ಲೋಕಾಯುಕ್ತ ತನಿಖೆಗೆ ಒತ್ತಾಯಿಸಿ ಕಾರ್ಮಿಕರ ಪ್ರತಿಭಟನೆ

0
21
loading...

ಬೆಳಗಾವಿ,12-ಮಹಾನಗರ ಪಾಲಿಕೆಯಲ್ಲಿ ಕಳೆದ 15 ವರ್ಷಗಳಿಂದ ಸ್ವಚ್ಛತಾ ಕೆಲಸಕ್ಕೆ ನೀಡಲಾಗುತ್ತಿದ್ದ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿದೆ. ಸರಕಾರದ ದುಡ್ಡನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಂಡು ಕಾರ್ಮಿಕರಿಗೆ ಯಾವುದೇ ಸವಲತ್ತು ನೀಡದೆ ಗುತ್ತಿಗೆದರರೊಂದಿಗೆ ಶಾಮೀಲಾಗಿದ್ದಾರೆ. ಈ ಅವ್ಯವಹಾರವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಬುಧುವಾರ ಗುತ್ತಿಗೆ ಪೌರ ಕಾರ್ಮಿಕರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸಿಎಂ ಪ್ರತಿಕೃತಿ ದಹಿಸಿ ಅಲ್ಲಿಂದ ರಾಜ್ಯಪಾಲರ ಹೆಸರಿನಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕಳೆದ 25 ಜುಲೈ 2010ರಂದು ಕರೆದಿದ್ದ ಸ್ವಚ್ಛತಾ ಕೆಲಸದ ಗುತ್ತಿಗೆಯಲ್ಲಿ ಕಾರ್ಮಿಕರಿಗೆ ಕಡ್ಡಾಯವಾಗಿ ಎಲ್ಲ ರೀತಿಯ ಸೌವಲತ್ತು ನೀಡಬೇಕೆಂದು ಆದೇಶವಿದ್ದರೂ ಪಾಲಿಕೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿಕೊಂಡು ಕಾರ್ಮಿಕರಿಗೆ ವಂಚನೆ ಮಾಡಿದ್ದಾರೆ.

ಅಲ್ಲದೇ 25 ಮಾರ್ಚ್ 2011ರ ವರೆಗೆ ಕಾರ್ಮಿಕರಿಗೆ ಕನಿಷ್ಠ ವೇತನ, ಇಎಸ್ಐ, ಇಪಿಎಫ್ ಸೌವಲತ್ತುಗಳನ್ನು ನೀಡಿಲ್ಲ. ಈಗಾಗಲೇ ಸಂಬಂಧಪಟ್ಟ ಸಚಿವರಿಗೆ , ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರೂ ಯಾವುದೇ ಕ್ರಮ ಜರುಗಿಸಲಾಗಿಲ್ಲ.

ಕಾರ್ಮಿಕರಿಗೆ ನ್ಯಾಯ ಸಿಗುವಂತೆ ಒತ್ತಾಯಿಸಿ ಆರಂಭಿಸಿರುವ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬರುವ ದಿ.24ರಂದು ಕೇಂದ್ರ ಸಚಿವರನ್ನು ಹಾಗೂ ರಾಷ್ಟ್ತ್ರಪತಿಗಳನ್ನು ಭೇಟಿ ಮಾಡಲು ಕಾರ್ಮಿಕರು ದೆಹಲಿಗೆ  ತೆರಳುತ್ತಿರುವುದಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಕಾರ್ಮಿಕ ಮುಖಂಡ ಯಲ್ಲೇಶ ಬಚ್ಚಲಪೂರಿ ಸೇರಿದಂತೆ ಪಾಲಿಕೆಯ ಸ್ವಚ್ಛತಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here