ವಿದ್ಯಾರ್ಥಿಗಳು ವೃತ್ತಿ ಕೌಶಲ್ಯ ಬೆಳಸಿಕೊಳ್ಳಬೇಕು

0
7
loading...

ೆಳಗಾವಿ, 13-  ವೃತ್ತಿಪರ ಕೋರ್ಸಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಒಳ್ಳೆಯ ನಡತೆ ಹಾಗೂ ಜಾಗತಿಮಟ್ಟದ ತಿಳುವಳಿಕೆಯನ್ನು ಪಡೆಯುವುದರ ಜೊತೆಗೆ ಉತ್ತಮ ಗುಣಮಟ್ಟದ ವೃತ್ತಿ ಕೌಶಲ್ಯಗಳನ್ನೂ ಬೆಳಸಿಕೊಳ್ಳುವುದು ಪ್ರಸ್ತುತ ಸ್ಪರ್ಧತ್ಮಕ ಜಗತ್ತಿನಲ್ಲಿ ಅನವಾರ್ಯ ಎಂದು ಬೆಂಗಳೂರಿನ ಪ್ರಸಿದ್ಧ ವರ್ನಾಜ್ ತಾಂತ್ರಿಕ ಸಂಸ್ಥೆಯ ನಿರ್ದೇಶಕರು ಹಾಗೂ ರಿಶೇಷನ್ ಬುಸ್ಟ್ರ್ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಯಾದ ರಾಮನ ವೆಂಕಟ್ ಅವರು ಹೇಳಿದ್ದಾರೆ.

ನಗರದ ಪ್ರತಿಷ್ಠಿತ ಜೆಜಿಐ ಸಂಸ್ಥೆಯು ಪ್ರಸಕ್ತ ಶೈಕ್ಷಣಿಕ ಸಾಲಿನಂದ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಅಡಿಯಲ್ಲಿ ಪ್ರಾರಂಭಿಸಲಾದ ಎಂಸಿಎ ಪದವಿ ಪ್ರಾರಂಭೋತ್ಸವವನ್ನು ಸೋಮವಾರ ದಿ.10.10.11ರಂದು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ವಿದ್ಯಾರ್ಜನೆಯ ನಂತರ ಹೊರಜಗತ್ತಿನಲ್ಲಿ ಉದ್ಯೌಗಾವಕಾಶವನ್ನು ಪಡೆದುಕೊಳ್ಳಬೇಕದರೆ, ಸೇವಾಮನೋಭಾವದ ವರ್ತನೆಗಳನ್ನು ಬೆಳೆಸಿಕೊಳ್ಳುವುದ ಮೂಲಭೂತ ಅವಶ್ಯಕೆತಯಾಗಿದೆ ಎಂದು ರಾಮನ ವೆಂಕಟ್ ಅವರು ಸೂಚಿಸಿದರು.

ಜೆಜಿಐ ಸಂಸ್ಥೆಯ ಕುಲಪತಿ ಪ್ರೊ. ಕೆ.ಜಿ.ಮಳಲಿ ಅವರು ಮಾತನಾಡಿ, ವಿದ್ಯಾರ್ಥಿಗಳು ಆಧುನಕ ಜಗತ್ತಿನ ಬೆಳವಣಿಗೆ ಸಂಪೂರ್ಣ ತಿಳುವಳಿಕೆ ಪಡೆಯಲು ಮುಂದಾಗಬೇಕೆಂದು ಕರೆ ನಡಿದರು. ಜೆಜಿಐ ಹೆರಟೆಜ್ ಸ್ಕೂಲಿನ ನರ್ದೇಶಕಿ ಶ್ರದ್ದಾ ಕೆ. ಅವರು, ವಿದ್ಯಾಥಿಗಳ ಸಾಧನೆಗೆ ಜೆಜಿಐ ಸಂಸ್ಥೆಯ ಉತ್ತಮ ಪ್ರೌತ್ಸಹ ನಡುತ್ತಲಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಸಾಧಿಸಿಬೇಕೆನ್ನುವವರಿಗೆ ಐಟಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ನಾರಾಯಣ ಮೂರ್ತಿ ಹಾಗೂ ಅಜೀಮ್ ಪ್ರೇಮಜಿರಂಥವರ ಸಾಧನೆ ಮಾರ್ಗವನ್ನು ಅನುಸರಿಸಬೇಕೆಂದು ಸೂಚಿಸಿದರು. ಜೆಜಿಐ ಎಂಬಿಎ- ಎಂಸಿಎ ಕಾಲೇಜಿನ ನರ್ದೇಶಕರಾದ ಪ್ರೊ. ಉದಯಚಂದ್ರ ಅವರು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಾಂತ್ರಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ವಿಶೇಷ ಅಧ್ಯತೆ ನಡುತ್ತಿದ್ದು, ಉದ್ಯೌಗದ ದೃಷ್ಟಿಯಿಂದ ವಿದ್ಯಾರ್ಥಿಗಳು ತಾಂತ್ರಿಕತೆಯ ಅಧ್ಯಯನ ಕೈಕೊಳ್ಳದೆ, ಮಹತ್ವದ ಸಾಧನೆಯ ಗುರಿಯನ್ನು ಹೊಂದಿರಬೇಕೆಂದು ಹೇಳಿದರು.

ಉತ್ತರ ಕರ್ನಾಟಕ ಜೆಜಿಐ ಸಂಸ್ಥೆಯ ಮುಖ್ಯ ಕಾರ್ಯ ನರ್ವಾಹಕಾಧಿಕಾರಿ ರಾಧೆಶ್ಯಾಮ ಹೆಡಾ ಹಾಗೂ ನರ್ದೇಶಕ ಪ್ರೊ. ಆರ್.ಜಿ.ದಾರವಾಡಕರ ಅವರು ಉಪಸ್ಥಿತರಿದ್ದರು. ಪ್ರೊ. ಉದಯಚಂದ್ರ ಸ್ವಾಗತಿಸಿದರು. ಪ್ರೊ. ಪ್ರೇಮಲತಾ ಭಾತೆ ಪರಿಚಯಿಸಿದರು. ಪ್ರೊ. ಶುಭಾಷ ಪಾಟೀಲ ವಂದಿಸಿದರು.

loading...

LEAVE A REPLY

Please enter your comment!
Please enter your name here