ಮೂಲಭೂತ ಕೊರತೆಯ ರೈಲು ನಿಲ್ದಾಣ

0
16
loading...

ಬಾಗಲಕೋಟ, 25- ಪ್ರತಿವರ್ಷ ಸಾಕಷ್ಟು ಆದಾಯ ತರುವ ಸ್ಥಳೀಯ ರೇಲ್ವೆ ನಿಲ್ದಾಣವನ್ನು ನಿರ್ಲಕ್ಷಿಸಲಾಗಿದೆ ಎಂದು ಶಾಸಕ ವೀರಣ್ಣ ಚರಂತಿಮಠ ದೂರಿದರು. ನಗರದ ರೇಲ್ವೆ ನಿಲ್ದಾಣಕ್ಕೆ ಬಂದ ಗೋವಿನಜೋಳವನ್ನು ಬರಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿವರ್ಷ ನೂರಾರು ಕೋಟಿ ರೂ. ಆದಾಯ ತರುವ ಬಾಗಲಕೋಟ ರೇತ್ವೆ ನಿಲ್ದಾಣದಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ರೇಲ್ವೆ ನಿಲ್ದಾಣಕ್ಕೆ ಬಂದ ವಸ್ತುಗಳನ್ನು ಸಾಗಾಣಿಕೆ ಮಾಡಲು ಸರಿಯಾದ ಸೌಲಭ್ಯಗಳಿಲ್ಲ ವ್ಯಾಪಾರಸ್ಥರಿಗೆ ರವಾನೆ ಮಡಲು ಸಾರಿಗೆ ಸೌಲಭ್ಯಗಳಿಲ್ಲ ಎಂದರು.

ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೇಲ್ವೆ ಹಿರಿಯ ಆಧಿಕಾರಿಗಳಿಗೆ ಬಾಗಲಕೋಟೆ ರೇಲ್ವೆ ನಿಲ್ದಾಣಕ್ಕೆ ಮೂಲಸೌಲಭ್ಯ ಒದಗಿಸಲು ಸಾಕಷ್ಟು ಪತ್ರಗಳನ್ನು ಬರೆಯಲಾಗಿದೆ. ಆದರೆ ಈ ಬಗ್ಗೆ ಯಾವುದೇ ಗಮನವನ್ನು ಹರಿಸುತ್ತಿಲ್ಲ ಎಂದರು. ತಮಗೆ ಬೇಕಾದ ಕಡೆಯ ಪ್ರದೇಶಗಳಲ್ಲಿ ರೇಲ್ವೆ ನಿಲ್ದಾಣಗಳನ್ನು ಅಭಿವೃದ್ದಿಪಡಿಸುತ್ತಿದ್ದಾರೆ ಆದರೆ ಈ ಭಾಗಕ್ಕೆ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು. ಯಶ್ವಂತಪೂರ ಮತ್ತು ಮುಂಬೈ ಕಡೆ ಹೋಗುವ ರೇಲ್ವೆ ವೇಳಯನ್ನು ಪ್ರಯಾಣಿಕರ ಅನುಕೂಲಕ್ಕಾಗಿ ಬದಲಾಯಿಸಬೇಕು ಎಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಎಪಿಎಂಸಿ ಅಧ್ಯಕ್ಷ ಪ್ರಭು ಸರಗಣಾಚಾರಿ, ಮಹೇಶ ಅಥಣಿ ಸಂತೋಷ ಹೊಕ್ರಾಣಿ, ರೇಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.

 

loading...

LEAVE A REPLY

Please enter your comment!
Please enter your name here