ವಾಸ್ತು ಶಿಲ್ಪಗಳ ತೊಟ್ಟಿಲು ಐಯ್ಯಾಹೊಳೆ-ಐಹೊಳೆ

0
96
loading...

ಐಹೊಳೆಯು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿಗೆ ಸೇರಿದ ಗ್ರಾಮ.ಇದು ಬದಾಮಿ ಚಾಲುಕ್ಯರ ಕಾಲಕ್ಕೆ ಸೇರಿದ ಸುಂದರ ದೇವಾಲಯ ಸಮೂಹಗಳಿಂದ ಕೂಡಿದ್ದು.ಹುನಗುಂದದಿಂದ 26 ಕಿ.ಮೀ. ದೂರದಲ್ಲಿದೆ.ಬಾಗಲಕೋಟೆಯಿಂದ 31 ಕಿ.ಮೀ. ದೂರದಲ್ಲಿ ಮಲಪ್ರಭ ನದಿ ದಡದಂಡೆಯಲ್ಲಿದೆ.ಬಾಗಲಕೋಟೆಯಿಂದ ಅಮೀನಘಡ ಮೂಲಕವೂ ಅಥವ ಬದಾಮಿಯಿಂದ ಪಟ್ಟದಕಲ್ ಮೂಲಕವೂ ಐಹೊಳೆಯನ್ನು ಸುಲಭವಾಗಿ ತಲುಪಬಹುದು.ಐಹೊಳೆಯಲ್ಲಿ ಚಿಕ್ಕದು ದೊಡ್ಡದು ಸೇರಿ ಸುಮಾರು 125 ದೇವಾಲಯಗಳಿವೆ,ಇವುಗಳನ್ನು ರಾಜ್ಯ ಪುರಾತತ್ವ ಇಲಾಖೆಯು 22 ಗುಂಪುಗಳಾಗಿ ವಿಂಗಡಿಸಿದೆ.ಇವು ಈ ಗ್ರಾಮದ ಕೋಟೆಯ ಆವರಣದ ಹೊರಗೆ ಮತ್ತು ಒಳಗೆ  ಅದರ ಸುತ್ತಮುತ್ತಲ ಪ್ರದೇಶಗಳಲ್ಲಿ ಹರಡಿಕೊಂಡಿವೆ,

ಈ ಗ್ರಾಮವನ್ನು ಐಯ್ಯಾಹೊಳೆ ಆರ್ಯಪುರ ಎಂದು ಗುರುತಿಸಲಾಗಿದೆ.ಆರ್ಯ ಎಂದರೆ ಗುರುಗಳು ಅಥವ ಆಚಾರ್ಯರು ಇಲ್ಲಿ ಹಚ್ಚಾಗಿ ವಾಸಿಸುತ್ತಿದ್ದರಿಂದ ಆರ್ಯಪುರ ಎಂದೂ, ಪರಶುರಾಮನು ಕ್ಷಾತ್ರವಧೆ ಮುಗಿಸಿದ ನಂತರ ಇಲ್ಲಿಗೆ ಬಂದು ಮಲಪ್ರಭ ನದಿಯಲ್ಲಿ ತನ್ನ ಆಯುಧವನ್ನು ತೊಳೆದಾಗ ನೀರೆಲ್ಲ ಕೆಂಪಾಯಿತು.ಆ  ಸಂದರ್ಭದಲ್ಲಿ ನದಿಗೆ ನೀರು ತರಲು ಬಂದ ಸ್ತ್ತ್ರೀಯರು ನರೆಲ್ಲ ಕೆಂಪಾಗಿರುವುದನ್ನು ಕಂಡು ಅಯ್ಯಯ್ಯೌ ಹೊಳೆ ಐಯ್ಯಾ ಹೊಳೆ  ಎಂದು ಉದ್ಗರಿಸಿದರಂತೆ ಹೀಗಾಗಿ ಐಯ್ಯಾಹೊಳೆ ಎಂಬ ಹೆಸರು ಬಂತೆಂದು ಹೇಳುವರು.

ಕಲಾ  ಇತಿಹಾಸದಲ್ಲಿ ಇದನ್ನು ವಾಸ್ತುಶಿಲ್ಪಗಳ ತೊಟ್ಟಿಲು ಎಂದು ಕರೆಯಲಾಗಿದು,್ದಇಮ್ಮಡಿ ಪುಲಕೇಶಿ ಆಸ್ಥಾನದ ಕವಿ ರವೀಕೀರ್ತಿಯು ಬರೆದಿರುವ ಶಾಸನ(ಕ್ರಿ,ಶ,635) ಇಲ್ಲಿದೆ. ಚಾಲುಕ್ಯರ ಕಾಲದಲ್ಲಿ ಇದು ಪ್ರಮುಖ ವಿದ್ಯಾಕೇಂದ್ರ ಹಾಗೂ ವ್ಯಾಪಾರ ವಾಣಿಜ್ಯ ಕೇಂದ್ರವಾಗಿತ್ತು.

ಐಹೊಳೆಯ ಪ್ರಮುಖ ದೇವಾಲಯಗಳೆಂದರೆ ದುರ್ಗಾ ದೇವಾಲಯ,(ಇದರ ತಳವಿನ್ಯಾಸ ಕುದುರೆ ಲಾಳಾಕಾರದಲ್ಲಿದೆ) ರವೀಕೀರ್ತಿ ಯ ಮೇಗುತಿ ದೇವಾಲಯ.ಶಿವ ದೇವಾಲಯ (ಹುಚ್ಚಮಲ್ಲಿ ಗುಡಿ) ಬೌದ್ದ,ಜೈನ.ಹಿಂದೂ ದೇವಾಲಯ ಗಳು.ಲಾಡಖಾನ್ ಗುಡಿ.ಕುಂತಿ ಗುಡಿ,ಮಲ್ಲಿಕಾರ್ಜುನ ಗುಡಿ .ಮೊದಲಾ ದವು ಗಮನಾರ್ಹವಾಗಿವೆ. ಈ ದೇವಾಲಯಗಳಲ್ಲದೇ 3 ಗುಹಾ ದೇವಾಲಯಗಳು ಇಲ್ಲಿವೆ, ಅವುಗಳಲ್ಲಿ ಪ್ರಖ್ಯಾತವಾಗಿರುವವು ರಾವಣನ ಪಡಿ ಎಂಬುದು. ದೊಡ್ಡ ಮರಳುಗಲ್ಲು ಬಂಡೆಯ ಮೇಲೆ ಒಂದು ಪಾರ್ಶ್ವದಲ್ಲಿ ಕೊರೆದಿರುವ ಈ ಗುಹೆಯು ಶೈವ ದೇವಾಲಯವಾಗಿದೆ.

ಇಲ್ಲಿನ ಶಿವ ವಿಷ್ಣು ದೇವಾಲಯವು ಕ್ರಿ.ಶ.ಐದನೆಯ ಶತಮಾನದ ಮದ್ಯಭಾಗದಲ್ಲಾಗಿರಬಹುದು.ಈ ದೇವಾಲಯದ ಶಿಖರ ಗಭಗೃಹದ ಮೇಲಿರದೆ ಮಧ್ಯಭಾಗದಲ್ಲಿದೆ.ಇದರ ಕಂಬಗಳು ಬೃಹದಾಕಾರವಾಗಿಯೂ ಚಚ್ಚೌಕಾರವಾಗಿಯೂ ಕೆಲವು ಒರಟಾಗಿಯೂ ಇನ್ನು ಕೆಲವು ದುಂಡಾಗಿಯೂ ಇವೆ.ಇನ್ನು ದುರ್ಗಾ ದೇವಾಲಯವನ್ನು ಗಮನಿಸಿದರೆ ಈ ದೇವಾಲಯದ ಹಿಂಬದಿ ಲಾಳಾಕಾರ ದಲ್ಲಿದೆ.ದೇವಾಲಯದ ಮದ್ಯಭಾಗದಲ್ಲಿ ಎರಡು ಕಂಬಾಲುಗಳಿವೆ.ಈ ಕಂಬ ಸಾಲುಗಳ ಹಜಾರವು ಗರ್ಭಗೃಹದ ಹಿಂಬದಿಯವರೆಗೂ ಮುಂದುವರೆದು ಅರ್ಧವೃತ್ತಾಕಾರದಲ್ಲಿ ಅಂತ್ಯಗೊಂಡಿದೆ.ಇನ್ನು ಹುಚ್ಚಮಲ್ಲಿ ಗುಡಿಯು ಪ್ರದಕ್ಷಿಣ ಮಂಟಪ ಇಲ್ಲದ ಒಂದು ಸರಳ ರಚನೆಯಾಗಿದ್ದು ಆಕಾರದಲ್ಲಿ ಬಲು ಚಿಕ್ಕದು ಇದು ಸುಮಾರು ನಾಲ್ಕು ಅಡಿ ಎತ್ತರದ ತಳಹದಿಯ ಮೇಲೆ ರಚಿತವಾಗಿದ್ದು,ಪಶ್ಚಿಮದ ಕಡೆ ಮುಖ ಮಾಡಿರುವುದೇ ಇದರ ವಿಶೇಷ.ಇಲ್ಲಿನ ಮೇಗುತಿ ದೇವಾಲಯವು ಇಮ್ಮಡಿ ಪುಲಕೇಶಿಯ ಆಸ್ಥಾನ ಕವಿ ರವೀಕೀರ್ತಿ ನರ್ಮಿಸಿದ್ದು ಇಲ್ಲಿ ಐಹೊಳೆ ಶಾಸನವಿದೆ,ಇಲ್ಲಿ ಗರ್ಭಗೃಹದ ಮುಂದಿನ ರಂಗಮಂಟಪ ಮತ್ತು ಮುಖಮಂಟಪದ ಕಂಬಗಳು ದ್ರಾವಿಡ ಶೈಲಿಯಲ್ಲಿವೆ. ಇಲ್ಲಿರುವ ಒಂದೊಂದು ಶಿಲ್ಪವೂ ಸೌಂದರ್ಯಕ್ಕೆ ಭಾವರಸ ನರೂಪಣೆಗೆ ಹೆಸರುವಾಸಿ. ಒಟ್ಟಾರೆ ಇಲ್ಲಿ ರೂಪಿತವಾದ ವಾಸ್ತುಶಿಲ್ಪ ಜಗತ್ತಿನೆಲ್ಲೆಡೆ ಗಮನಸೆಳೆದಿದೆ.ಇಡೀ ದಕ್ಷಿಣ ಭಾರತದಲ್ಲೇ ಐಹೊಳೆ ಪ್ರಸಿದ್ದ ವರ್ತಕ ಶ್ರೇಣಿಯ ಕೇಂದ್ರವಾಗಿ ಇದನ್ನು ಐಯ್ಯಾವೊಳೆ 500 ಎಂದೂ ಕರೆಯಲಾಗುತ್ತಿತ್ತು,ಈ ಸಂಘದಲ್ಲಿ 500 ಸದಸ್ಯರಿದ್ದರು.ಇದು ಚಾಲುಕ್ಯರ ರಾಜಧಾನಿಯಾಗಿದ್ದುದರಿಂದ ಕಂಚಿ.ತಂಜಾವೂರು ಉರಗಪುರ ಕುಂಭಕೋಣಂ ಕಾವೇರಿ ಪಟ್ಟಣಂ ಚೇರನಾಡಿನ ಕಡಂಗಲ್ಲೂರು ಮೊದಲಾದ ಕಡೆಗೆ ಅದರ ಶಾಖೆಗಳಿದ್ದವು ಎಂಬುದು ಇತಿಹಾಸದ ಪುಟಗಳಿಂದ ತಿಳಿದು ಬರುತ್ತದೆ. ದೇವಾಲ ಯಗಳ ತೊಟ್ಟಿಲು ಎಂದು ಕರೆಯಲ್ಪಡುವ ಐಹೊಳೆಯ ಚರಿತ್ರೆ ಅನನ್ಯವಾದುದು ಇತಿಹಾಸದ ಓದುಗರೊಮ್ಮೆಯಾದರೂ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಮೂಲಕ ಇಲ್ಲಿನ ಕಲೆ.ವಾಸ್ತುಶಿಲ್ಪದ ವೈಭವವನ್ನು  ಸವಿಯಬೇಕು.

 

loading...

LEAVE A REPLY

Please enter your comment!
Please enter your name here