ಮೃಣಾಲಿನಿ ಇಂಗ್ಲೀಷ ಅಕ್ಯಾಡಮಿ 14ನೇ ವಾರ್ಷಿಕೋತ್ಸವ

0
15
loading...

ಬೆಳಗಾವಿ 5 ರಾಷ್ಟ್ತ್ರಪಿತ ಮಹಾತ್ಮ ಗಾಂಧೀಜಿಯವರ ಮುಂದಾ ಳತ್ವದಲ್ಲಿ ಭಾರತಕೆ ಸ್ವಾತಂತ್ರ್ಯ ಸಿಕ್ಕಿದೆ. ಸತ್ಯ ಶಾಂತಿ ಮತ್ತು ಅಹಿಂಸೆ ಆಧಾರದ ಮೇಲೆ ನಡೆದ ಈ ಹೋರಾಟಕ್ಕೆ ಸಿಕ್ಕ ಈ ಯಶಸ್ಸು ಜಗತ್ತಿಗೆ ಮಾದರಿಯಾಗಿದೆ ಎಂದು ಮಾನ್ಯ ಸಂಸದ ಸುರೇಶ ಅಂಗಡಿಯವರು ಅಭಿಪ್ರಾಯಪಟ್ಟರು. ಅವರು ಮೃಣಾಲಿನಿ  ಇಂಗ್ಲೀಷ ಅಕ್ಯಾ ಡಮಿ ಆಯೋಜಿಸಿದ ಗಾಂಧಿ ಜಯಂತಿ ಉತ್ಸವ ಹಾಗೂ ಅದರ ವಾರ್ಷಿ ಕೋತ್ಸವದಲ್ಲಿ ಭಾಗವಹಿಸುತ್ತಾ ಪ್ರಸ್ತುತ ಜಾಗತೀಕರಣ ಪ್ರಕ್ರಿಯೆಯಲ್ಲಿ ಯಶಸ್ಸು ಗಳಿಸಲು ವಿವಿಧ ಭಾಷೆಗಳಲ್ಲಿ ಪರಿಣಿತಿ ಹೊಂದುವುದು. ವಿವಿಧ ದೇಢಗಳ ಮಧ್ಯೆ ಉತ್ತಮ ಸೌಹಾರ್ದಯುತ ವಾತಾವರಣ ಏರ್ಪಡಿಸುವಲ್ಲಿ ಸಹಾಯಕವಾಗಿದೆ ಎಂದರು. ಈ ನಿಟ್ಟಿನಲ್ಲಿ ರಾಜೇಶ ಕೊಳ್ಳಿಮಠ ಇವರ ಸಂಸ್ಥೆ ಮೃಣಾಲಿನ ಇಂಗ್ಲೀಷ್ ಅಕಾಡಮಿ ಅತ್ಯಂತ ಸುಲಭ ದಲ್ಲಿ ಈಗಾಗಲೇ 15000 ಕ್ಕು ಹೆಚ್ಚು ವಿದ್ಯಾರ್ಥಿಗಳಿಗೆ ಕಳೆದ 14 ವರ್ಷಗಳಿಂದ ತರಬೇತಿ ಕೊಟ್ಟಿದ್ದನ್ನು ಶ್ಲಾಘಿಸಿದರು.

ಇನ್ನೌರ್ವ ಅತಿಥಿ ಡಾ. ಡಿ.ಎಚ್. ರಾವ್, ಪ್ರಿನ್ಸಿಪಾಲ ಅವರು ಕಾರ್ಯಕ್ರಮವ್ನು ಉದ್ಘಾಟಿಸಿ ಇವತ್ತಿನ ಎಸ್.ಎಮ್.ಎಸ್. ಶೈಲಿ ಇಂಗ್ಲೀಷ್ ಭಾಷೆ ಬಳಕೆ ನಿಲ್ಲಬೇಕು ಹಾಗೂ ಉತ್ತಮ ಗುಣಮಟ್ಟದ ಇಂಗ್ಲೀಷ್ ಭಾಷೆ ಕಲಿಕೆಯ ಬಗ್ಗೆ ಅಭಿರುಚಿ ಹೊಂದಬೇಕೆಂದು ಹೇಳಿದರು. ಈಗಾಗಲೇ ಅಧಿಕ ಸಂಖ್ಯೆ ಯಲ್ಲಿ ವಿದ್ಯಾರ್ಥಿಗಳನ್ನು ತರಬೇತಿ ಗೊಳಿಸಿದ ಮೃಣಾಲಿನಿ ಇಂಗ್ಲೀಷ ಅಕ್ಯಾಡಮಿ ವಿಶ್ವವಿದ್ಯಾಲಯವಾಗಲಿ ಎಂದು ಹರಸಿದರು.

ಇನ್ನೌರ್ವ ಅತಿಥಿ ಡಾ. ಡಿ.ಜಿ. ಕುಲಕರ್ಣಿ, ಇಂಗ್ಲೀಷ ಭಾಷೆ ಯನ್ನು ಕಲಿಸುವುದು ಅವಶ್ಯಕತೆಯಾಗಿದೆ. ಇದರ ಜೊತೆ ಪಾಶ್ಚಾತ್ಯ ಸಂಸ್ಕ್ಕತಿಯನ್ನು ಅನುಕರಣೆ ಮಾಡಬೇಕೆಂದಲ್ಲ. ನಮ್ಮ ಸಂಸ್ಕ್ಕತಿಯನ್ನು ಉಳಿಸಿಕೊಂಡು ಹೋಗುವುದು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎ.ಜಿ. ಹಿರೇಮಠ ಅವರು ಗಾಂಧಿಯವರ ಶಿಹಸು ಬದುಕಿದರೆ ಸಾಯುವರಾರು ಹಸು ಸತ್ತರೆ ಬದುಕುವ ರಾರುಷಿ ? ಉಕ್ತಿಯನ್ನು ಸ್ಮರಿಸುತ್ತ ಕೃಷಿ ಮತ್ತು ಪಶು ಸಂಗೋಪಣೆ ಮಹತ್ವ ತಿಳಿಸಿದರು.

ಅವರು ಮೃಣಾಲಿನಿ ಇಂಗ್ಲೀಷ ಅಕಾಡಮಿ ಮೃಣಾಲಿನಿ ಇಂಗ್ಲೀಷ ಅಕಾಡಮಿ 2020ರ ಅವಧಿಯೊಳಗೆ 50000 ಉತ್ತಮ ಮುಖಂಡರನ್ನು ತರಬೇತಿಗೊಳಿಸುವ ಗುರಿಯನ್ನು ಶ್ಲಾಘಿಸಿದರು. ಹಾಗೂ ಅವರ ಪ್ರಯತ್ನಗಳಿಗೆ ಯಶಸ್ಸು ಹಾರೈಸಿದರು. ಕಾರ್ಯಕ್ರಮದ ಅಂಗವಾಗಿ ವೈವಿಧ್ಯಮಯ ಸಾಂಸ್ಕ್ಕತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಅನುರಾಧಾ ಅಮಾತ್ಯ ನವರ ಪ್ರಾರ್ಥನೆ ಹಾಡಿದರು. ಅನಂದ ರಜಪೂತ ವರದಿ ವಾಚನ ಮಾಡಿದರು. ರಾಜೇಶ ಕೊಳ್ಳಿಮಠ ಮುಖ್ಯಸ್ಥರು, ಮೃಣಾಲಿನಿ ಇಂಗ್ಲೀಷ್ ಅಕಾಡಮಿ ಪರಿ ಚಯಿಸಿದರು. ಉದಯಕುಮಾರ ಸ್ವಾಗತಿಸಿದರು. ರೇಖಾ ಧಾವತೆ ವಂದಿಸಿದರು. ವಿಜಯ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ದೇವ ರಾಜ ಅದಮಾನಿ ಪ್ರಶಾಂತ ಅನ್ವೆಕರ, ಶಿವಾನಂದ ವರಾಳೆ, ಸಮೀನಾ ಮುಲ್ಲಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here