ರೈತರ ಪ್ರತಿರೋಧದ ಮಧ್ಯೆಯೂ ಗೊಬ್ಬರ ಸಾಗಿಸಿದ ಪ್ರಭಾವಿ ವ್ಯಕ್ತಿ

0
14
loading...

ಕೊಕಟನೂರ (ಅಥಣಿ) 3- ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ರೈತರಿಗೆ ವಿತರಿಸಲೆಂದು ತಂದಿಡಲಾಗಿದ್ದ ಕ್ರಿಪ್ಕೌ ಗೊಬ್ಬರದ ದಾಸ್ತಾನವನ್ನು ಗ್ರಾಮದ ಪ್ರಭಾವಿ ವ್ಯಕ್ತಿಯೊಬ್ಬರು ರೈತರ ಪ್ರತಿರೋಧದ ಮಧ್ಯೆಯೂ ತಮ್ಮ ಜಮೀನಿಗೆ ಅಕ್ರಮವಾಗಿ ಕೊಂಡೊಯ್ಯುವ ಘಟನೆ ಶನಿವಾರ ರಾತ್ರಿ ನಡೆದಿದೆ.

                ಸಂಘದ ಕಾರ್ಯಾಲಯ ದಲ್ಲಿ ದಾಸ್ತಾನು ಮಾಡಿ ಇಡಲಾಗಿದ್ದ 40 ಬ್ಯಾಗ್ ಕ್ರಿಪ್ಕೌ ಗೊಬ್ಬರವನ್ನು ಅಪ್ಪಾಸಾಬ ಮುದಕಣ್ಣವರ ಎಂಬುವರಿಗೆ ಸೇರಿದ ಮಹಿಂದ್ರಾ ಟ್ರ್ಯಾಕ್ಟರ್ನಲ್ಲಿ ಕೆಲವರು ಅಕ್ರಮವಾಗಿ ಸಾಗಿಸುತ್ತಿದ್ದರೂ ಸಂಘದ ಕಾರ್ಯದರ್ಶಿ ಜಾಣ ಮೌನ ವಹಿಸಿದ್ದು ಗ್ರಾಮದ ರೈತರನ್ನು ಕೆರಳಿಸಿತು

                ಈ ವೇಳೆ ಮಹಾವೀರ ಹಳಕಿ, ರಾಜೇಂದ್ರ ಪಾಟೀಲ, ಧನಪಾಲ ರೊಡ್ಡ, ಮಲ್ಲಿಕಾರ್ಜುನ ಪರಾಂಡೆ,, ರಮೇಶ ಕಾಂಬಳೆ ಸೇರಿದಂತೆ ಹಲವರು ಸ್ಥಳದಲ್ಲಿಯೇ ತೀವ್ರ ವಿರೋಧ ವ್ಯಕ್ತಪಡಿಸಿದರು. ಸಂಬಂದಪಟ್ಟ ಪ್ರಭಾವಿ ವ್ಯಕ್ತಿಗಳು ಇದನ್ನೆಲ್ಲ ಲೆಕ್ಕಿಸದೇ ಕಾರ್ಯದರ್ಶಿ ಕಾರಕೂನರ ನೆರವಿ ನೊಂದಿಗೆ ಗೊಬ್ಬರ ಚೀಲಗಳನ್ನು ತಮ್ಮ ಹೊಲಕ್ಕೆ ಸಾಗಿಸಿದ್ದಾರೆ ಎನ್ನಲಾಗಿದೆ.

ಸಹಾಯಕ ಕೃಷಿ ನಿರ್ದೇಶಕರಿಗೆ ಮಾಹಿತಿಯೇ ಇಲ್ಲ: ಬಡ ಮತ್ತು ಸಣ್ಣ ರೈತರಿಗೆವಿತರಿಸಲೆಂದು ದಾಸ್ತಾನು ಮಾಡಲಾಗಿದ್ದ ಗೊಬ್ಬರವನ್ನು ಪ್ರಭಾವಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಕೊಂಡೊಯ್ದ ಘಟನೆ ಕುರಿತು ತಮಗೆ ಭಾನುವಾರ ಬೆಳಗಿನವರೆಗೆ ಯಾವದೇ ಮಾಹಿತಿ ಬಂದಿರಲಿಲ್ಲವೆಂದು ಸಹಾಯಕ ಕೃಷಿ ನಿರ್ದೇಶಕ ಡಾ. ಸಲೀಮ ಸಂಗತ್ರಾಸ ಪತ್ರಿಕೆಗೆ ತಿಳಿಸಿದರು.

                ಈಗಷ್ಟೇ ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿದ ಆ ಪ್ರಭಾವಿ ವ್ಯಕ್ತಿಯ ಸಹೋದರ ಒಬ್ಬರು ಗ್ರಾಮದಲ್ಲಿ ಅಂತಹ ಘಟನೆ ನಡೆದಿರುವದಿಲ್ಲ ಎಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದಾರೆಂದು ಹೇಳಿದರು. ಆದರೂ ತಮಗೆ ಬಂದಿರುವ ಮಾಹಿತಿ ಪ್ರಕಾರ ಘಟನೆಯ ಸತ್ಯಾಸತ್ಯತೆಯ ಕುರಿತು ಸಮಗ್ರವಾದ ಮಾಹಿತಿ ನೀಡುವಂತೆ ಸೂಚಿಸಿ ಸ್ತಳಕ್ಕೆ ತಮ್ಮ ಸಹಾಯಕರನ್ನು ಕಳಿಸಿ ಕೊಟ್ಟಿರುವದಾಗಿ ಹೇಳಿದರು.

                ಕಾರ್ಯದರ್ಶಿ ದ್ವಂದ್ವ ಹೇಳಿಕೆ: ಘಟನೆಯ ಕುರಿತು ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ದ್ವಂದ್ವ ಹೇಳಿಕೆ ನೀಡಿರುವ ಸಂಘದ ಕಾರ್ಯದರ್ಶಿ ಶಂಕರ ಭೀಮಾಜಿ ಕುಲಕರ್ಣಿ ಘಟನೆ ನಡೆದ ಸಂದರ್ಭದಲ್ಲಿ ತಾವು ಹಾಜರಿರಲಿಲ್ಲವೆಂದು ಒಂದು ಕಡೆ ಹೇಳಿದ್ದರೇ ಇನ್ನೊಂದೆಡೆ ಘಟನೆ ನಡೆದಿರುವುದು ನಿಜ. ಆದರೆ ಅದಕ್ಕೂ ತಮಗೂ ಯಾವದೇ ಸಂಬಂಧವಿಲ್ಲವೆಂದು ಕೇಳಿಕೊಳ್ಳುವ  ಮೂಲಕ ನುಣುಚಿಕೊಳ್ಳುವ ಯತ್ನ ಮಾಡಿದ್ದಾರೆ. ಗೊಬ್ಬರದ ದಾಸ್ತಾನವನ್ನು ಪ್ರಭಾವಿ ವ್ಯಕ್ತಿಯು ಆಕ್ರಮವಾಗಿ ಕೊಂಡೊಯ್ಯುತ್ತಿದ್ದ ವೇಳೆ ತಮ್ಮ ಕಾರಕೂನ ಸ್ಥಳದಲ್ಲಿದ್ದರೆಂದು ಸ್ಪಷ್ಟಪಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here