ವೀರರಾಣಿ ಕಿತ್ತೂರು ಚೆನ್ನಮ್ಮಾ ಜ್ಯೌತಿಗೆ ಭವ್ಯ ಸ್ವಾಗತ

0
16
loading...

 

ಹಾವೇರಿ.ಅ.16ಃ ವೀರರಾಣಿ ಕಿತ್ತೂರು ಚೆನ್ನಮ್ಮನ

ವೀರಜ್ಯೌತಿ ಹಾವೇರಿ ಜಿಲ್ಲೆಗೆ ಭಾನುವಾರ ಬೆಲಿಗ್ಗೆ

ಪ್ರವೇಶಿಸುತ್ತಿದ್ದಂತೆ ಜಿಲ್ಲಾಡಳಿತ, ಸಾರ್ವಜನಿಕರು ಶಿಗ್ಗಾಂವಿ

ತಾಲೂಕಿನ ತಡಸದಲ್ಲಿ ಚೆನ್ನಮ್ಮ ಜ್ಯೌತಿಗೆ ಭವ್ಯವಾಗಿ

ಸ್ವಾಗತಿಸಿದರು.

ನಂತರ ಶಿಗ್ಗಾಂವಿಯ ಶರೀಪ ಶಿವಯೋಗಿಗಳ

ಮೈದಾನದಲ್ಲಿ ಏರ್ಪಡಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ

ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಹಿರಿಯ ಸಾಹಿತಿ

ಹಾಗೂ ನಿವೃತ್ತ ಪ್ರಾಚಾರ್ಯ ಬ.ಫ.ಯಲಿಗಾರ ಮಾತನಾಡಿ,

ಬಿಚಿಟಿಷಂರಂಂ ನಮ್ಮಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸುವ ಮೂಲಕ

ಅದರ ಸಂಪೂರ್ಣ ಲಾಭವನ್ನು ಪಡೆಯುತ್ತಿದ್ದರು. ಇಂತಹ

ಕುತಂತ್ರದಿಂದ ಬಿಚಿಟಿಷಂರಂಂ ನೂರಾರು ವಂಷಂಜಗಂಳ ಕಾಲ

ನಮ್ಮನ್ನು ಆಳ್ವಿಕೆ ಮಾಡಿದ್ದಾರೆ. ಆದರೆ ವೀರ ರಾಣಿ ಕಿತ್ತೂರ

ಚನ್ನಮ್ಮನ ಶೌರ್ಯ ಹಾಗೂ ದೈರ್ಯದ ಮುಂದೆ ಇಂತಹ

ಕುತಂತ್ರ ನಡೆಯದೆ ಯುದ್ಧದಲ್ಲಿ ಸೋತು ಭಾರತವನ್ನು

ಬಿಟ್ಟು ಹೋಗುವಂತಾುತು. ಇಂತಹ ಮಹಾತ್ಮರ

ಇತಿಹಾಸವನ್ನು ಅವರ ಚರಿತ್ರೆಗಳನ್ನು ಪಠ್ಯದಲ್ಲಿ ಬೋಧನೆ

ಮಾಡುವ ಮೂಲಕ ಮಕ್ಕಳಲ್ಲಿ ಅವರ ಆದರ್ಶಗಳನ್ನು

ಮೂಡಿಸಬೇಕು ಎಂದು ತಿಳಿಸಿದರು.

ಕಾಡಾ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ,

ನಾಡಿನ ಪ್ರತಿಯೊಬ್ಬರಲ್ಲಿ ಸ್ವಾತಂತ್ರ ಸಂಗ್ರಾಮದ ಕಿಚ್ಚು ಹಚ್ಚುವ

ಮೂಲಕ ರಾಣಿ ಚನ್ನಮ್ಮ ಸ್ವಾತಂತ್ರ ಹೋರಾಟಕ್ಕೆ ಭುನಾದಿ

ಹಾಕಿದರು. ಅಲ್ಲದೇ ಧ್ವನಿ ಮಾತನಾಡುವ ಶಕ್ತಿ, ಸಾಮರ್ಥ್ಯ

ತುಂಬುವುದರ ಜೊತೆಗೆ ಸ್ವಾತಂತ್ರ ಹೋರಾಟದಲ್ಲಿ

ಭಾಗವಹಿಸಿದ ಪ್ರಥಮ ಮಹಿಳೆ ಎನ್ನಿಕೊಂಡಳು ಎಂದು

ಹೇಳಿದರು.

ಹಾವೇರಿ ಜಿ.ಪಂ.ಅಧ್ಯಕ್ಷ ಮಂಜುನಾಥ ಓಲೇಕಾರ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಿಚಿಟಿಷಂರಂ ವಿರುದ್ಧ

ಸ್ವಾತಂತ್ರದ ಹೋರಾಟಕ್ಕೆ ಕಹಳೆ ಊದಿದ ಹೆಗ್ಗಳಿಗೆ ನಮ್ಮ

ಗಂಡು ಮೆಟ್ಟಿನ ಉತ್ತರ ಕರ್ನಾಟಕದಾಗಿದೆ. ಮಹಾನ್

ನಾಯಕರ ತ್ಯಾಗ, ಬಲಿದಾನದಿಂದ ಈ ಸ್ವತಂತ್ರತೆಯನ್ನು

ಅನುಭವಿಸುವಂತಾಗಿದೆ. ಹೀಗಾಗಿ ಅವರ ಆದರ್ಶ

ತತ್ವಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು

ಹೇಳಿದರು.

ಜಿ.ಪಂ.ಸದಸ್ಯ ಬಿ.ಟಿ.ಇನಾಮತಿ ಪ್ರಾಸ್ತಾವಿಕವಾಗಿ

ಮಾತನಾಡಿದರು. ತಾ.ಪಂ.ಅಧ್ಯಕ್ಷ ವೀರನಗೌಡ ಪಾಟೀಲ

ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಇಂದ್ರಮ್ಮಾ

ಹಾವೇರಿ, ಜಿ.ಪಂ.ಸದಸ್ಯರಾದ ಸಿ.ಎಸ್.ಪಾಟೀಲ, ಶಶಿಧರ

ಹೊನ್ನಣ್ಣವರ, ಸರೋಜಾ ಆಡಿನ, ಪುರಸಭೆ ಉಪಾಧ್ಯಕ್ಷೆ

ಜಯಶೀಲಾ ಶ್ಯಾಡಂಬಿ, ತಾಲೂಕು ಕಸಾಪ ಅಧ್ಯಕ್ಷ

ಶಂಕರಗೌಡ್ರ ಪಾಟೀಲ, ಮಂಜುನಾಥ ವಾಲೀಕಾರ, ಎಚ್.

ಆರ್.ದುಂಡಿಗೌಡ್ರ, ಸಿದ್ದರಾಜ ಕಲಕೋಟಿ, ತಹಸೀಲ್ದಾರ

ಕೋಟ್ರೇಶ, ಪುರಸಭೆ ಸದಸ್ಯರಾದ ಶ್ರೀಕಾಂತ ಬುಳ್ಳಕ್ಕನರ,

ವೀರಣ್ಣ ಬಡ್ಡಿ, ಶ್ರೀಕಾಂತ ಮಾಡಿಕ, ಮಂಜುನಾಥ

ಮಣ್ಣಣ್ಣವರ, ಎಸ್.ಎನ್.ಮುಗಳಿ, ತಾ.ಪಂ.ಕಾರ್ಯನಿರ್ವಾಹಕ

ಅಧಿಕಾರಿ ಬಿ.ರೇವಣ್ಣ, ಪುರಸಭೆ ಮುಖ್ಯಾಧಿಕಾರಿ

ಎಸ್.ಬಿ.ಪಾಟೀಲ, ಎಸ್.ಕೆ.ಅಕ್ಕಿ, ಭರಮಗೌಡ್ರ ಪಾಟೀಲ,

ಸಾಹಿತಿ ಶಿವಾನಂದ ಮ್ಯಾಗೇರಿ ಮತ್ತಿತರರು ಉಪಸ್ಥಿತರಿದ್ದರು.

ಕಲಾವಿದರಾದ ಬಸವರಾಜ ಶಿಗ್ಗಾಂವಿ, ವಿರೇಶ ಬಡಿಗೇರ

ಸಂಗಡಿಗರು ಸಂಗೀತ ಕಾರ್ಯಕ್ರಮ ನೀಡಿದರು. ಬಾಲಕ

ಶರಣಬಸಪ್ಪಶಿಗ್ಗಾಂವಿ ಚನ್ನಮ್ಮನ ಕ್ರಾಂತಿ ಗೀತೆಗಳನ್ನು

ಹಾಡಿದರು. ಬಿಇಓ ಡಾ.ಬಿ.ಕೆ.ಎಸ್.ವರ್ಧನ ಸ್ವಾಗತಿಸಿದರು.

ಶಿಕ್ಷಕ ಎಸ್.ಕೆ.ಹೂಗಾರ ನಿರೂಪಿಸಿದರು. ಎಸ್.ಎಮ್.ದೇವತಿ

ವಂದಿಸಿದರು

 

loading...

LEAVE A REPLY

Please enter your comment!
Please enter your name here