನಾವೆನು ಟಿ. ವ್ಹಿ. ಯವರಿಗಿಂತ ಕಡಿಮೆ ಇಲ್ಲಾ ಅನ್ನು ರೀತಿಯಲ್ಲಿ ಯಶಸ್ವಿಯಾಗಿ ಹಮ್ಮಿಕೊಂಡಿದ್ದಾರೆ.

ಈ ವರ್ಷ ಸ್ಥಳೀಯ ಮಹಿಳೆಯರಿಗಾಗಿ ಗೇಮ್ ಶೋ. ಶಿ ಯಾರಿಗುಂಟು ಯಾರಿಗಿಲ್ಲ ಷಿ  ಹಮ್ಮಿಕೊಂಡಿದ್ದು ವಿಶೇಷವಾಗಿತ್ತು.

ಶ್ರೀ ಪಂಚಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮ ಮಹಿಳೆಯರಿಗೆ ಮತ್ತು ನೆರೆದಿದ್ದ ಜನತೆಗೆ ಮನರಂಜನೆ ನೀಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ನಾಡಹಬ್ಬ ಸಮಿತಿಯ ಮಹಿಳಾ ಸದಸ್ಯರು ಮತ್ತು ಪದಾಧಿಕಾರಿಗಳು ಮತ್ತು ಸ್ಪರ್ಧಿಗಳು ಸೇರಿ ಉದ್ಘಾಟಿಸಿದರು.

ಅತಿಥಿಗಳಾಗಿ ಶಿವಯ್ಯ ಹಿರೇಮಠ, ಎಸ್. ವ್ಹಿ. ಚವಡಾಪೂರ ಬಿ.ಬಿ.ನಾವಲಗಟ್ಟಿ. ದತ್ತು ಭಂಡಾರಿ. ಮಹಂತೇಶ ದೇವಣಗಾಂವಿ. ಮಂಜು ಬೆಟಗೇರಿ. ಸಂತೋಷ ಹಂಜಿ. ಬಾಳು ಹೊಸಮನಿ. ಶ್ರೀಶೈಲ ಹಂಜಿ. ಪ್ರಕಾಶ ಕಮಲಾಪೂರ. ಇತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ  ಒಟ್ಟು ಐದು ಸುತ್ತುಗಳನ್ನು ಮಾಡಿ ಮೊದಲನೆಯ ಸುತ್ತು ಸುಪರ್ 5, ನಂತರ ಲಕ್ ಲೆಕ್ಕಾಚಾರ, ಬಿಡ್ ಮಾಡಿ ದುಡ್ ಮಾಡಿ, ಸರಿನಾಮನಿನಾ ಎಕ್ಕಾ ರಾಜಾರಾಣಿ ಇವುಗಳಲ್ಲಿ ಯಾರು ಹೆಚ್ಚು ಅಂಕ ಪಡೆಯುತ್ತಾರೋ ಅವರೇ ವಿಜೇತರು.

ಈ ಆಟದ ಕಾರ್ಯಕ್ರಮದಲ್ಲಿ ಶ್ರೀಮತಿ ಅನಿತಾ ಎಸ್. ಹಂಜಿ ಹಾಗೂ ಶ್ರೀಮತಿ ಬೆಟಗೇರಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರು.

ಕಾರ್ಯಕ್ರಮದ ಸಂಯೋಜನೆ ಹಾಗೂ ನಿರೂಪಣೆಯನ್ನು ಶಿಕ್ಷಕ ಭವಾನಿ ಹೆಚ್. ಖೊಂದುನಾಯ್ಕ ಮಾಡಿದರು. ವಂದನಾರ್ಪಣೆಯನ್ನು ಬಿ. ಬಿ. ಹುಲಿಗೊಪ್ಪ ನೆರವೇರಿಸಿದರು.

ಒಟ್ಟಾರೆ ಟಿ. ವ್ಹಿ. ಯಲ್ಲಿ ಬರುವ ಕಾರ್ಯಕ್ರಮಗಳು ಕೇವಲ ಪಟ್ಟಣದ ಜನತೆಗೆ ಸೀಮಿತವಾಗಿದ್ದು. ಇದನ್ನು ಗ್ರಾಮೀಣ ಪ್ರದೇಶದ ಜನರಿಗೆ ಇಂಥ ಮನರಂಜನೆ ಕಾರ್ಯಕ್ರಮಗಳನ್ನು ಒದಗಿಸುವಲ್ಲಿ ಮುನವಳ್ಳಿ ನಾಡಹಬ್ಬ ಉತ್ಸವ ಸಮಿತಿಯವರು ಪ್ರತಿವರ್ಷ ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಇಂಥ ಕಾರ್ಯಕ್ರಮಗಳು ನಾಡಹಬ್ಬವನ್ನು ಇನ್ನೂ ಹೆಚ್ಚು ಉತ್ಸಾಹದಿಂದ ಮಾಡಲು ಪ್ರೌತ್ಸಾಹಿಸಿದೆ.

loading...

LEAVE A REPLY

Please enter your comment!
Please enter your name here