ಯಶಸ್ವಿ ಉದ್ಯಮಿಯಾಗಲು ಕಠಿಣ ಶ್ರಮ ಅಗತ್ಯ: ಜಗಜಂಪಿ

0
25
loading...

ಬೆಳಗಾವಿ.ಅ.11: ಜೀವನದಲ್ಲಿ ಯಶಸ್ವಿ ಉದ್ಯಮಿಯಾಗಲು ಕಠಿಣ ಶ್ರಮ ಅಗತ್ಯವಾಗಿದೆ ಎಂದು ಜಗಜಂಪಿ ಬಜಾಜ ಸಂಸ್ಥೆಯ ಸಿಎಂಡಿ ಮಲ್ಲಿಕಾರ್ಜುನ ಜಗಜಂಪಿ ಅವರು ಅಭಿಪ್ರಾಯ ವ್ಯಕ್ತ ಪಡಿಸಿದರು.

ಬೆಳಗಾವಿಯ ಐಎಂಎ ಹಾಲ ದಲ್ಲಿ ಭರತೇಶ ಎಜ್ಯುಕೇಶನ ಸಂಸ್ಥೆಯ ಗ್ಲೌಬಲ್ ಬಿಜಿನೆಸ್ ಸ್ಕೂಲ ಹಾಗೂ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಎಂಬಿಎ ಪ್ರಥಮ ಸೆಮಿಸ್ಟಾರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಅನೇಕ ಕಷ್ಟಗಳು ಎದುರಾಗಬಹುದು. ಕಠಿಣ ಶ್ರಮ ಮತ್ತು ಪ್ರಾಮಾಣಿಕತೆ ಯಿಂದ ಕಾರ್ಯ ನಿರ್ವಹಿಸಿದ್ದಲ್ಲಿ ಯಶಸ್ಸು ಖಚಿತ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ ಅವರು, ವಿದ್ಯಾರ್ಥಿಗಳು ತಮ್ಮಲ್ಲಿ ನಾಯತಕತ್ವದ ಗುಣ ಬೆಳೆಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ರಜಿಸ್ಟಾರ ಡಾ. ಎಸ್.ಎಸ್. ಪಟಗುಂದಿ ಅವರು ಮಾತನಾಡಿ, ವ್ಯವಸ್ಥಾಪನ ಶಿಕ್ಷಣದಲ್ಲಿ ಜಗತಿಕರಣದ ಪರಿಣಾಮ ಬೀರುತ್ತಿದ್ದು, ವಿದ್ಯಾರ್ಥಿಗಳು ಮಾನವ ಸಂಪನ್ಮೂಲ್, ಹಣದ ಸಂಪನ್ಮೂಲವನ್ನು ಕ್ರೌಢಿಕರಣ ಗೊಳಿಸುವಂತಹ ಯೋಜನೆಗಳನ್ನು ಹಾಕಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು.

ವಿಶ್ವ ವಿದ್ಯಾಲಯದ ಡೀನ್ ಡಾ. ಎಚ್.ವಾಯ್ . ಕಾಂಬಳೆ ಮಾತನಾಡಿ, ವ್ಯವಸ್ಥಾಪನ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವಿಕೆದತ್ತ ಗಮನ ನೀಡದೇ ಕಠಿಣ ಪರಿಶ್ರಮದಿಂದ ಮುಂದಾಲೋಚನೆಯೊಂದಗೆ ವ್ಯವಹಾರ ಮತ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ಕರೆ ನಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಬಿಎಸ್ ಆಡಳಿತ ಮಂಡಳಿ ಅಧ್ಯಕ್ಷ ವಿನೋದ ದೊಡ್ಡಣ್ಣವರ ಅವರು ವಹಿಸಿದ್ದರು. ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಎ.ಬಿ.ಕಾಲಕುಂದ್ರಿಕರ ಉಪಸ್ಥಿತರಿದ್ದರು. ನರ್ದೆಶಕ ಡಾ. ಆರ್.ಆರ್. ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ಸ್ನೇಹಾ ಹರದಿ ಅತಿಥಿಗಳನ್ನು ಪರಿಚಯಿಸಿದರು. ಪಲ್ಲವಿ ಗೋಠೆ ಪ್ರಾರ್ಥನೆ ನಡೆಸಿದರು. ಸ್ವಾತಿ ಜೋಗ ಕಾರ್ಯಕ್ರಮ ನಿರೂಪಿಸಿದರು.

 

 

 

loading...

LEAVE A REPLY

Please enter your comment!
Please enter your name here