ಮೂವರು ಕೊಲೆಗಾರರಿಗೆ ಜೀವಾವದಿ ಶಿಕ್ಷೆ

0
35
loading...

ಬಾಗಲಕೋಟೆ,25: ಮಹಿಳೆಯೋರ್ವಳನ್ನು ಕೊಲೆ ಮಾಡಿದ ಮೂವರು ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಬೊಮ್ಮಣಗಿ ಗ್ರಾಮದ ರಂಗಪ್ಪ, ಬಸಪ್ಪ, ಯಲಗುರದಪ್ಪ ಹಂಡರಗಲ್ಲ ಶಿಕ್ಷೆಗೊಳಗಾದವರು. ಆಸ್ತಿ ವಿವಾದ ಕುರಿತಂತೆ ಅ.11 2009ರಂದು ಗ್ರಾಮದ ನಿರ್ಮಲಾ ಎಂಬುವಳನ್ನು ಕೊಲೆ ಮಾಡಿದ ಆಕೆಯ ತಂದೆ ರಾಮಪ್ಪನ ಕೊಲೆಗೆ ಯತ್ನಿಸಿದ ಆರೋಪ ಇವರು ಮೇಲಿತ್ತು.  ಈ ಬಗ್ಗೆ ಗ್ರಾಮೀನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5 ಸಾವಿರ ರೂ.ದಂಡ ವಿಧಿಸಿದ್ದಾರೆ. ಸರ್ಕಾರದ ಪರ ಸರಕಾರಿ ಅಭಿಯೋಜಕ ಎಸ್.ಆರ್. ದೇಸಾಯಿವಾದ ಮಂಡಿಸಿದ್ದರು.

 

loading...

LEAVE A REPLY

Please enter your comment!
Please enter your name here