ಲೋಕ ಮೆಚ್ಚಿದ ನ್ಯಾಯಾಧೀಶ

0
14
loading...

 

ಯಾರಿಗೂ ಅಂಜದ ಅಳುಕದ ಯಾವದೇ ಪ್ರಭಾವಕ್ಕೆ ಬಗ್ಗದ ನ್ಯಾಯಾಧೀಶ ಎಂಬ ಕೀರ್ತಿಯನ್ನು ಬೆಂಗಳೂರಿನ ಲೋಕಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುಧೀಂದ್ರರಾವ್ ಪಡೆದುಕೊಂಡಿದ್ದಾರೆ. ಕಳೆದ ಕೆಲವು ತಿಂಗಳಿನಿಂದ ಪ್ರತಿಷ್ಠಿತ ವ್ಯಕ್ತಿಗಳು ಭಾಗಿಯಾಗಿರುವ ಭ್ರಷ್ಟಾಚಾರದ ಪ್ರಕರಣಗಳ ವಿಚಾರಣೆಯನ್ನು ಅವರು ನಡೆಸಸುತ್ತಿದ್ದಾರೆ. ಅವರ ಬಗ್ಗೆ ಈಗ ಜನರಲ್ಲಿ ವ್ಯಾಪಕ ಮೆಚ್ಚಿಗೆಯ ಮಾತುಗಳು ಕೇಳಿ ಬರತೊಡಗಿವೆ. ನ್ಯಾಯಪೀಠದಲ್ಲಿ ಕುಳಿತು ವಿಚಾರಣೆ ನಡೆಸುವ ನ್ಯಾಯಾಧೀಶರು ರಾಗ ದ್ವೇಷಕ್ಕೆ ಆತೀಥರಾಗಿರಬೇಕು. ಅವರು ಕೇವಲ ನ್ಯಾಯದ ಪಕ್ಷಪಾತಿ ಆಗಿರಬೇಕು ಎಂಬುದನ್ನು ಇಂದಿನ ಕಲುಚಿತ ದಿನಗಳಲ್ಲಿ ವಿಶ್ವದ ಮುಖಕ್ಕೆ ಪರಿಚಯಿಸಿದ ಧೀಮಂತ ನ್ಯಾಯಾಧೀಶ ಎಂಬ ಕೀರ್ತಿಗೆ ಅವರು ಪಾತ್ರರಾಗಿದ್ದಾರೆ.ಅವರ ಬಗ್ಗೆ ಈ ಮಾತುಗಳನ್ನು ಯಾವದೇ ಮಾಧ್ಯಮದವರು ಹೇಳಿರುವದಿಲ್ಲ. ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳು ವಕೀಲರ ಹಾಗೂ ಸಾರ್ವಜನಿಕರು ಅವರ ಬಗ್ಗೆ ಈ ಅಭಿಪ್ರಾಯವನ್ನು ನೀಡಿದ್ದಾರೆ.

ಕೆಐಎಡಿಬಿ ಹಗರಣದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅವರ ಪುತ್ರ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ ಅವರಿಗೆ ಜಾಮೂನು ನಿರಾಕರಿಸಿ ಅವರನ್ನು ಜೇಲಿಗೆ ಕಳಿಸಿದ ನಂತರ ಸುಧೀಂದ್ರರಾವ್ ಹೆಸರು ಮೊಟ್ಟ ಮೊದಲ ಬಾರಿ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತು. ಆದರೆ ಅವರು ಅದಕ್ಕಿಂತ ಮೊಡಲು ಅನೇಕ ವರ್ಷಗಳ ಹಿಂದಿನಿಂದಲೇ ನ್ಯಾಯಾಂಗ ಇಲಾಖೆಯಲ್ಲಿ ತಮ್ಮ ಛಾಪು ಮೂಡಿಸುವ ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ.

ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನನಣಗಲಿಯವರಾದ ಸುಧೀಂದ್ರರಾವ್ ಅವರು ಕಾನೂನು ಪದವಿ ಪಡೆದ ನಂತರ ಕೋಲಾರ ಕಾನೂನು ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ನಂತರ ಅಲ್ಲಿಯೇ ಕಾನೂನು ವೃತ್ತಿಯನ್ನು ಆರಂಭಿಸಿದರು. ಸಿವ್ಹಿಲ್, ರೆವ್ಹಿನ್ಯೂ, ಕ್ರಮಿನಲ್ ಸೆಕ್ಷನ್ಗಳಲ್ಲಿ ಪಾರಂಗತರಾದ ಅವರು 2003 ರಲ್ಲಿ ಜಿಲ್ಲಾ ಹೆಚ್ಚುವರಿ ಮ್ಯಾಜಿಸ್ಟ್ತ್ರೇಟ್ ಆಗಿ ನೇಮಕಗೊಂಡರು. ಬೆಂಗಳೂರಿನಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿ ಕಾರ್ಯ ಮಡಿದ ಅವರು ನಂತರ ಚಾಮರಾಜ ನಗರ ಮತ್ತು ಬೀದರಗಳಲ್ಲಿ ಸೇಷನ್ಸ್ ನ್ಯಾಯಾಧೀಶರಾಗಿ ಕಾರ್ಯ ಮಡಿದ್ದಾರೆ. ಬಳ್ಳಾರಿಯಲ್ಲಿ ಪ್ರಿನ್ಸಿಪಲ್ ಸೆಷನ್ ಜಡ್ಜ ಆಗಿ ಕಾರ್ಯ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡ ಅವರು 2 ವರ್ಷ ಕೆಎಟಿಯಲ್ಲಿ ಕರ್ತವ್ಯ ನಿರ್ವಹಿಸಿ ಈಗ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಕಾರ್ಯ ಮಾಡಿತ್ತಿದ್ದಾರೆ. ಅವರಿಗೆ ಈಗ 51 ವರ್ಷ ವಯಸ್ಸಾಗಿದ್ದು ಇನ್ನೂ 9 ವರ್ಷ ಸೇವೆಯಲ್ಲು ಇರುತ್ತಾರೆ.

loading...

LEAVE A REPLY

Please enter your comment!
Please enter your name here