ವಿದ್ಯುತ್ ಪೂರೈಸಲು ಕುಂಟು ನೆಪ : ಆರೋಪ

0
23
loading...

ಚನ್ನಮ್ಮನ ಕಿತ್ತೂರು 18- ರಾಜ್ಯದಲ್ಲಿನ ವಿದ್ಯುತ್ ಕಡಿತಕ್ಕೆ ಕಲ್ಲಿದ್ದಲು ಪೂರೈಸಲು ತೋರುತ್ತಿರುವ ಕೇಂದ್ರದ ಅಸಹಕಾರವೇ ಕಾರಣವೆಂದು ಮುಖ್ಯ ಮಂತ್ರಿ ಸದಾನಂದಗೌಡಾ ಹಾಗೂ ಇಂಧನ ಸಚಿವೆ ಹೇಳುತ್ತಿರುವದು ಕೇವಲ ಕುಂಟು ನೆಪ ಎಂದು ರೈತ ಹಿತರಕ್ಷಣಾ ಸಮಿತಿ ಬಾಬಾಗೌಡ ಪಾಟೀಲ ಆರೋ ಪಿಸಿದ್ದಾರೆ.

ಕಿತ್ತೀರಿನ ಪ್ರವಾಸಿ ಮಂದಿರ ದಲ್ಲಿ ಸ್ಥಳೀಯ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತ ಸರಕಾರವು ಕೇವಲ ಆಂಧ್ರದ ತೆಲಾಂಗಣದಿಂದ ಕಲ್ಲಿದ್ದಲು ತರಿಸಿಕೊಳ್ಳುವುದರೊಂದಿಗೆ ನೆರೆಯ ಮಹಾರಾಷ್ಟ್ತ್ರ ಹಾಗೂ ಓರಿಸ್ಸಾ ರಾಜ್ಯಗಳಿಂದಲೂ ಖರೀದಿಸುತ್ತ ಬಂದಿದೆ. ತೆಲಾಂಗಣದಿಂದ ತೆಲಾಂಗಣ ದಿಂದ ತರದಿದ್ದರೂ ಇತರ ರಾಜ್ಯಗಳಿಂದ ಖರೀದಿಸಬಹುದಿತ್ತೆಂದರಲ್ಲದೇ ತೆಲಾಂಗಣ ಚಳವಳಿ ಮನ್ಸೂಚನೆ ಸರ್ಕಾರಕ್ಕೆ ತಿಳಿದಿದ್ದರೂ ಕೂಡ ಕಲ್ಲಿದ್ದಲು ಖರೀದಿಸಲು ಸರಕಾರ ಮುಂದಾಗ ಲಿಲ್ಲವೇಕೆ ಎಂದು ಪ್ರಶ್ನಿಸಿದರು.

ಕಚ್ಚಾ ಕಲ್ಲಿದ್ದಲು ಮರಳು ಮಾತ್ರ ಮಣ್ಣಿನ ಮಿಶ್ರಣದ ಪರಿಣಾಮ ದಿಂದಾಗಿ ಉತ್ಪಾದನಾ ಘಟಕಗಳು ಕೆಡುತ್ತ, ಈ ಮೊದಲು 550 ಮೆವ್ಯಾಟ ಉತ್ಪಾದಿಸುತ್ತಿದ್ದ ಈಟಕಗಳು ದಿನಕ್ಕೆ ಕೇವಲ 350 ಮೆವ್ಯಾಟ ವಿದ್ಯುತ್ ಉತ್ಪಾದಿಸಲು ಆರಂಭಿಸಿದವು. ಇದೆಲ್ಲಾ ಸರ್ಕಾರದ ಮೂರ್ಖತನದ ಪರಮಾ ವಧಿ ಎಂದು ಅವರು ಹೇಳಿದರು.

ವಿದ್ಯುತ್ ಅಭಾವದಿಂದ ಗ್ರಾಮೀಣ ಭಾಗದ ರೈತರು ಕುಡಿಯುವ ನೀರಿಗೂ ತಾತ್ಸಾರ ಎದುರಿಸಬೇಕಾಗಿದೆ. ಅಲ್ಲದೇ ಪರದಾಡುವಂತಾಗಿದೆ. ಗಿರಣಿಗಳು ಬಂದಾಗಿವೆ. ದನಗಳಿಗೆ ಮೇವಿನ ತೊಂದರೆ ಉಂಟಾಗಿದೆ.

ಈಗ ರೈತರು ಕೊಳವೆ ಬಾವಿಗಳನ್ನು ಅವಲಂಬಿಸಿದ್ದು ವ್ಯವ ಸಾಯಕ್ಕೆ ವಿದ್ಯುತ್ ಪೂರೈಕೆ ಇಲ್ಲದೇ ತೊಂದರೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.

ರೈತರು ಪಂಪ್ಸೆಟ್ ಲೈನ್ಗಳಿಗಾಗಿ ಲಕ್ಷಾಂತರ ರೂ. ಸಾಲ ಮಾಡಿದ್ದಾರೆ. ವಿದ್ಯುತ್ ಕೊರತೆಯಿಂದ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.

ಹೀಗಾಗಿ ಸರಕಾರ ಎಚ್ಚೆತ್ತು ಕೊಂಡು ತೆಲಾಂಗಣದ ಕುಂಟುನೆಪ ಬಿಟ್ಟು ಉಳಿದ ರಾಜ್ಯಗಳಿಂದ ಕಲ್ಲಿದ್ದಲು ಖರೀದಿಸಿ ವಿದ್ಯುತ್ ಕೊರತೆ ನಿವಾರಣೆ ಮಾಡಬೇಕೆಂದು ಬಾಬಾಗೌಡಾ ಒತ್ತಾಯಿಸಿದ್ದಾರೆ.

loading...

LEAVE A REPLY

Please enter your comment!
Please enter your name here